ಅಪಘಾತ
ಮತ್ತೊಂದು ಭೀಕರ ಅಪಘಾತ, ಟಾಟಾ -ಲಾರಿ ಡಿಕ್ಕಿ, 7 ಮಂದಿ ಸಾವು
14 injured as Tata ace into lorry in Planadu,Andhra Pradesh: 7 killed

ಟಾಟಾ ಏಸ್ ಹಾಗೂ ಲಾರಿ ಪರಸ್ಪರ ಡಿಕ್ಕಿಯಾಗಿ ಏಳು ಮಂದಿ ಯಾತ್ರಿಕರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕೊಟ್ಟಮ್ಮ(65), ಕೋಟೇಶ್ವರಮ್ಮ(55), ಎಂ.ವಿ.ರಮಣ(40), ಲಕ್ಷ್ಮಿನಾರಾಯಣ(35), ಕೆ.ರಮಾದೇವಿ(50), ಕೊಟ್ಟಮ್ಮ(70) ಹಾಗೂ ಪದ್ಮ(40) ಮೃತಪಟ್ಟ ಯಾತ್ರಿಕರು.ಆಂಧ್ರದ ನಂದ್ಯಾಲ್ ಜಿಲ್ಲೆಯ ಶ್ರೀಶೈಲಂ ಪಟ್ಟಣದಲ್ಲಿರುವ ಪುರಾತನ ದೇಗುಲದಿಂದ ನಿನ್ನೆ ರಾತ್ರಿ ಯಾತ್ರಾರ್ಥಿಗಳು ಟಾಟಾ ಏಸ್‍ನಲ್ಲಿ ಹಿಂತಿರುಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ 7 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುರಜಾಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.