ಜೋತಿಷ್ಯ

ಮಂಗಳವಾರದ ರಾಶಿ ಭವಿಷ್ಯ : ಯಾವ ರಾಶಿಗೆ ಲಾಭ. ಯಾವ ರಾಶಿಗೆ ನಷ್ಟ.?

ಮೇಷ : ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ ಚತುರತೆ. ಗುರು ಹಿರಿಯರಿಂದ ಸಂತೋಷ .

ವೃಷಭ: ದೂರದ ಮಿತ್ರರ ಭೇಟಿ.ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧು ಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದ ಮುನ್ನಡೆ.

ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ಪಷ್ಟತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ತ ಶ್ರಮ.

ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾಗಮನ. ಮನಃ ಸಂತೋಷ. ಉದ್ಯೊಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫ‌ಲತೆ. ಬಂಧು ಮಿತ್ರರ ಸಹಾಯ ಸಹಕಾರ ಲಭ್ಯ.

ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯ ವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ, ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ. ದಾಂಪತ್ಯ ಸುಖ ವೃದ್ಧಿ.

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ. ಗುರು ಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮನಾಗಿ ಧನವ್ಯಯ ತೋರಿತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.

ತುಲಾ: ಅತಿಯಾದ ಆತ್ಮಾಭಿಮಾನ ಸಲ್ಲದು. ತಾಳ್ಮೆ ಸಹನೆಯಿಂದ ಹೆಚ್ಚಿನ ಪ್ರಗತಿ ಗೌರವ ಪ್ರಾಪ್ತಿ. ಧನಾರ್ಜನೆಗೆ ಸರಿಸಮನಾದ ಖರ್ಚು ತೋರೀತು. ದಾಂಪತ್ಯದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಗುರು ಹಿರಿಯರಿಂದ ಪ್ರಾಪ್ತವಾದ ಉತ್ತಮ ಮಾರ್ಗದರ್ಶನದ ಲಾಭ ಪಡೆಯಿರಿ. ಆರೋಗ್ಯ ಗಮನಿಸಿ.

ವೃಶ್ಚಿಕ: ಗುರು ಹಿರಿಯರ ಸಹಕಾರದಿಂದ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿ,ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯ ವೈಖರಿ. ಪರಿಶ್ರಮಕ್ಕೆ ತಕ್ಕ ಧನಾರ್ಜನೆ ಪ್ರಾಪ್ತಿ. ಭೂಮಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಅಧ್ಯಯನ ನಿರತರಿಗೆ ಉತ್ತಮ ಸೌಕರ್ಯ ಲಭ್ಯ.

ಧನು: ದೀರ್ಘ‌ ಪ್ರಯಾಣ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಆದರೆ ದೇಹಾಯಾಸ ಸಂಭವ. ಸಹೋದ್ಯೋಗಿಗಳ ಸಹಕಾರ ಪರಿಶ್ರಮದಿಂದ ಕಾರ್ಯ ಸಫ‌ಲತೆ. ಗೃಹೋಪ ವಸ್ತುಗಳ ಸಂಗ್ರಹಕ್ಕೆ ಅಧಿಕ ಧನ ವ್ಯಯ ಸಂಭವ. ಗುರುಹಿರಿಯರ ಆರೋಗ್ಯ ಸುದೃಢ.

ಮಕರ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಜನಮನ್ನಣೆ ಗೌರವಾದಿ ವೃದ್ಧಿ. ಅಧಿಕ ಧನ ಸಂಚಯನ. ಮಕ್ಕಳಿಂದ ಹೆಚ್ಚಿದ ಸುಖ ಸಂತೋಷ. ಸಣ್ಣ ಪ್ರಯಾಣ ಸಂಭವ.

ಕುಂಭ: ಅಭಿವೃದ್ಧಿದಾಯಕ ಚಟುವಟಿಕೆಗಳು. ಆರೋಗ್ಯದಲ್ಲಿ ಸುಧಾರಣೆ. ಸಂದಭೋìಚಿತ ವಾದ ಕಾರ್ಯವೈಖರಿ. ಉತ್ತಮ ಧನಲಾಭ. ವಾಕ್‌ ಚತುರತೆಯಿಂದ ಜನರಂಜನೆ. ಎಲ್ಲರ ಪ್ರೀತಿ ಸಂಪಾದನೆ. ಹಿರಿಯರಿಂದ ಪ್ರೋತ್ಸಾಹ. ಗೃಹದಲ್ಲಿ ಸಂಭ್ರಮದ ವಾತಾವರಣ.

ಮೀನ: ಅನಗತ್ಯ ಒತ್ತಡದಿಂದ ದೇಹಾಯಾಸ ಸಂಭವ. ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರದಿರಿ. ದೂರದ ವ್ಯವಹಾರದಿಂದ ಧನಾರ್ಜನೆ ವೃದ್ಧಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾದರೆ ಅಭಿವೃದ್ಧಿ ಸಂಭವ. ಅವಿವಾಹಿತರಿಗೆ ವಿವಾಹ ಭಾಗ್ಯ

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button