ರಾಜ್ಯ

ಮಗನಿಗೆ ಪಿಎಸ್ಐ ಕೆಲಸ ಕೊಡಿಸಲು ಹೋಗಿ 30 ಲಕ್ಷ ಕಳೆದು ಕೊಂಡ ರೈತ!

ಮಂಡ್ಯ : ತನ್ನ ಮಗನಿಗೆ ಪಿಎಸ್ಐ ಕೆಲಸ ಕೊಡಿಸೋ ಆಸೆಗೆ ಬಿದ್ದ ರೈತನೋರ್ವ 38 ಲಕ್ಷ ರೂ.ಕಳೆದುಕೊಂಡು ಕಣ್ಣೀರಾಕ್ತಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ ನಿಂಗರಾಜು ಮೋಸ ಹೋದ ರೈತ ನಾಗಿದ್ದು, ಕೋಲಾರ ಮೂಲದ ಮಂಜುನಾಥ್ ಅಲಿಯಾಸ್ ಅಕ್ಷಯ್ ಎಂಬುವನ ವಿರುದ್ಧ ಮೋಸಹೋದ ರೈತ ನಿಂಗರಾಜು ವಂಚನೆ ಆರೋಪದ ಮೇಲೆ ವಂಚಕ ಮಂ ಜುನಾಥ್ ವಿರುದ್ದ ಮಂಡ್ಯ ಎಸ್ಪಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾನೆ.

ನಿಂಗರಾಜು ಮಗ ಅರುಣ್ ಕುಮಾರ್ ಕಳೆದ ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ. ಆ ವೇಳೆ ನಿಂಗರಾಜು, ಪರಿಚಯದ ಬಿಜೆಪಿ ಮುಖಂಡರೊಬ್ಬರ ಮೂಲಕ ಈ ವಂಚಕ ಮಂಜುನಾಥ್ ಪರಿಚಯವಾಗಿದ್ದ.ಈ ವೇಳೆ ತಾನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿವೈ ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದ. ಅಲ್ಲದೆ, 40 ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಮಂಜುನಾಥ್ ಹೇಳಿದ ಮಾತನ್ನು ನಂಬಿ ರೈತ ನಿಂಗರಾಜು 38 ಲಕ್ಷ ಕೊಡುವುದಾಗಿ ಒಪ್ಪಿ 30.25 ಲಕ್ಷ ರೂಪಾಯಿಯನ್ನು ನಿಂಗರಾಜು ನೀಡಿದ್ದ. 17 ಲಕ್ಷ ಬ್ಯಾಂಕ್ ಮೂಲಕ RTGS ಮಾಡಿದ್ರೆ, ಉಳಿದ 13.25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದ.

ಮಗ ಪೊಲೀಸ್ ಆಗುವ ಆಸೆಯಿಂದ ಬಡ್ಡಿಗೆ ಸಾಲ ಮಾಡಿ ಹಾಗೂ ತನ್ನ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಮಂಜುನಾಥ್ ಗೆ ಹಣ ನೀಡಿದ್ದ. ಇದಾದ ಬಳಿಕ ಪಿಎಸ್ಐ ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರು ಬಾರದಿದ್ದಾಗ ನಿಂಗರಾಜು ಹಣ ಮಂಜುನಾಥ್ ನಿಂದ ಹಣ ವಾಪಸ್ ಕೇಳಿದ್ದಾನೆ.

ಆದರೆ, ಹಣ ವಾಪಸ್ ಕೊಡದ ವಂಚಕ ಮಂಜುನಾಥ್ ಸಬೂಬು ಹೇಳಿಕೊಂಡು ಬಂದಿದ್ದಾನೆ. ಇತ್ತ ಮಗನಿಗೆ ಕೆಲಸವೂ ಸಿಗದೆ, ಅತ್ತ ಕೊಟ್ಟ ಹಣ ವೂ ಇಲ್ಲದೆ ರೈತ ನಿಂಗರಾಜು ಹಾಗೂ ಕುಟುಂಬ ಸಂಕಷ್ಟ ಕ್ಕೆ ಸಿಲುಕಿದೆ.

ಮಾಡಿದ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿ ಕೊಳ್ಳುವ ಸ್ಥಿತಿಗೆ ಈ ಕುಟುಂಬ ಬಂದಿದ್ದು, ಕಡೆಗೆ ಪೊಲೀಸರಿಗೆ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಸೇರಿ ಮಂಡ್ಯದ ಎಸ್ಪಿಗೆ ನ್ಯಾಯ ಕೊಡಿಸಿ ಎಂದು ದೂರು‌ ನೀಡಿದ್ದಾರೆ.

ಈ ಕುರಿತಾಗಿ ದೂರು ನೀಡಿದ್ರೂ ಪೊಲೀಸರು ಕ್ರ ಮ ತೆಗೆ ದುಕೊಳ್ಳುತ್ತಿಲ್ಲ ಎಂದು ನಿಂಗರಾಜು ಕುಟುಂಬ ಕಣ್ಣೀರಿಡ್ತಿದ್ದು ಪೊಲೀಸರು ಎಫ್ ಐಆರ್ ದಾಖಲು ಮಾಡದೆ ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಹೇಳುತ್ತಿದ್ದಾರೆ ಎಂದು ನಿಂಗರಾಜು ತಮ್ಮ‌ ಅಳಲು ತೋಡಿಕೊಂಡಿದ್ದು ಮಾಧ್ಯಮದ ಮೂಲಕವಾದ್ರು ನನಗೆ ನ್ಯಾಯ ಕೊಡಿಸಿ ಅಂತಾ ಕಣ್ತೀರಾಕ್ತಿದ್ದಾರೆ.

ಒಟ್ಟಾರೆ ಮಗನಿಗೆ ವಾಮಾ ಮಾರ್ಗದಲ್ಲಿ ಪೊಲೀಸ್ ಕೆಲಸ ಕೊಡಿಸಲು ರೈತ ಲಕ್ಷಾಂತರ ರೂ. ಕಳೆದುಕೊಂಡು ರೈತಇದೀಗ ಕಣ್ಣೀರಾಕ್ತಾ ಮಾಡಿರೋ ಸಾಲ ಹೇಗೆ ತೀರಿಸೋದು ಎಂಬ ಚಿಂತೆಗೆ ಸಿಲುಕಿದ್ದಾನೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button