ಮಕ್ಕಳನ್ನು ರಕ್ಷಿಸಲು ಡೆಂಜರ್ ಹಾವಿನೊಂದಿಗೆ ಫೈಟ್’ಗಿಳಿದ ಪಕ್ಷಿ!

ನೀವು ಇಂಟರ್ನೆಟ್‌ನಲ್ಲಿ ಅನೇಕ ಅದ್ಬುತ, ಶಾಕಿಂಗ್ ವೈರಲ್ ವೀಡಿಯೊಗಳನ್ನು ನೀವು ನೋಡಿರಬೇಕು. ಇಂದು ನಾವು ಕೂಡ ಈ ಸುದ್ದಿಯಲ್ಲಿ, ನಿಮಗಾಗಿ ಶಾಕಿಂಗ್ ವಿಡಿಯೋ ಒಂದನ್ನ ತಂದಿದ್ದೇವೆ.
ನೆಲದ ಮೇಲೆ ಹರಿದಾಡುವ ಹಾವು ಆಕಾಶದಲ್ಲಿ ಹಾರುವ ಹಕ್ಕಿಯೊಂದಿಗೆ ಸಖತ್ ಫೈಟಿಂಗ್ ಮಾಡುತ್ತಿರುವುದನ್ನ ನೋಡಿದ್ದೀರಾ.
ಹಾಗಿದ್ರೆ, ಇಲ್ಲಿದೆ ನೋಡಿ, ತಾಯಿ ಹಕ್ಕಿಯೊಂದು ತನ್ನ ಪುಟ್ಟ ಪುಟ್ಟ ಮಕ್ಕಳನ್ನು ರಕ್ಷಿಸಲು ಹಾವಿನ ಜೊತೆ ಮರದ ಮೇಲೆ ಕದನಕ್ಕಿಳಿದಿದೆ.
ಹಕ್ಕಿಬಿ ಗೂಡಿನ ಮೇಲೆ ಹಾವಿನ ದಾಳಿ ಈ ವಿಡಿಯೋದಲ್ಲಿ ಮರಕುಟಿಗದ ಮರಿಗಳನ್ನು ನುಂಗಲು ಹಾವು ಒಂದು ಗುಡಿಗೆ ನುಗ್ಗಿದೆ. ಇದನ್ನು ನೋಡಿದ ತಾಯಿ ಮರಕುಟಿಗ ಗೂಡಿನಿಂದ ಹಾವನ್ನು ಹೊರಹಾಕಲು ಅದರ ಜೊತೆ ಕಾದಾಡುತ್ತದೆ.
ಈ ವಿಡಿಯೋವನ್ನ ಅರಣ್ಯ ಅಧಿಕಾರಿಯೂಬ್ಬರು ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.
ಹಾವಿನೊಂದಿಗೆ ಹಕ್ಕಿಯ ಕಾದಾಟ ಈ ವೀಡಿಯೊವನ್ನು ಐಎಫ್‌ಎಸ್ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಈ ಭೂಮಿಯ ಮೇಲಿನ ಯಾವುದೇ ಶಕ್ತಿ ತಾಯಿಯ ಪ್ರೀತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಹಾವಿನೊಂದಿಗೆ ಮರಕುಟಿಗ ಹಕ್ಕಿಯುವು ತನ್ನ ಮರಿಗಳನ್ನು ಉಳಿಸಲು ಕಾದಾಡುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ವೈರಲ್ ವೀಡಿಯೊಕೇವಲ 27 ಸೆಕೆಂಡುಗಳ ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಇಷ್ಟು ಮಾತ್ರವಲ್ಲದೆ ಹಲವರೂ ವಿಡಿಯೋವನ್ನು ಲೈಕ್ ಮಾಡಿ ರೀಟ್ವೀಟ್ ಮಾಡುತ್ತಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲೂ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಕೆಲವರು ತಾಯಿಯನ್ನು ಧೈರ್ಯಶಾಲಿ ಎಂದು ಇದಕ್ಕೆ ಕಾರ್ಯುವುದು ಎಂದರೆ, ಮತ್ತೆ ಕಳವರು, ಕೆಲವರು ಹಾವನ್ನು ವಿಲನ್ ಎಂದು ಕರೆದಿದ್ದಾರೆ.