ರಾಜ್ಯ

ಮದುವೆಯಾಗಿ ನಾಲ್ಕು ತಿಂಗಳು, ಅವಳಿ ಮಕ್ಕಳಿಗೆ ತಾಯಿ-ತಂದೆಯಾದ ನಯನತಾರಾ, ವಿಘ್ನೇಶ್ ಶಿವನ್

ಮದುವೆಯಾದ ನಾಲ್ಕು ತಿಂಗಳಿಗೆ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ( Nayanthara ), ನಿರ್ದೇಶಕ ವಿಘ್ನೇಶ್ ಶಿವನ್ ಅವರು ( Vignesh Shivan ) ಅವಳಿ ಗಂಡು ಮಕ್ಕಳಿಗೆ ಪಾಲಕರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಸಿಹಿ ಸುದ್ದಿ ಹಂಚಿಕೊಂಡ ವಿಘ್ನೇಶ್ ಶಿವನ್ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡ ವಿಘ್ನೇಶ್ ಅವರು, “ನಯನ್ ಹಾಗು ನಾನು ಅಪ್ಪ ಅಮ್ಮನಾಗಿ ಬಡ್ತಿ ಪಡೆದಿದ್ದೇವೆ.

ನಮಗೆ ಅವಳಿ ಗಂಡು ಮಕ್ಕಳಾಗಿವೆ. ಪೂರ್ವಜರ ಆಶೀರ್ವಾದದೊಂದಿಗೆ ಎರಡು ಗಂಡು ಮಕ್ಕಳಾಗಿವೆ. ನಮ್ಮ ಉಯಿರ್ ಉಲಗಮ್‌ಗೆ ನಿಮ್ಮ ಆಶೀರ್ವಾದ ಬೇಕು. ಜೀವನ ತುಂಬ ಸುಂದರವಾಗಿದೆ” ಎಂದು ಹೇಳಿದ್ದಾರೆ.ನಯನತಾರಾ ದಂಪತಿಗೆ ಶುಭಾಶಯಗಳ ಸುರಿಮಳೆಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ನಯನತಾರಾ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ ಮದುವೆ ಟೀಸರ್ ರಿಲೀಸ್ ಆಗಿದ್ದು, ನೆಚ್ಚಿನ ನಟಿಯ ಮದುವೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಜೋಡಿ ಈ ವರ್ಷ ಮದುವೆಯಾಗ್ತಾರೆ, ಮುಂದಿನ ವರ್ಷ ಮದುವೆಯಾಗ್ತಾರೆ ಎಂದು ಕೆಲ ವರ್ಷಗಳಿಂದ ಅಭಿಮಾನಿಗಳು ಕಾದು ಕೂತಿದ್ದರು, ಅಂತೂ ಈ ವರ್ಷ ನಯನತಾರಾ ಮದುವೆಯಾಗಿದ್ದಾರೆ.

ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಜೂನ್ 9ರಂದು ಬೆಳಗ್ಗೆ 8:30ಕ್ಕೆ ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದರು.

ಐಷಾರಾಮಿ ಹೋಟೆಲ್‌ನಲ್ಲಿ ಗಾಜಿನ ಬೃಹತ್ ಮಂಟಪದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ನಡೆದಿದೆ.

ವಿಘ್ನೇಶ್ ಶಿವನ್, ನಯನತಾರಾ ಮದುವೆಗೆ ಬಾಲಿವುಡ್, ದಕ್ಷಿಣ ಭಾರತದ ದಿಗ್ಗಜರುಕೆಂಪು ಬಣ್ಣದ ಸೀರೆಯಲ್ಲಿ ‘ಲೇಡಿ ಸೂಪರ್‌ಸ್ಟಾರ್’ ಕಂಗೊಳಿಸಿದ್ದರು. ವಿಘ್ನೇಶ್ ಅವರು ರೇಷ್ಮೆ ಶರ್ಟ್, ಪಂಚೆ ಧರಿಸಿದ್ದರು.

ಈ ಮದುವೆಗೆ ‘ತಲೈವಾ’ ರಜನಿಕಾಂತ್ (Rajinikanth), ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan), ನಿರ್ದೇಶಕ ಮಣಿರತ್ನಂ, ದಕ್ಷಿಣ ಭಾರತದ ಖ್ಯಾತ ನಟರಾದ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್, ನಟ ಕಾರ್ತಿ, ಕೆ.ಎಸ್.ರವಿಕುಮಾರ್, ಶಾಲಿನಿ ಅಜಿತ್, ನೆಲ್ಸನ್, ಮೋಹನ್ ರಾಜಾ, ಉದಯನಿಧಿ ಸ್ಟಾಲಿನ್, ಅನಿರುದ್ಧ್, ದಿವ್ಯಾ ದರ್ಶಿನಿ, ವಿಜಯ್ ಸೇತುಪತಿ, ನಿರ್ದೇಶಕ ಅಟ್ಲೀ (Atlee), ವಸಂತ್ ರವಿ, ನಿರ್ಮಾಪಕ ಬೋನಿ ಕಪೂರ್ (Boney Kapoor), ನಟ ವಿಜಯ್ (Vijay) ಮುಂತಾದವರು ಆಗಮಿಸಿದ್ದರು.

ಮದುವೆ ಮರುದಿನವೇ ವಿವಾದಮದುವೆಯ ಪ್ರಯುಕ್ತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದು 18,000 ಮಕ್ಕಳಿಗೆ ಅನ್ನದಾನ ಮಾಡಿದ್ದರು. ಮದುವೆ ಬಳಿಕ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿದ್ದ ಈ ಜೋಡಿ ಇನ್ನೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿತ್ತು.

ದೇವಸ್ಥಾನದ ಆವರಣದಲ್ಲಿ ನಯನತಾರಾ ಅವರು ಚಪ್ಪಲಿ ಹಾಕಿಕೊಂಡಿದ್ದಲ್ಲದೆ, ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button