ಮಟ್ಕಾ ದಂಧೆ,ಅಕ್ರಮ ಪಬ್‌ಗೆ ಪೊಲೀಸ್ ಸಹಕಾರ

ಬೆಂಗಳೂರು: ರಾಜ್ಯದಲ್ಲಿ ಮಟ್ಕಾ ದಂಧೆ, ಅಕ್ರಮ ಪಬ್ ಗಳು ನಡೆಯತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯೂ ಸಹಕಾರ ನೀಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭಿರ ಆರೋಪಿಸಿದ್ದಾರೆ.
ನಗರದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹೃದಯಾಘಾತದಿಂದ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.ಮಾನಸಿಕವಾಗಿ ಕುಗ್ಗಿದ್ದರಿಂದ ಆ ರೀತಿ ಹೃದಯಾಘಾತವಾಗಿದೆ.
ಈ ಬಗ್ಗೆ ಮೃತ ಅಧಿಕಾರಿ ನಂದೀಶ್ ಅವರ ಪತ್ನಿ ಮಾತಾಡಿರೋದು ನೋಡಿದ್ದೇನೆ.ಕೆ.ಆರ್.ಪುರಂನಲ್ಲಿ ಅಧಿಕಾರಿ ನಂದೀಶ್ ವ್ಯಾಪ್ತಿಯಲ್ಲಿ ರಾತ್ರಿ ಆದರೂ ಪಬ್ ನಡೆಯುತ್ತಿತ್ತು. ಇದಕ್ಕಾಗಿ ನಂದೀಶ್ ರನ್ನ ಅಮಾನತು ಮಾಡಲಾಗಿದೆ ಇದರಿಂದ ಮಾನಸಿಕವಾಗಿ ಕುಗ್ಗಿ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸರ್ಕಾರ ರಾತ್ರಿ ೧ ಗಂಟೆವರೆಗೆ ಹೊಟೇಲ್ ತೆರೆಯೋಕೆ ಅವಕಾಶ ಕೊಟ್ಟಿದೆ. ಅದೊಂದು ಪಬ್ ಮಾತ್ರ ರಾತ್ರಿ ನಡೆಯುತ್ತಿತ್ತಾ? ಅ ಪಬ್ ನಲ್ಲಿ ರಾಜಕಾರಣಿಗಳ ಬೆಂಬಲಿಗರು ಎಷ್ಟು ಜನ ಇದ್ದರು? ಪೊಲೀಸರು ಸಹ ಪಬ್‌ನಲ್ಲಿ ಡಾನ್ಸ್ ಮಾಡ್ತಿದ್ರು ಅಂತಾ ಹೇಳಿದ್ದಾರೆ.