
ನಗರದಲ್ಲಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿರುವುದು ಕೇವಲ ಭೂಗಳ್ಳರು ಹಾಗೂ ಬಿಬಿಎಂಪಿಯವರಲ್ಲ ಇವರ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಇದೆ.
ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವ ಬಿಡಿಎ ಅಧಿಕಾರಿಗಳೇ ನಗರದ ಹಲವಾರು ಕೆರೆಗಳನ್ನು ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದಾರೆ.
ಕಳೆದ 2013-14ನೇ ಸಾಲಿನಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಬಿಡಿಎ ಕೆರೆ ಅಂಗಳದಲ್ಲಿ ಲೇಔಟ್ ನಿರ್ಮಾಣ ಮಾಡಿ, ಕೋಟಿ ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ.
2014ರಲ್ಲಿ ಕೆರೆ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದ ಬಿಡಿಎ ಅಧಿಕಾರಿಗಳು 2015ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದು ಇದೀಗ ಬಹಿರಂಗಗೊಂಡಿದೆ.
ಅದರಲ್ಲೂ ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳಿಗೆ ಮಣ್ಣು ತುಂಬಿ ಬಡಾವಣೆ ನಿರ್ಮಾಣ ಮಾಡಿದ್ದ ಬಿಡಿಎಯವರು 23 ಕೆರೆ ನುಂಗಿ ನಿರ್ಮಿಸಿದ್ದು ಬರೊಬ್ಬರಿ 3530 ನಿವೇಶನಗಳು.
ಜೀವಂತ ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಿದ್ದ ಬಿಡಿಎ ಅದಿಕಾರಿಗಳು 2015ರಲ್ಲಿ ಬಡಾವಣೆಗಳನ್ನು ಕಾನೂನು ಬದ್ದಗೊಳಿಸುವಂತೆ ಸರ್ಕಾರಕ್ಕೆ ಬರೆದಿದ್ದ ಪತ್ರ ಈ ಸಂಜೆಗೆ ಲಭ್ಯವಾಗಿದೆ.
ನಗರದ ಹಲವಾರು ಪ್ರದೇಶಗಳಲ್ಲಿದ್ದ ಕೆರೆಗಳು ಮೂಲ ಸ್ವರೂಪ ಕಳೆದುಕೊಂಡಿವೆ ಎಂಬ ಏಕೈಕ ಕಾರಣಕ್ಕೆ 23 ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಿಸಿರುವುದು ಇದೀಗ ಜಗಜ್ಜಾಹೀರಾಗಿದೆ.
1985ರಲ್ಲಿ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇಗಳ ವರದಿಯ ಆಧಾರದ ಮೇರೆಗೆ 23 ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಲಾಗಿತ್ತು.
ಅಂದು ಕೆರೆಯಾಗಿದ್ದ ಪ್ರದೇಶ ಇದೀಗ ಬಡಾವಣೆಗಳಾಗಿದ್ದು, ಅಂತಹ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದರೂ ಅಲ್ಲಿನ ನಿವಾಸಿಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ.
ಮಾಡಬಾರದ ಎಡವಟ್ಟು ಮಾಡಿ ನಂತರ ಕೆರೆ ಮುಚ್ಚಿ ನಿರ್ಮಿಸಿದ್ದ ಬಡಾವಣೆಗಳನ್ನು ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬಿಡಿಎ ಮಾಡಿಕೊಂಡಿದ್ದ ಮನವಿಗೆ ಇದುವರೆಗೂ ಯಾವುದೆ ಮನ್ನಣೆ ದೊರೆತಿಲ್ಲ.
ಹಾಗಾದರೆ ಬಿಡಿಎಯಿಂದ ಒತ್ತುವರಿಯಾಗಿ ಬಡಾವಣೆಗಳಾಗಿ ಪರಿವರ್ತನೆಗೊಂಡಿರುವ ಕೆರೆಗಳು ಯಾವ್ಯಾವು ಅಂತೀರಾ.!
ಇಲ್ಲಿದೆ ನೋಡಿ ಲಿಸ್ಟ್ :
ಗೆದ್ದಲಹಳ್ಳಿ ಕೆರೆ 126 ನಿವೇಶನ ನಿರ್ಮಾಣಚಿಕ್ಕಮಾರನಹಳ್ಳಿ ಕೆರೆ 115 ನಿವೇಶನ ನಿರ್ಮಾಣಬಾಣಸವಾಡಿ ಕೆರೆ 67 ನಿವೇಶನ ನಿರ್ಮಾಣಚನ್ನಸಂದ್ರ ಕೆರೆ 222 ನಿವೇಶನ ನಿರ್ಮಾಣಶಿನಿವಾಗಿಲು ಅಮಾನಿಕೆರೆ 486 ನಿವೇಶನ ನಿರ್ಮಾಣಬಿಳೇಕಹಳ್ಳಿ ಕೆರೆ 312 ನಿವೇಶನ
ನಿರ್ಮಾಣನಾಗಸಂದ್ರ ಚೆನ್ನಮ್ಮಕೆÀರೆ 328 ನಿವೇಶನ ನಿರ್ಮಾಣತಿಪ್ಪಸಂದ್ರ ಕೆರೆ (3ನೇ ಹಂತ) 234 ನಿವೇಶನ ನಿರ್ಮಾಣತಿಪ್ಪಸಂದ್ರ ಕೆರೆ (2ನೇ ಹಂತ) 13 ನಿವೇಶನ ನಿರ್ಮಾಣಅಗರ ಕೆರೆ 113 ನಿವೇಶನ ನಿರ್ಮಾಣಎಳ್ಳುಕುಂಟೆ ಕೆರೆ 161 ನಿವೇಶನ ನಿರ್ಮಾಣಕಾಚರಕನಹಳ್ಳಿ ಕೆರೆ 126 ನಿವೇಶನ ನಿರ್ಮಾಣಹುಳಿಮಾವು ಕೆರೆ 153 ನಿವೇಶನ
ನಿರ್ಮಾಣವೆಂಕಟರಾಯನ ಕೆರೆ 130 ನಿವೇಶನ ನಿರ್ಮಾಣನಾಗರಬಾವಿ ಕೆರೆ 37 ನಿವೇಶನ ನಿರ್ಮಾಣಚಳ್ಳಕೆರೆ 71 ನಿವೇಶನ ನಿರ್ಮಾಣದೊಮ್ಮಲೂರು ಕೆರೆ 10 ನಿವೇಶನ ನಿರ್ಮಾಣಮೇಸ್ತ್ರಿ ಪಾಳ್ಯ ಕೆರೆ 23 ನಿವೇಶನ ನಿರ್ಮಾಣಬೆನ್ನಿಗಾನಹಳ್ಳಿ ಕೆರೆ 18 ನಿವೇಶನ ನಿರ್ಮಾಣಹೆಣ್ಣೂರು ಕೆರೆ 434 ನಿವೇಶನ ನಿರ್ಮಾಣತಲಘಟ್ಟಪುರ ಕೆರೆ 94 ನಿವೇಶನ ನಿರ್ಮಾಣಕೇತಮಾರನಹಳ್ಳಿ ಕೆರೆ 230 ನಿವೇಶನ
ನಿರ್ಮಾಣಮಂಗನಹಳ್ಳಿ ಕೆರೆ 27 ನಿವೇಶನ ನಿರ್ಮಾಣಎಂಟು ವಲಯಗಳಲ್ಲಿ ಸರ್ಕಾರಿ ಸಂಸ್ಥೆಗಳು ನಡೆಸಿರುವ ಒಟ್ಟು ಒತ್ತುವರಿ ಅಂಕಿ ಅಂಶ ಇಲ್ಲಿದೆ ನೋಡಿ:
ಬೊಮ್ಮನಹಳ್ಳಿ ವಲಯಒಟ್ಟು ಕೆರೆಗಳ ಸಂಖ್ಯೆ – 47ಒಟ್ಟು ಜಾಗ – 1,167 ಎಕರೆಒತ್ತುವರಿ – 196.33 ಎಕರೆಒತ್ತುವರಿ ತೆರವು ಬಾಕಿ – 196 ಎಕರೆಒತ್ತುವರಿದಾರರು :
ಬಿಡಿಎ – 59ಎಕರೆಸ್ಲಂ ಬೋರ್ಡ್ – 25.76 ಎಕರೆಬಿಬಿಎಂಪಿ – 2.43 ಎಕರೆಬೆಂಗಳೂರು ದಕ್ಷಿಣ ವಲಯಒಟ್ಟು ಕೆರೆಗಳ ಸಂಖ್ಯೆ -12ಒಟ್ಟು ಜಾಗ -162.7 ಎಕರೆಒತ್ತುವರಿ – 77.19 ಎಕರೆಒತ್ತುವರಿ ತೆರವು ಬಾಕಿ – 77.19 ಎಕರೆಒತ್ತುವರಿದಾರರು:
ಬಿಬಿಎಂಪಿ – 2.45ಎಕರೆಬಿಡಿಎ – 1 ಎಕರೆಸ್ಲಂ ಬೋರ್ಡ್ – 0.22 ಗುಂಟೆಕೆಎಚ್‍ಬಿ – 0.8 ಗುಂಟೆಮಹದೇವಪುರ ವಲಯಕೆರೆಗಳ ಸಂಖ್ಯೆ – 52ಒಟ್ಟು ಜಾಗ -1845.6 ಎಕರೆಒತ್ತುವರಿ – 225.15ಎಕರೆಒತ್ತುವರಿ ತೆರವು ಬಾಕಿ – 2142 ಎಕರೆ ಒತ್ತುವರಿದಾರರು ಮಿಲಿಟರಿ – 131 ಎಕ್ಕರೆ ಕೆಐಎಡಿ ಬಿ – 0.6ಗುಂಟೆಜಲಮಂಡಳಿ – 0.13ಗುಂಟೆ
ಯಲಹಂಕ ವಲಯ ಕೆರೆಗಳ ಸಂಖ್ಯೆ – 28ಒಟ್ಟು ಜಾಗ -1371.20ಎಕರೆಒತ್ತುವರಿ – 133.5ಎಕರೆಒತ್ತುವರಿ ತೆರವು ಬಾಕಿ – 50.21 ಎಕರೆಒತ್ತುವರಿದಾರರು:ರೈಲ್ವೆ ಇಲಾಖೆ – 5.19ಎಕರೆ
ರಾಷ್ಟ್ರೀಯ ಹೆದ್ದಾರಿ ಪ್ರಾಕಾರ – 4.5 ಎಕರೆಬಿಬಿಎಂಪಿ – 3.2 ಎಕರೆBWSSB – 0.44 ಎಕರೆಕೆಹೆಚ್ ಬಿ – 0.33 ಎಕರೆಪೂರ್ವ ವಲಯಕೆರೆಗಳ ಸಂಖ್ಯೆ – 10ಒಟ್ಟು ಜಾಗ – 303.24 ಎಕರೆಒತ್ತುವರಿ – 116.35 ಎಕರೆಒತ್ತುವರಿ ತೆರವು ಬಾಕಿ – 113.32 ಎಕರೆ ಒತ್ತುವರಿದಾರರುಬಿಡಿಎ – 47.7 ಎಕರೆ ಅರಣ್ಯ ಇಲಾಖೆ – 13.23ರೈಲ್ವೆ ಇಲಾಖೆ – 1.19 ಎಕರೆ ಅಗ್ನಿಶಾಮಕ ಇಲಾಖೆ – . 30 ಎಕರೆಆರ್
ಆರ್ ನಗರ ವಲಯಕೆರೆಗಳ ಸಂಖ್ಯೆ – 37ಒಟ್ಟು ಜಾಗ – 852 ಎಕರೆ ಒತ್ತುವರಿ – 160.6 ಎಕರೆ ಒತ್ತುವರಿ ತೆರವು ಬಾಕಿ – 160.6 ಎಕರೆ ಒತ್ತುವರಿದಾರರು ಬಿಬಿಎಂಪಿ – 71.84 ಎಕರೆ ಬಿಡಿಎ – 2.24 ಎಕರೆ ಪಶ್ಚಿಮ ವಲಯ ಕೆರೆಗಳ ಸಂಖ್ಯೆ – 6ಒಟ್ಟು ಜಾಗ – 86 ಎಕರೆ ಒತ್ತುವರಿ – 30 ಎಕರೆ ಒತ್ತುವರಿ ತೆರವು ಬಾಕಿ – 29.34 ಎಕರೆ ಒತ್ತುವರಿದಾರರು ಕರ್ನಾಟಕ ಮಾಲಿನ್ಯ ಮಂಡಳಿ – 15.24 ಎಕರೆ ಬಿಬಿಎಂಪಿ – 8.35 ಎಕರೆ ಸ್ಲಂ ಬೋರ್ಡ್ – 2.02ಎಕರೆ