ಮತದಾರರಿಗೆ ಹಣದ ಆಮಿಷ

ದೇಶದ ೬ ರಾಜ್ಯಗಳ ೭ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಗೆ ಬಿರುಸಿನ ಮತದಾನ ನಡೆಸಿದ್ದು ತೆಲಂಗಾಣದ ಮುನಗೋಡು ಕ್ಷೇತ್ರದಲ್ಲಿ ಮತದಾರರ ಮನಗೆಲ್ಲಲು ಅಭ್ಯರ್ಥಿಗಳು ಹಣದ ಹೊಳೆ ಹರಿಸಿರುವ ಜತೆಗೆ ನಾನಾ ಆಮಿಷಗಳನ್ನು ಒಡ್ಡಿರುವ ಬಗ್ಗೆ ವರದಿಯಾಗಿದೆ.
ಶತಾಯ-ಗತಾಯ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಅಭ್ಯರ್ಥಿಗಳು ಪ್ರತಿ ಮತಕ್ಕೆ ೩ ಸಾವಿರದಿಂದ ೬ ಸಾವಿರಕ್ಕೂ ನೀಡಿ ಮೇಲಗೈ ಸಾಧಿಸಲು ಪೈಪೋಟಿ ನಡೆಸಿದ್ದಾರೆ.ದೇಶದ ಗಮನ ಸೆಳೆದಿರುವ ಮುನಗೋಡು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಕೋಮಾಟಿ ರೆಡ್ಡಿ, ಆಡಳಿತಾರೂಢ ಟಿಆರ್‌ಎಸ್‌ನ ಕುಸುಕುಂಟ್ಲ ಪ್ರಭಾಕರ್ ರೆಡ್ಡಿ, ಕಾಂಗ್ರೆಸ್‌ನಿಂದ ಪಲ್ಲವಿ ಸರಸ್ವತಿ ರೆಡ್ಡಿ ಸೇರಿದಂತೆ ೪೭ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಮತ ಎಣಿಕೆ ಇದೇ ೬ ರಂದು ನಡೆಯಲಿದೆ.
ಹೀಗಾಗಿ ಪ್ರತಿ ಮತಕ್ಕೆ ೩ ಸಾವಿರ, ೪ ಸಾವಿರ ಮತ್ತು ೬ ಸಾವಿರ ರೂಪಾಯಿ ನೀಡುವ ಮೂಲಕ ಖರೀದಿ ಮಾಡಲಾಗುತ್ತಿದೆ.೨.೪೨ ಲಕ್ಷ ಮತದಾರಿರುವ ಈ ಕ್ಷೇತ್ರದಲ್ಲಿ ಬರೀ ಹಣದ ಹೊಳೆ ಮಾತ್ರ ಹರಿಯುತ್ತಿಲ್ಲ ಬದಲಾಗಿ ವಿವಿಧ ಮಾದರಿಯ ಉಡುಗೊರೆಗಳು, ದುಬಾರಿ ಮದ್ಯದ ಬಾಟಲಿಗಳು, ಚಿಕನ್, ಮಟನ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ನೀಡಿ ಮತದಾರರ ಮನ ಗೆಲ್ಲಲು ಹರಸಾಹಸ ನಡೆಸಿದ್ದಾರೆ.
ಕೆಲ ಅಭ್ಯರ್ಥಿಗಳು ಪ್ರತಿ ಮತಕ್ಕೆ ೩ ಸಾವಿರ, ೪ ಸಾವಿರ ಮತ್ತು ೬ ಸಾವಿರ ನೀಡಿದ್ದಾರೆ. ಜೊತೆಗೆ ಕೆಲವರು ಚಿನ್ನವನ್ನೂ ನೀಡಿದ್ದಾರೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಕೊಟ್ಟಿದ್ದನ್ನು ಪಡೆದುಕೊಂಡಿದ್ದೇವೆ. ಯಾರಿಗೆ ಮತ ಚಲಾಯಿಸಬೇಕು ಎಂದು ನಾವು ನಿರ್ಧಾರ ಮಾಡುತ್ತೇವೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.ನಮ್ಮ ಮನೆಯಲ್ಲಿ ೬ ಜನರಿದ್ದೇವೆ.
ಪಕ್ಷವೊಂದರ ಅಭ್ಯರ್ಥಿ ನಮ್ಮ ಮನೆಗೆ ೩೬ ಸಾವಿರ ನೀಡಿದ್ದಾರೆ. ಇನ್ನೂ ಕೆಲವು ಪಕ್ಷದ ಅಭ್ಯರ್ಥಿಗಳು ೩ ಮತ್ತು ೪ ಸಾವಿರ ನೀಡಿದ್ದಾರೆ, ಕುಟುಂಬವೊಂದಕ್ಕೆ ಹೆಚ್ಚಿನ ಹಣ ಕೊಟ್ಟಿದ್ದಾರೆ ಎಂದು ಗತ್ತುಪಲ್ ಮಂಡಲ್‌ನ ನೇಕಾರ ಪಿ.ವೆಂಕಟೇಶ್ ಹೇಳಿದ್ದಾರೆ.ಹೈದರಾಬಾದ್‌ನ ಕಾರು ಚಾಲಕ ಪ್ರಭಾಕರ್, ಪ್ರತಿ ಮತಕ್ಕೆ ನನಗೆ ನನ್ನ ಪತ್ನಿಗೆ ತಲಾ ೪ ಸಾವಿರದಂತೆ ೮ ಸಾವಿರ ನೀಡಿದ್ಧಾರೆ.
ಎಲ್ಲ ಪಕ್ಷಗಳ ಅಭ್ಯರ್ಥಿಗಳು ಹಣ ನೀಡಿದ್ದಾರೆ. ಯಾರಿಗೆ ಮತ ಹಾಕಬೇಕು ಎನ್ನುವುದು ನನ್ನ ನಿರ್ಧಾರ ಅದರಂತೆ ಮತ ಹಾಕುತ್ತೇನೆ ಎಂದಿದ್ದಾರೆ.ಬಿಜೆಪಿ ಅಧ್ಯಕ್ಷನ ಬಂಧನ ಬಿಡುಗಡೆಆಡಳಿತಾರೂಢ ಟಿಆರ್‌ಎಸ್ ಮತ್ತು ಬಿಜೆಪಿ ನಡುವೆ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ, ಘರ್ಷಣೆಗೆ ಕಾರಣವಾಗಿದ್ದು ಈ ನಡುವೆ ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಬೆಳಿಗ್ಗೆ ಮತದಾನ ಆರಂಭವಾಗಿದೆ. ಹೀಗಿದ್ದರೂ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರೆಸ್) ಕ್ಷೇತ್ರದ ಮತದಾರರಲ್ಲದ ಸ್ಥಳೀಯೇತರ ನಾಯಕರು ಉಳಿದುಕೊಂಡಿದ್ದಾರೆ ಎಂದು ಆರೋಪಿಸಿ ಮುನುಗೋಡಿಗೆ ಬಿಜೆಪಿ ಅಧ್ಯಕ್ಷ ಸಂಜಯ್ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಮುಂಜಾನೆ ಹೈದರಾಬಾದ್‌ನ ಹೊರವಲಯದಲ್ಲಿ ಪೊಲೀಸರು ಬಂಧಿಸಿದ್ದರು.
ಆ ಬಳಿಕ ಬಿಡುಗಡೆ ಮಾಡಿದ್ದಾರೆಸಂಜಯ್ ಬಂಧನದಿಂದ ಬಿಜೆಪಿ ಮತ್ತು ಟಿಆರ್‌ಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಘರ್ಷಣೆಗೂ ಕಾರಣವಾಗಿದ್ದು ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.
ಚುನಾವಣಾ ಪ್ರಚಾರ ಮುಗಿದ ನಂತರವೂ ಅವರು ತಮ್ಮ ಬೆಂಬಲಿಗರೊಂದಿಗೆ ಇಂದು ಬೆಳಗ್ಗೆ ನಲ್ಗೊಂಡ ಜಿಲ್ಲೆಯ ಕ್ಷೇತ್ರಕ್ಕೆ ತೆರಳಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನುಗೋಡು ಉಪಚುನಾವಣೆಯು ದೇಶದಲ್ಲೇ ಅತ್ಯಂತ ದುಬಾರಿಯಾದ ವಿಧಾನಸಭಾ ಕ್ಷೇತ್ರದ ಚುನಾವಣೆ ಎಂದು ಬಿಂಬಿಸಲಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದೆ, ಒಂದು ಮತಕ್ಕೆ ೩೦ ಸಾವಿರ ರೂ.ವರೆಗೆ ಹಣ ನೀಡಲು ಕೆಲವು ಪಕ್ಷದ ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ ಎಂಬ ಆರೋಪಗ ಕೇಳಿಬಂದಿದೆ.