ಮಧ್ಯರಾತ್ರಿ ದ್ವಾರಕೆಯ ಶ್ರೀಕೃಷ್ಣನ ದರ್ಶನ ಪಡೆದ ಗೋವುಗಳು

ನಮ್ಮ ದೇಶದಲ್ಲಿ ದೇವರ ಮೇಲಿನ ನಂಬಿಕೆ-ಭಕ್ತಿ ಮನುಷ್ಯರಲ್ಲದೆ ಪ್ರಾಣಿ- ಪಕ್ಷಿಗಳಲ್ಲೂ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇಂತಹದ್ದೇ ಒಂದು ವಿಶಿಷ್ಟ ಘಟನೆ ಪವಿತ್ರ ಶ್ರೀಕೃಷ್ಣನ ದೇಗುಲವಿರುವ ದ್ವಾರಕಾದಲ್ಲಿ ನಡೆದಿದೆ.ಸುಮಾರು 25 ಹಸುಗಳು 450 ಕಿ.ಮೀ.
ನಡೆದು ಬಂದು ಶ್ರೀಕೃಷ್ಣನಿಗೆ ನಮಿಸಿದ ಘಟನೆ ಇದು. ದೇವರ ದರ್ಶನಕ್ಕಾಗಿ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನ ತೆರೆಯಲಾಯಿತು. ಹಸುಗಳು ದೇವರ ದರ್ಶನ ಪಡೆದ ನಂತರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದವು. ದೇಗುಲದ ಆಡಳಿತ ಮಂಡಳಿಯಿಂದ ಗೋವುಗಳಿಗೆ ಪ್ರಸಾದದ ಜತೆಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ದೇವರ ದಯೆಯಿಂದ ಗೋವುಗಳ ಪ್ರಾಣ ಉಳಿಯಿತು ಎಂಬ ನಂಬಿಕೆ ಸತ್ಯವಾಯಿತು.ಸುಮಾರು ಎರಡು ತಿಂಗಳ ಹಿಂದೆ ಕಛ್‍ನಲ್ಲಿ ವಾಸಿಸು ತ್ತಿದ್ದ ಮಹದೇವ ದೇಸಾಯಿ ಅವರ 25 ಹಸುಗಳು ಲಂಪಿ (ಚರ್ಮಗಂಟು ರೋಗ) ಎಂಬ ವೈರಸ್‍ಗೆ ತುತ್ತಾಗಿ ದ್ದವು. ಈ ಸಮಯದಲ್ಲಿ ಇಡೀ ಸೌರಾಷ್ಟ್ರದಲ್ಲಿ ಸೋಂಕಿನಿಂದ ರಾಸುಗಳು ಸಾವನ್ನಪ್ಪುತ್ತಿದ್ದವು.
ಈ ಸಂದರ್ಭದಲ್ಲಿ ಮಹಾದೇವ್ ಅವರು ತನ್ನ ಹಸುಗಳನ್ನು ಗುಣಪಡಿಸಿದರೆ, ಈ ಹಸುಗಳೊಂದಿಗೆ ದ್ವಾರಕೆಗೆ ಬಂದು ಶ್ರೀ ಕೃಷ್ಣ ದರ್ಶನ ಮಾಡುವುದಾಗಿ ಹರಕೆ ಹೊತ್ತಿದ್ದರು.ಅದರಂತೆ ಪವಾಡವೋ, ಅದ್ಭುತವೋ ತಿಳಿಯುತ್ತಿಲ್ಲ. ಕೆಲವೇ ದಿನಗಳಲ್ಲಿ ಹಸುಗಳು ಗುಣಮುಖವಾದವು. ದೇವರೇ ಇದಕ್ಕೆ ಕಾರಣ ಎಂದು ಮಹಾದೇವ್ ನಂಬಿದರು.
ಸುಮಾರು 20 ದಿನ 25 ಹಸು ಗಳೊಂದಿಗೆ 450 ಕಿ.ಮೀ. ದೂರ ಕ್ರಮಿಸಿ ದ್ವಾರಕೆಗೆ ಕರೆತರಲಾಗಿತ್ತು. ದೇವಾಲಯದ ಮಂಡಳಿಗೂ ಈ ವಿಷಯ ತಿಳಿಸಿದ್ದು, ಅದರಂತೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂದು ಮಹದೇವ್ ಹೇಳಿದ್ದಾರೆ.ದೇವಾಲಯದ ಆಡಳಿತಕ್ಕೆ ಗೋವುಗಳ ಪ್ರವೇಶ ಸಂಬಂಧ ದೊಡ್ಡ ಸಮಸ್ಯೆಯಾಗಿತ್ತು.
ಇಲ್ಲಿ ದಿನವಿಡೀ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗೋವುಗಳ ಆಗಮನದಿಂದ ದೇವಸ್ಥಾನದ ವ್ಯವಸ್ಥೆ ಹದಗೆಡುತ್ತಿತ್ತು. ಅದಕ್ಕಾಗಿಯೇ ಮಧ್ಯರಾತ್ರಿ ದೇವಾಲಯವನ್ನು ತೆರೆಯಬೇಕು ಎಂದು ನಿರ್ಧರಿಸಲಾಯಿತು.ಶ್ರೀ ಕೃಷ್ಣನೂ ಗೋವುಗಳ ಭಕ್ತನಾಗಿದ್ದರಿಂದ ರಾತ್ರಿಯಲ್ಲೂ ಅವುಗಳಿಗೆ ದರ್ಶನ ನೀಡಬಹುದೆಂದು ಭಾವಿಸಲಾಗಿತ್ತು.
ಈ ಮೂಲಕ ರಾತ್ರಿ 12 ಗಂಟೆ ನಂತರ ದೇವಸ್ಥಾನದ ಬಾಗಿಲು ತೆರೆಯಲಾಯಿತು.ದ್ವಾರಕೆಯನ್ನು ತಲುಪಿದ ನಂತರ, ಹಸುಗಳು ಮೊದಲು ದ್ವಾರಕಾೀಧಿಶನನ್ನು ಭೇಟಿ ಮಾಡಿದವು ಮತ್ತು ದೇವಾಲಯವನ್ನು ಪ್ರದಕ್ಷಿಣೆ ಮಾಡಿದವು.
ಈ ವೇಳೆಯೂ ದೇವಸ್ಥಾನದ ಆವರಣದಲ್ಲಿ ಗೋವುಗಳನ್ನು ಸ್ವಾಗತಿಸಲು ಸಾಕಷ್ಟು ಮಂದಿ ಸೇರಿದ್ದರು.ದೇವರ ಪ್ರಸಾದವಲ್ಲದೆ ದೇವಸ್ಥಾನದ ಅರ್ಚಕರು ಮೇವು, ನೀರಿನ ವ್ಯವಸ್ಥೆ ಮಾಡಿದ್ದರು. ಇಲ್ಲಿದ್ದ ಹಲವು ಭಕ್ತರು ಈ ಅಮೋಘ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.