ಅಪರಾಧ
ಭೀಕರ ಅಪಘಾತ ಇಬ್ಬರ ಸಾವು

ಕೋಲಾರ ರಸ್ತೆಯ ಅಟ್ಟೂರು ಗೇಟ್ ಬಳಿ ಎರಡು ಕಾರುಗಳು ಹಾಗೂ ಕಂಟೈನರ್ ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.ಮೃತರನ್ನು ಇಬ್ರಾಹಿಂಪಾಷ(೧೭) ಹಾಗು ಶಾಜಿಯಾಬಾನು(೨೩) ಎಂದು ಗುರುತಿಸಲಾಗಿದ್ದು ೭ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆ.ಆರ್. ಪುರಂ ನಿವಾಸಿಗಳಾದ ಇವರು ಮುರುಗು ಮಲ್ಲ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಉಮಾಶಂಕರ್ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ,,