ಬೆಂಗಳೂರುರಾಜ್ಯ

ಮಡಿಲಲ್ಲಿ ಮಗು ಹೊತ್ತು ಫುಡ್ ತಲುಪಿಸುವ Zomato ಡೆಲಿವರಿ ಏಜೆಂಟ್

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್‌ ಆಗುತ್ತಿವೆ. ಅದರಲ್ಲಿ ಝೊಮಾಟೊ ಡೆಲಿವರಿ ಏಜೆಂಟ್ ತನ್ನ ಪುಟ್ಟ ಮಗಳನ್ನು ಬೇಬಿ ಕ್ಯಾರಿಯರ್‌ನಲ್ಲಿಇಟ್ಟುಕೊಂಡು ಫುಡ್‌ ಆರ್ಡರ್‌ಗಳನ್ನು ತಲುಪಿಸುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ನೆಟಿಜನ್‌ಗಳ ಗಮನ ಸೆಳೆದಿದೆ.

ಫುಡ್ ಬ್ಲಾಗರ್ ಸೌರಭ್ ಪಂಜ್ವಾನಿ ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಫುಡ್‌ ಡೆಲಿವರಿ ಏಜೆಂಟ್‌ ಒಬ್ಬರು ತಮ್ಮ ಮಗಳು ಮತ್ತು ಮಗನನ್ನು ಕರೆದುಕೊಂಡೇ ಫುಡ್‌ ಡೆಲಿವರಿ ಮಾಡುವುದನ್ನು ಕಾಣಬಹುದು. ಈ ವಿಡಿಯೋ Instagram ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಪುಟ್ಟ ಮಕ್ಕಳನ್ನು ತನ್ನೊಟ್ಟಿಗೆ ಕರೆದುಕೊಂಡೇ ಫುಡ್‌ ಡೆಲಿವರಿ ಮಾಡುವ ಈ ಏಜೆಂಟ್‌ ಅವರ ಕಥೆ ಹೃದಯ ಸ್ಪರ್ಶಿಯಾಗಿದೆ. ಅಲ್ಲದೇ ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ.

“ಫುಡ್‌ ಡೆಲಿವರಿ ಏಜೆಂಟ್‌ ಮಕ್ಕಳೊಟ್ಟಿಗೆ ಆಹಾರ ತಲುಪಿಸುತ್ತಿರುವ ದೃಶ್ಯ ನನಗೆ ತುಂಬಾ ಸ್ಪೂರ್ತಿದಾಯಕವಾಗಿದೆ. ಈ Zomato ಡೆಲಿವರಿ ಏಜೆಂಟ್‌ ಇಡೀ ದಿನ ಬಿಸಿಲು, ಮಳೆ ಎನ್ನದೇ ತನ್ನ ಇಬ್ಬರು ಮಕ್ಕಳೊಂದಿಗೆ ಫುಡ್‌ ತಲುಪಿಸುತ್ತಾರೆ.

ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಸೌರಭ್ ಪಂಜ್ವಾನಿ ಬರೆದುಕೊಂಡಿದ್ದಾರೆ.

ವಿಡಿಯೋ ವೈರಲ್ ಆಗಿದ್ದು, ಈ ತಂದೆಯ ಪ್ರೀತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, “ಎಚ್ಚರಿಕೆ ವಹಿಸಿ ಮತ್ತು ವಿಶೇಷವಾಗಿ ನಿಮ್ಮ ಮಕ್ಕಳು ಸುರಕ್ಷಿತವಾಗಿರಲಿ. ಕುಟುಂಬಕ್ಕಾಗಿ ಶ್ರಮಿಸುತ್ತಿರುವ ಸಹೋದರನನ್ನು ಗೌರವಿಸಿ”.

ಇನ್ನೊಬ್ಬರು, “ಕಠಿಣ ಪರಿಶ್ರಮದ ಜೀವನ ತುಂಬಾ ದುಃಖ ಭರಿತವಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೆಯವರು “ಮಕ್ಕಳ ಆರೋಗ್ಯ ಮತ್ತು ಜೀವಕ್ಕೆ ಅಪಾಯವಿದೆ.. ಅವರು ತಮ್ಮ ಮಕ್ಕಳು ಮತ್ತು ಕುಟುಂಬವನ್ನು ಪೋಷಿಸಲು ಕೆಲಸದ ಕಡೆಗೆ ಬಹಳ ಸಮರ್ಪಿತರಾಗಿದ್ದಾರೆ ..

ಅಂತಹ ಜನರಿಗೆ ಸರ್ಕಾರವು ಉದ್ಯೋಗವನ್ನು ಒದಗಿಸಬೇಕು ಮತ್ತು ಸೆಲೆಬ್ರಿಟಿಗಳು ಅವರನ್ನು ಕಂಡುಹಿಡಿದು ಸಹಾಯ ಮಾಡಬೇಕು ಮತ್ತು ದೇವರಿಂದ ಪ್ರಶಂಸೆಗೆ ಪಾತ್ರರಾಗುತ್ತಾರೆ” ಎಂದಿದ್ದಾರೆ.

Zomato ಕೂಡ ವಿಡಿಯೋಗೆ ಪ್ರತ್ಯುತ್ತರ ನೀಡಿದೆ ಮತ್ತು ವ್ಯಕ್ತಿಯ ಸಂಪರ್ಕ ವಿವರಗಳನ್ನು ವಿನಂತಿಸಿದೆ. “ದಯವಿಟ್ಟು ಆರ್ಡರ್ ವಿವರಗಳನ್ನು ಖಾಸಗಿ ಸಂದೇಶದಲ್ಲಿ ಹಂಚಿಕೊಳ್ಳಿ ಇದರಿಂದ ನಾವು ಅವರನ್ನು ತಲುಪಬಹುದು ಮತ್ತು ವಿತರಣಾ ಪಾಲುದಾರರಿಗೆ ಸಹಾಯ ಮಾಡಬಹುದು” ಎಂದು Zomato ಕಾಮೆಂಟ್ ಮಾಡಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button