ರಾಜ್ಯ
ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಂ-ಎಸ್ ಉಡಾವಣೆಗೆ ಕ್ಷಣಗಣನೆ!

ಭಾರತದ ಚೊಚ್ಚಲ ಖಾಸಗಿ ಬಾಹ್ಯಕಾಶ ನೌಕೆ ವಿಕ್ರಂ-ಎಸ್ ಇದೇ ತಿಂಗಳ ಎರಡನೇ ವಾರದಲ್ಲಿ ಉಡಾವಣೆಗೊಳ್ಳಲು ಸಜ್ಜಾಗಿದೆ.ಸ್ಕ್ರೈ ರೂಟ್ ಬಾಹ್ಯಾಕಾಶ ನಿಲ್ದಾಣಕ್ಕೆ ದೇಶದ ಮೊದಲ ಖಾಸಗಿ ಬಾಹ್ಯಕಾಶ ನೌಕೆ ಉಡಾವಣೆಗೆ ಸಜ್ಜಾಗಿದ್ದು, ನವೆಂಬರ್ 12ರಿಂದ 16ರಲ್ಲಿ ಉಡಾವಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.
ಪ್ರರಾಮದ್ ಕಾರ್ಯಾಚರಣೆ ಅಂಗವಾಗಿ ಭಾರತದಲ್ಲಿ ಸಿದ್ಧಪಡಿಸಲಾದ ಮೊದಲ ಖಾಸಗಿ ರಾಕೆಟ್ ಯೋಜನೆ ಇದಾಗಿದ್ದು, ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಈ ಯೋಜನೆಯ ರೂಪರೇಷೆ ಸಿದ್ಧಪಡಿಸಿ ಯೋಜನೆಯ ಮೇಲೆ ನಿಗಾ ವಹಿಸಿದೆ.
ಸ್ಕೈರೂಟ್ ಕಂಪನಿ ತಾಂತ್ರಿಕ ಉಡಾವಣೆ ಪ್ರಮಾಣಪತ್ರ ನಿರೀಕ್ಷಿಸುತ್ತಿದೆ. ಇನ್-ಸ್ಪೇಸ್ ಕಂಪನಿ ಖಾಸಗಿ ರಾಕೆಟ್ ಉಡಾವಣೆಯ ಯೋಜನೆಯ ಉಸ್ತುವಾರಿ ಹೊತ್ತಿದೆ.