ರಾಜ್ಯ
ಮಂಗಳೂರು ವಿಮಾನ ನಿಲ್ದಾಣ 4 ತಿಂಗಳ ಕಾಲ ಸಂಜೆ 6 ರವರೆಗೆ ಬಂದ್!

ಮಂಗಳೂರು ವಿಮಾನ ನಿಲ್ದಾಣ ನಾಲ್ಕು ತಿಂಗಳ ಕಾಲ ಭಾನುವಾರ ಹೊರತುಪಡಿಸಿ ಉಳಿದ ವಾರದ ಎಲ್ಲಾ ದಿನ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಬಂದ್ ಆಗಿರುತ್ತದೆ!
2023, ಜನವರಿ 27ರಿಂದ ನಾಲ್ಕು ತಿಂಗಳ ಕಾಲ ಅಂದರೆ ಮೇ 31ರವರೆಗೂ ವಿಮಾನ ನಿಲ್ದಾಣ ಬೆಳಿಗ್ಗೆಯಿಂದ ಸಂಜೆಯವರೆಗೂ ಮುಚ್ಚಿರುತ್ತದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಹಾಗೂ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೂ ವಿಮಾನ ನಿಲ್ದಾಣದ ಪ್ರಮುಖ ಪುನರುಜ್ಜೀವನ ಕಾಮಗಾರಿಗಳು ನಡೆಯಲಿದೆ.
ಅಲ್ಲದೇ ನೆಲಹಾಸು ಕೆಲಸಗಳು ನಡೆಯುತ್ತಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2006ರಲ್ಲಿ 2450ಮೀ. ಉದ್ದ ಹಾಗೂ 45 ಮೀ. ಅಗಲದವರೆಗೂ ಕಾಂಕ್ರಿಟೀಕರಣ ರನ್ ವೇ ಉದ್ಘಾಟಿಸಲಾಗಿತ್ತು. ದೇಶದ ಮೊದಲ ಕಾಂಕ್ರೀಟ್ ರನ್ ವೇ ಹೊಂದಿದ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಮಂಗಳೂರು ಪಾತ್ರವಾಗಿತ್ತು.