Uncategorizedಬೆಂಗಳೂರು

ಮನೆಗಳ ನಿರ್ಮಾಣಕ್ಕೆ ವಸತಿ ಯೋಗ್ಯ ಜಮೀನು ಲಭ್ಯವಾಗಿಲ್ಲ

ಬೆಂಗಳೂರು: ವಸತಿ ಯೋಗ್ಯ ಹಾಗೂ ವಿವಾದರಹಿತ ಜಮೀನು ದೊರೆಯದ ಕಾರಣದಿಂದಾಗಿ ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೂರು ಒದಗಿಸುವ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ ಹಿನ್ನೆಡೆಯಾಗಿದೆ.

ಕಂದಾಯ ಇಲಾಖೆಯಿಂದ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ 593 ಎಕರೆ ಭೂಮಿ ನೀಡಲಾಗಿದೆ. ಎರಡು ಹಂತಗಳಲ್ಲಿ 60,831 ಮನೆಗಳ ನಿರ್ಮಾಣಕ್ಕಾಗಿ 493 ಎಕರೆ ಜಮೀನನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದ್ದು, ಕಾಮಗಾರಿಯೂ ಪ್ರಾರಂಭವಾಗಿದೆ. ಆದರೆ, 39,169 ಮನೆಗಳ ನಿರ್ಮಾಣಕ್ಕೆ ವಸತಿ ಯೋಗ್ಯ ಜಮೀನು ಲಭ್ಯವಾಗಿಲ್ಲ.

ವಸತಿ ಇಲಾಖೆಗೆ ಕಂದಾಯ ಇಲಾಖೆಯು ವಸತಿ ಯೋಗ್ಯ ಭೂಮಿಯ ಬದಲಾಗಿ ಕಲ್ಲು ಕ್ವಾರೆ ಹಾಗೂ ವಿವಾದವುಳ್ಳ ಭೂಮಿಯನ್ನು ನೀಡುತ್ತಿದೆ. ಇಲ್ಲದಿದ್ದರೆ ಬೆಂಗಳೂರು ಹೊರ ವಲಯದಲ್ಲಿ ಭೂಮಿ ನೀಡುವುದಾಗಿ ಹೇಳುತ್ತಿದೆ.

ಈ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಿದರೆ ನಿವಾಸಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ, ಸೂಕ್ತವಾದ ಭೂಮಿ ಕೊರತೆಯಿಂದಾಗಿ ಒಂದು ಲಕ್ಷ ಮನೆಗಳ ನಿರ್ಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ,” ಎಂದು ಮೂಲಗಳು ತಿಳಿಸಿವೆ.

ಆರ್ಥಿಕವಾಗಿ ಹಿಂದುಳಿದವರು ಹಾಗೂ ದುರ್ಬಲ ವರ್ಗದವರಿಗಾಗಿಯೇ ಪ್ರಧಾನ ಮಂತ್ರಿಗಳ ಆವಾಸ್‌ ಯೋಜನೆಯಡಿ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ’ ಸೆ. 7ರಂದು 1200 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ವಸತಿ ಇಲಾಖೆ ನಿರ್ಧರಿಸಿದೆ. ಇದೇ ತಿಂಗಳು ಸಿದ್ಧವಾಗಿರುವ ಉಳಿದ 380 ಮನೆಗಳನ್ನು ಹಸ್ತಾಂತರಿಸುವುದಾಗಿ ನಿಗಮ ತಿಳಿಸಿದೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ಬಹುಮಹಡಿ ಮನೆಗಳಿಗೆ ಆಗಸ್ಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದುವರೆಗೂ ಸಿಂಗಲ್‌ ಬೆಡ್‌ರೂಮ್‌ ಮನೆಗಳಿಗಾಗಿ 44,959 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇದರಲ್ಲಿ 8,928 ಮಂದಿ ಅರ್ಹ ಫಲಾನುಭವಿಗಳು ನಿಗದಿಪಡಿಸಿರುವ ಪ್ರಾರಂಭಿಕ ಠೇವಣಿ ಮೊತ್ತ ಪಾವತಿಸಿದ್ದಾರೆ. ಇನ್ನು 6,686 ಫಲಾನುಭವಿಗಳು ಆನ್‌ಲೈನ್‌ ಮೂಲಕ ಫ್ಲ್ಯಾಟ್‌ (ಮನೆಗಳು)ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಲ್ಲದೇ, ಫಲಾನುಭವಿಗಳಿಗೆ ವಂತಿಕೆ ಮೊತ್ತದ ಭಾಗವಾಗಿ ಪ್ರತಿ ಫಲಾನುಭವಿಗೆ ಐದು ಲಕ್ಷ ರೂ.ವರೆಗೆ ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತದೆ ಎಂದು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ತಿಳಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1 ಬಿಎಚ್‌ಕೆ ಮನೆ- 7.10 ಲಕ್ಷ ರೂ.ಹಿಂದುಳಿದ ವರ್ಗದವರಿಗೆ 1 ಬಿಎಚ್‌ಕೆ 7.90 ಲಕ್ಷ ರೂ.2 ಬಿಎಚ್‌ಕೆ ಮನೆ 14 ಲಕ್ಷ ರೂ.

ಸೆ.7ಕ್ಕೆ 1102 ಮನೆಗಳ ಹಸ್ತಾಂತರ

ಯಲಹಂಕ ವಿಧಾನಸಭಾ ಕ್ಷೇತ್ರದ ಅಗ್ರಹಾರ ಪಾಳ್ಯ-385 ಮನೆಗಳು

ಪಿಲ್ಲಹಳ್ಳಿ -196 ಮನೆಗಳು

ಸಾದೇನಹಳ್ಳಿ- 128ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ನವರತ್ನ ಅಗ್ರಹಾರ -140ಆನೇಕಲ್‌ ವಿಧಾನಸಭಾ ಕ್ಷೇತ್ರದ ಕೂಗೂರು – 253ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಸೇರಿದಂತೆ ಇತರೆಡೆ ಸಿದ್ಧವಾಗಿರುವ 478 ಮನೆಗಳನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುತ್ತದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button