ಭಾರಿ ಗಾತ್ರದ ಹೆಬ್ಬಾವು ರಕ್ಷಣೆ

ಚಾಮರಾಜನಗರ; ತಾಲೂಕಿನ ಬದನಗುಪ್ಪೆ ಸಮೀಪದ ಮರಳಿಪುರ ಗ್ರಾಮದ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ಮೇರೆಗೆ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ನಂಜುಂಡಸ್ವಾಮಿ ಎಂಬುವರ ಜಮೀನಿನಲ್ಲಿ ಸಂಜೆ ಈ ಹೆಬ್ಬಾವು ಕಾಣಿಸಿಕೊಂಡಿದ್ದು, ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಇಲಾಖೆಯ ಸಿಬ್ಬಂದಿಗಳು ಉರಗ ತಜ್ಞರೊಂದಿಗೆ ಸ್ಥಳಕ್ಕೆ ಬಂದು ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಉರಗತಜ್ಞ ಅಶೋಕ್ ಅವರ ಕೈಗೆ ಹೆಬ್ಬಾವು ಕಚ್ಚಿ ಗಾಯಗೊಳಿಸಿದ್ದು ಸದ್ಯ ವೈದ್ಯರಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿ ಆರ್ ಎಫಚಂದ್ರಕುಮಾರ್ ನೀಡಿದ್ದಾರೆ.
ಹೆಬ್ಬಾವನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಗೌರಿಶಂಕರ್, ಮುಖಂಡರಾದ ರವಿ, ಬದನಗುಪ್ಪೆ ಮಂಜುನಾಥ್, ವೀರಭದ್ರ ಸ್ವಾಮಿ ಶಿಕ್ಷಕ ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.