ಅಪರಾಧ

ಭೇಟಿ ಮಾಡಲು ಬಂದ ಯುವತಿ ಮೇಲೆ ಅತ್ಯಾಚಾರವೆಸಗಿದ ಸಂಬಂಧಿ

ಬೆಂಗಳೂರು: ಗಾರ್ಡನ್ ಸಿಟಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಯುವತಿಯನ್ನು ಭೇಟಿಯಾಗಲು ಕರೆಸಿದ ದೂರದ ಸಂಬಂಧಿಯೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ರಮೇಶ್ ಕಳೆದ 6 ನೇ ತಾರೀಖು ಯುವತಿಯನ್ನ ಭೇಟಿ ಮಾಡಬೇಕು ಎಂದು ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ.ದೂರದ ಸಂಬಂಧಿ ಅಪರೂಪಕ್ಕೆ ನಗರಕ್ಕೆ ಬಂದಿದ್ದಾನೆಂದು ಯುವತಿ ಕೂಡ ರಮೇಶನ ಮಾತು ನಂಬಿ ಕಬ್ಬನ್ ಪಾರ್ಕ್ ಗೆ ತೆರಳಿದ್ದಳು.

ಈ ಸಮಯವನ್ನ ದುರುಪಯೋಗಪಡಿಸಿಕೊಂಡ ರಮೇಶ ಯುವತಿ ಮೇಲೆ ಮೃಗದೆಂತರಗಿದ್ದಾನೆ. ಘಟನೆಯಿಂದ ಶಾಕ್ ನಲ್ಲಿದ್ದ ಯುವತಿ ಮೂರು ದಿನದ ನಂತರ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ಸದ್ಯ ಆರೋಪಿ ರಮೇಶ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button