ಅಪರಾಧ

ಮಂಗಳೂರು ವಿಮಾನ ನಿಲ್ದಾಣದಲ್ಲಿ 1.36 ಕೋಟಿ ಮೌಲ್ಯದ ಚಿನ್ನ ವಶ

Gold seized at Mangaluru airport

ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಅಬಕಾರಿ (ಕಸ್ಟಮ್ಸ್) ಅಧಿಕಾರಿಗಳು 1.36 ಕೋಟಿ ರೂಪಾಯಿ ಮೌಲ್ಯದ 2.468 ಕೆಜಿ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ನಿನ್ನೆ ಬಿಡುಗಡೆ ಮಾಡಲಾದ ಮಾಹಿತಿ ಪ್ರಕಾರ ದುಬೈನಿಂದ ಆಗಮಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಒಳುಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‍ನಲ್ಲಿ ಚೌಕಾರದ ಆಕಾರದಲ್ಲಿ 24 ಕ್ಯಾರೆಟ್ನ್ 1.684 ಕೆ.ಜಿ.ಚಿನ್ನವನ್ನು ಅಡಗಿಸಿಟ್ಟಿದ್ದರು. ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 86.89 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಎರಡನೇ ಪ್ರಕರಣದಲ್ಲಿ 49.74 ಲಕ್ಷ ರೂಪಾಯಿ ಮೌಲ್ಯದ 946 ಗ್ರಾಮ್ 24 ಕ್ಯಾರೆಟ್ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಈ ವ್ಯಕ್ತಿ ಕೂಡ ದುಬೈನಿಂದ ಆಗಮಿಸಿದ್ದರು, ದ್ರಾವಣ ಮಾದರಿಯ ಚಿನ್ನವನ್ನು ತಮ್ಮ ದೇಹದ ನಾಲ್ಕು ಕಡೆ ಅಡಗಿಸಿಟ್ಟಿದ್ದರು ಎಂದು ಹೇಳಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button