ರಾಜ್ಯ

ಮತಾಂತರಗೊಂಡ 24ಗಂಟೆಯಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್: ಕಾರಣ ‘ಮುಂಜಿ’ ಭಯ!

ತುಮಕೂರು: ಹಿಂದೂ ಧರ್ಮದ ಅರ್ಚಕನೋರ್ವ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದಾನೆ. ಆದರೆ ಮತಾಂತರಗೊಂಡ ಕೇವಲ 24 ಗಂಟೆಯಲ್ಲಿ ವಾಪಸ್ ಹಿಂದೂ ಧರ್ಮಕ್ಕೆ ಮರಳಿದ್ದಾನೆ.

ಚಂದ್ರಶೇಖರಯ್ಯ ಎಂಬಾತ ವೃತ್ತಿಯಲ್ಲಿ ಅರ್ಚಕ. ತುಮಕೂರು ತಾಲೂಕಿನ ಹಿರೇಹಳ್ಳಿಯ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾಧ್ಯರ ಪುತ್ರನಾದ ಈತ ದಿಢೀರ್ ಎಂಬಂತೆ ಹಿಂದೂ ಧರ್ಮ ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಅದೂ ಪತ್ರಿಕಾ ಪ್ರಕಟಣೆ ನೀಡುವ ಮೂಲಕ. ಆಗಸ್ಟ್ 18 ರಂದು ಮತಾಂತರಗೊಂಡಿದ್ದ ಈತನ ಬಗ್ಗೆ ವ್ಯಾಪಕ ಚರ್ಚೆ ವ್ಯಕ್ತವಾಗಿತ್ತು.

ಇನ್ನು ಇದರ ಬೆನ್ನಲ್ಲೇ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಚಂದ್ರಶೇಖರಯ್ಯ ಅವರನ್ನು ಭೇಟಿ ಮಾಡಿ, ಮತಾಂತರದ ಬಗ್ಗೆ ಮಾತುಕತೆ ನಡೆಸಿದ್ದರು. ಆ ಬಳಿಕ ಆತ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾನೆ.

ಚಂದ್ರಶೇಖರಯ್ಯ ಮತಾಂತರಗೊಂಡು ಮುಬಾರಕ್ ಪಾಷ ಆಗಿದ್ದ. ಚಂದ್ರಶೇಖರಯ್ಯ ಮುಬಾರಕ್ ಪಾಷ ಆಗಲು ಪ್ರಮುಖ ಕಾರಣ ಕೌಟುಂಬಿಕ ಕಲಹ. ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದಿಂದ ಇವ್ರು ಮಾನಸಿಕವಾಗಿ ನೊಂದಿದ್ದರು.

ಅಲ್ಲದೆ ಕಷ್ಟಕಾಲದಲ್ಲಿ ಯಾರೂ ಸಹಾಯಕ್ಕೆ ಬರೋದಿಲ್ಲ ಅಂತಾ ಕೊರಗುತಿದ್ದರು. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯೊಂದಲು ಮತಾಂತರ ಒಂದೇ ದಾರಿ ಎಂದು ತೀರ್ಮಾನಿಸಿ ಅನ್ಯ ಧರ್ಮವನ್ನು ಸ್ವೀಕರಿಸಿದರು.

ತಮ್ಮೂರಿನ ಮುಸ್ಲಿಂ ಸಮುದಾಯದ ತನ್ವೀರ್ ಜೊತೆ ಹೆಚ್ಚಿನ ಒಡನಾಟದಿಂದ ಅವರ ನೇತೃತವದಲ್ಲಿ ಮಸೀದಿಗೆ ತೆರಳಿದ್ದರು. ಮುಸ್ಲಿಂ ಸಮುದಾಯದಂತೆ ಮುಂಜಿ ಮಾಡಿಸಿಕೊಳ್ಳಬೇಕು. ಮೊದಲೇ ಸಕ್ಕರೆ ಖಾಯಿಲೆಯಿಂದ ಬಳಲುತಿದ್ದ ಅರ್ಚಕ ಚಂದ್ರಶೇಖರಯ್ಯ ಮುಂಜಿಗೆ ಹೆದರಿದ್ದಾರೆ.

ಇದೂ ಕೂಡ ಆ ಸಮುದಾಯದಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಎನ್ನಾಗಿದೆ. ಕೆಲವು ದಿನಗಳಿಂದ ಹಾಗೂ ಹಬ್ಬದ ದಿನಗಳಲ್ಲಿ ಮುಸ್ಲಿಂರಂತೆ ವೇಷ ಭೂಷಣ ತೊಡುತಿದ್ದರು. ಇದನ್ನು ಕಂಡವರು ತಮಾಷೆಗೆ ಹೀಗೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದರು.

ಅರ್ಚಕ ಚಂದ್ರಶೇಖರಯ್ಯ ವಾಸಿಸುವ ಏರಿಯಾದಲ್ಲಿ ಮುಸ್ಲಿಂ ಸಮುದಾಯ ಕೂಡ ಹೆಚ್ಚಿದೆ. ಇದರಿಂದ ಪ್ರಭಾವಿತನಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾನೆ. ಸದ್ಯ ಮಾಜಿ ಸಚಿವ ಸೊಗಡು ಶಿವಣ್ಣ ಮನವರಿಕೆಯಿಂದ ವಾಪಸ್ ಹಿಂದೂ ಧರ್ಮಕ್ಕೆ ಬಂದಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯ ನಡುವೆ ಕಲ್ಪತರು ನಾಡಿನಲ್ಲಿ ಮತಾಂತರದ ಹೈ ಡ್ರಾಮ ನಡೆದಿದೆ. ಮಾಜಿ ಸಚಿವ ಸೊಗಡು ಶೀವಣ್ಣ ಅವರ ಕಾರ್ಯಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button