Gamesಕ್ರೀಡೆ

ಭಾರತದ ಹಿರಿಯ ಮಹಿಳಾ ಕ್ರಿಕೆಟರ್ ಕರುಣಾ ಜೈನ್ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮೊದಲಿನಿಂದಲೂ ನನ್ನ ಕ್ರಿಕೆಟ್ ಪಯಣದ ಭಾಗವಾಗಿರುವ ನನ್ನ ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿಗಳು ಮತ್ತು ನನ್ನ ವೃತ್ತಿಜೀವನದ ಉದ್ದಕ್ಕೂ ಭಾಗವಾಗಿರುವ ನನ್ನ ಸಹ ಆಟಗಾರರಿಗೆ ಧನ್ಯವಾದಗಳನ್ನು ಹೇಳಲು ನಾನು ಈ ಅವಕಾಶವನ್ನು ಬಯಸುತ್ತೇನೆ . ” ಪ್ರತಿಯೊಬ್ಬರೂ ಆಟ ಮತ್ತು ಜೀವನದ ಬಗ್ಗೆ ವಿಭಿನ್ನವಾದದ್ದನ್ನು ನನಗೆ ಕಲಿಸಿದ್ದಾರೆ , ಅದು ನನ್ನನ್ನು ಇಂದು ಆಟಗಾರ ಮತ್ತು ವ್ಯಕ್ತಿಯನ್ನಾಗಿ ಮಾಡಿದೆ . ಇದು ನನಗೆ ಸಾಧ್ಯವಾದ ಅದ್ಭುತ ಪ್ರಯಾಣವಾಗಿದೆ ಮತ್ತು ನನ್ನ ಏರಿಳಿತದ ಸಮಯದಲ್ಲಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ” ಎಂದು ಕರುಣಾ ತನ್ನ ಅಧಿಕೃತ ಇನ್ ‌ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ . ಕರ್ನಾಟಕ ಮೂಲದ ಮಹಿಳಾ ವಿಕೆಟ್ ಕೀಪರ್ ಬ್ಯಾಟರ್ ಕರುಣಾ ಜೈನ್ ಹೆಸರಿನಲ್ಲಿ ಈಗಲೂ ಟೆಸ್ಟ್ ಕ್ರಿಕೆಟ್ ‌ ನಲ್ಲಿ ದಾಖಲೆ ಅಚ್ಚಳಿಯದೇ ಉಳಿದಿದೆ . ಮಹಿಳಾ ಟೆಸ್ಟ್ ಕ್ರಿಕೆಟ್ ‌ ನಲ್ಲಿ ಕರುಣಾ ಜೈನ್ ವಿಕೆಟ್ ಹಿಂಬದಿ 17 ಔಟ್ ಮಾಡಿದ್ದು , ಟೆಸ್ಟ್ ಕ್ರಿಕೆಟ್ ‌ ನಲ್ಲಿ ಎರಡನೇ ಬೆಸ್ಟ್ ಆಗಿದೆ . ಇವರನ್ನ ಹೊರತುಪಡಿಸಿ ಭಾರತದ ಮಹಿಳಾ ಕೀಪರ್ ಅಂಜು ಜೈನ್ ‌ ವಿಕೆಟ್ ಹಿಂಬದಿ 23 ಬಲಿ ಪಡೆದಿದ್ದಾರೆ . 2004 ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ ಕರುಣಾ ಜೈನ್ ‌ ಲಕ್ನೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 64 ರನ್ ಕಲೆಹಾಕಿದ ಬಳಿಕ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡರು . ಜೈನ್ ಒಡಿಐ ಚೊಚ್ಚಲ ಪಂದ್ಯದಲ್ಲಿ ಅಜೇಯ 68 ರನ್ ಗಳಿಸುವ ಮೂಲಕ , ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಕೇವಲ ಐದನೇ ಭಾರತೀಯ ಮಹಿಳೆಯಾಗಿದ್ದಾರೆ . 36 ವರ್ಷ ವಯಸ್ಸಿನ ಕರುಣಾ ಜೈನ್ 2014 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಮತ್ತು ಟೆಸ್ಟ್ ಪಂದ್ಯವನ್ನಾಡಿದರು . ಆಟವನ್ನು ಅಳವಡಿಸಿಕೊಳ್ಳಲು ಮತ್ತು ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅತ್ಯುತ್ತಮವಾದದ್ದನ್ನು ನೀಡಲು ನನಗೆ ಸುಲಭವಾಯಿತು . ಅವರು ಮಾಡಿದ ಅಚಲ ಬೆಂಬಲ ಮತ್ತು ತ್ಯಾಗದಿಂದಾಗಿ ನಾನು ಕ್ರೀಡೆಯನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಬಹಳ ಸಮಯದವರೆಗೆ ಕೊಡುಗೆ ನೀಡುವಂತಾಗಿದೆ ” ಎಂದು ಕರುಣಾ ಹೇಳಿದ್ದಾರೆ . ಏರ್ ಇಂಡಿಯಾ , ಕರ್ನಾಟಕ ಮತ್ತು ಪಾಂಡಿಚೇರಿಯನ್ನು ಒಳಗೊಂಡಂತೆ ನಾನು ಪ್ರತಿನಿಧಿಸಿರುವ ಬಿಸಿಸಿಐ ಮತ್ತು ರಾಜ್ಯ ಅಸೋಸಿಯೇಷನ್ ‌ ಗೆ ಮತ್ತು ಅವರು ನೀಡಿದ ಎಲ್ಲಾ ಬೆಂಬಲಕ್ಕೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಯಸುತ್ತೇನೆ . ” ಬಹಳಷ್ಟು ಸಂತೋಷ ಮತ್ತು ತೃಪ್ತಿಯ ಭಾವನೆಗಳೊಂದಿಗೆ , ಎಲ್ಲಾ ರೀತಿಯ ಕ್ರಿಕೆಟ್ ‌ ನಿಂದ ನನ್ನ ನಿವೃತ್ತಿಯ ಈ ಘೋಷಣೆಯನ್ನು ಮಾಡಲು ನಾನು ಸಮರ್ಥನಾಗಿದ್ದೇನೆ ಮತ್ತು ಆಟಕ್ಕೆ ಮತ್ತೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ” ಎಂದು ಕರುಣಾ ಜೈನ್ ‌ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ . ಭಾರತದ ಪರ 2005 ಮತ್ತು 2014 ರ ಅವಧಿಯಲ್ಲಿ 5 ಟೆಸ್ಟ್ ಪಂದ್ಯ , 44 ಏಕದಿನ ಪಂದ್ಯ ಮತ್ತು 9 ಟಿ 20 ಪಂದ್ಯಗಳನ್ನ ಆಡಿರುವ ಕರುಣಾ ಜೈನ್ ಕ್ರಮವಾಗಿ 195, 987, ಮತ್ತು 9 ರನ್ ಕಲೆಹಾಕಿದ್ದಾರೆ . ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ‌ ನ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ , ಕನ್ನಡತಿ ಕರುಣಾ ಜೈನಾ ಎಲ್ಲಾ ಮಾದರಿಯ ಕ್ರಿಕೆಟ್ ‌ ಗೆ ನಿವೃತ್ತಿ ಘೋಷಿಸಿದ್ದಾರೆ . ಈ ಮೂಲಕ ತಮ್ಮ ದೀರ್ಘಕಾಲದ ಕ್ರಿಕೆಟ್ ‌ ವೃತ್ತಿಜೀವನವನ್ನು ಜುಲೈ 24, 2022 ರಂದು ಕೊನೆಗೊಳಿಸಿದ್ದಾರೆ .

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button