ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ವೇಗವಾಗಿ ಹರಡುತ್ತಿರುವ ಮಂಕಿಪಾಕ್ಸ್ ರೋಗವು ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶನಿವಾರದಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆನ ಮೌಲ್ಯಮಾಪನವು ಜಾಗತಿಕವಾಗಿ ಮತ್ತು ಎಲ್ಲಾ ಪ್ರದೇಶಗಳಲ್ಲಿ ಮಂಕಿಪಾಕ್ಸ್ ಅಪಾಯವು ಮಧ್ಯಮವಾಗಿದೆ, ಅಂತರರಾಷ್ಟ್ರೀಯ ದಟ್ಟಣೆಯಲ್ಲಿ ಹಸ್ತಕ್ಷೇಪದ ಅಪಾಯವು ಸದ್ಯಕ್ಕೆ ಕಡಿಮೆಯಿದ್ದರೂ, ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಮೊದಲನೆಯದಾಗಿ, ದೇಶಗಳು ಒದಗಿಸಿದ ಮಾಹಿತಿ ನೋಡಿದಾಗ ಈ ಸಂದರ್ಭದಲ್ಲಿ ಈ ಮಂಕಿಪಾಕ್ಸ್ ವೈರಸ್ ಅನೇಕ ದೇಶಗಳಿಗೆ ವೇಗವಾಗಿ ಹರಡಿದೆ ಎಂದು ತೋರಿಸುತ್ತದೆ. ಎರಡನೆಯದಾಗಿ, ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮಾನದಂಡಗಳನ್ನು ಇದರಲ್ಲಿ ಪರಿಗಣಿಸಲಾಗಿದೆ” ಎಂದು ಅವರು ಹೇಳಿದ್ದಾರೆ.