ರಾಜ್ಯ

ಭಾರತದಲ್ಲಿ ‘UPI Lite’ ಸೇವೆ ಆರಂಭ!..ಗೂಗಲ್‌ಪೇ, ಫೋನ್‌ಪೇ ಕಥೆ ಕ್ಲೋಸ್?

ಭಾರತ ಸರ್ಕಾರವು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸರಳ ಹಾಗೂ ಸುರಕ್ಷಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೇಶದಲ್ಲಿ UPI (Unified Payments Interface) ಪೇಮೆಂಟ್ಸ್ ವ್ಯವಸ್ಥೆಯ ಮೂಲಕ ಹಣಕಾಸು ವಹಿವಾಟುಗಳನ್ನು ಸುಲಭವನ್ನಾಗಿಸಿದ ಸರ್ಕಾರವು ಇದೀಗ ಇದಕ್ಕಿಂತಲೂ ಹೆಚ್ಚು ಸರಳವಾದ ‘UPI Lite’ ಪೇಮೆಂಟ್ಸ್ ವ್ಯವಸ್ಥೆಯನ್ನು ಲಾಂಚ್ ಮಾಡಿದೆ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (RBI) ಕಡಿಮೆ ಮೌಲ್ಯದ ವಹಿವಾಟುಗಳಿಗಾಗಿ ಭಾರತದಲ್ಲಿ UPI Lite ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದೆ ಪಾವತಿಗಳನ್ನು ಪಾವತಿಸಬಹುದಾದ ಆಯ್ಕೆ ಸೇರಿದಂತೆ ಹಲವು ಅದ್ಭುತ ವೈಶಿಷ್ಟ್ಯಗಳನ್ನು ತರಲಾಗಿದೆ.

ಈ ‘UPI Lite’ ವ್ಯವಸ್ಥೆಯಿಂದ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದೆ ಪಾವತಿಗಳನ್ನು ಮಾಡಬಹುದು, ಪೀಕ್ ಅವರ್‌ಗಳಲ್ಲಿಯೂ ತ್ವರಿತವಾಗಿ ಹಣವನ್ನು ಕಳುಹಿಸಬಹುದು, UPI ಗಿಂತ ಭಿನ್ನವಾಗಿ, ಇದು ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸದೇ, ತನ್ನದೇ ವ್ಯಾಲೆಟ್ ಮೂಲಕ ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಈ ವ್ಯವಸ್ಥೆಯಲ್ಲಿ ಕಡಿಮೆ ಮೌಲ್ಯದ ಪಾವತಿಗಳನ್ನು ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್ ನಡೆಸಬಹುದು ಎಂದು ತಿಳಿದುಬಂದಿದೆ.

ಹಾಗಾದರೆ, ಭಾರತೀಯ ರಿಸರ್ವ್ ಬ್ಯಾಂಕ್‌ ಬಿಡುಗಡೆಗೊಳಿಸಿರುವ ನೂತನ UPI Lite ಪೇಮೆಂಟ್ಸ್ ತಂತ್ರಜ್ಞಾನವು ಹೇಗಿದೆ?, ಇದರಿಂದ ದೇಶದ ಜನೆತೆಗೆ ಆಗುವಂತಹ ಪ್ರಯೋಜನಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.ಏನಿದು ‘UPI Lite’ ಪೇಮೆಂಟ್ಸ್ ವ್ಯವಸ್ಥೆ?UPI ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿರುವ ಆದರೆ ಅದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ ಪರಿಚಯಿಸಿರುವ ಹೊಸ ಪೇಮೆಂಟ್ ವ್ಯವಸ್ಥೆ ಇದಾಗಿದೆ.

ಇದರ ಸಹಾಯದಿಂದ ಇಂಟರ್‌ನೆಟ್‌ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು. ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವುದಿಲ್ಲ.

ಬದಲಾಗಿ ನಿಮ್ಮ ಹಣವನ್ನು ವಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ. ಆಂದರೆ, ಇದಕ್ಕಾಗಿ ನೀವು ಮೊದಲೇ ನೀವು ಹಣವನ್ನು ಸೇರಿಸಬೇಕು.

ಹಾಗಾಗಿ, ಇದು ಒಂದು ಆನ್‌ಲೈನ್ ವ್ಯಾಲೆಟ್ ಎಂದು ಎನ್ನಬಹುದು.UPI ಲೈಟ್‌ಗೆ UPI ಪಿನ್ ನಮೂದಿಸುವ ಅಗತ್ಯವಿಲ್ಲಇದು ಒಂದು ರೀತಿಯ ವ್ಯಾಲೆಟ್ ಆಗಿರುವುದರಿಂದ (ಆನ್-ಡಿವೈಸ್ ವ್ಯಾಲೆಟ್ ಸಹ ಕರೆಯಬಹುದು), ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ (ಇಂಟರ್‌ನೆಟ್ ಹೊಂದಿರುವಾಗ) ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ ಮತ್ತು ನಂತರ ಇಂಟರ್ನೆಟ್ ಇಲ್ಲದಿದ್ದರೂ ಸಹ, ಬಳಕೆದಾರರು ತಕ್ಷಣ ಯಾರಿಗಾದರೂ ಹಣವನ್ನು ಕಳುಹಿಸಬಹುದು.

ಇದರಿಂದ UPI Lite ನಲ್ಲಿ UPI ಪಿನ್ ನಮೂದಿಸುವ ಅಗತ್ಯ ಕೂಡ ಇರುವುದಿಲ್ಲ. ಪೇಮೆಂಟ್ಸ್ ಮಾಡುವಾಗ ಇದು ನಿಮ್ಮ ವ್ಯಾಲೆಟ್‌ನಲ್ಲಿರುವ ಹಣವನ್ನು ನೇರವಾಗಿ ಪ್ರವೇಶಿಸುತ್ತದೆ ಮತ್ತು ಆ ಹಣವನ್ನು ಪೇಮೆಂಟ್ ಮಾಡಲು ಬಳಸಿಕೊಳ್ಳುತ್ತದೆ.

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ನಿಮ್ಮ UPI ಲೈಟ್ ವ್ಯಾಲೆಟ್‌ಗೆ ನೀವು ಎಷ್ಟು ಹಣವನ್ನು ಸೇರಿಸಬಹುದು ಎಂಬುದಕ್ಕೆ ಮಿತಿಯಿದೆ.UPI Lite’ ಪೇಮೆಂಟ್ಸ್ ಮಿತಿ ಎಷ್ಟು?UPI Lite ನಲ್ಲಿ ನಿಮ್ಮ ವ್ಯಾಲೆಟ್‌ಗೆ 2000 ರೂ.ವರೆಗೆ ಮಾತ್ರ ಸೇರಿಸುವುದಕ್ಕೆ ಅನುಮತಿಸಲಾಗಿದೆ.

ಏಕೆಂದರೆ, ಇದು ಇಂಟರ್‌ನೆಟ್‌ ಇಲ್ಲದೆ ಇರುವಾಗ ಕಾರ್ಯನಿರ್ವಹಿಸುವುದರಿಂದ ಕಡಿಮೆ ಮೌಲ್ಯದ ಪಾವತಿಗಳಿಗೆ ಮಾತ್ರ ಅನುಮತಿಸಲಿದೆ. ಅಲ್ಲದೆ, ನೀವು ಪ್ರತಿ ವಹಿವಾಟಿಗೆ ಗರಿಷ್ಠ 200 ರೂ.ಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗಲಿದೆ.

ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್ ಯುಪಿಐ ಲೈಟ್‌ನಲ್ಲಿ ನೀವು ದಿನವೊಂದಕ್ಕೆ ಎಷ್ಟು ವಹಿವಾಟುಗಳನ್ನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆ. ಪ್ರಸ್ತುತ ಯುಪಿಐ ತಂತ್ರಜ್ಞಾನದಿಂದ ಕೇವಲ 10 ಟ್ರಾನ್ಸಾಕ್ಶನ್ ಗಳನ್ನು ಮಾತ್ರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, UPI Lite ನಲ್ಲಿ ಚಿಕ್ಕ ಮೊತ್ತವನ್ನು ಎಷ್ಟೇ ಬಾರಿಯಾದರೂ ಕಳುಹಿಸಬಹುದು.

ಇದರಿಂದ ಗ್ರಾಹಕರಿಗೆ ಎದುರಾಗುತ್ತಿದ್ದ ಸಮಸ್ಯೆಯೊಂದು ತಪ್ಪಿದಂತಾಗಿದೆ.UPI Lite ಸೇವೆ ಬಿಡುಗಡೆಯಾದ ಸುದ್ದಿ ಕೇಳಿ ದೇಶದ ಜನರು ಸಂತಸಗೊಂಡಿದ್ದಾರೆ. UPI Lite ನಲ್ಲಿ ಒಂದು ದಿನದಲ್ಲಿ ಅನಿಯಮಿತ ವಹಿವಾಟುಗಳನ್ನು ಮಾಡಬಹುದಾದ ಆಯ್ಕೆಗೆ ಹಲವರು ಸ್ವಾಗತ ಕೋರಿದ್ದಾರೆ. ಯುಪಿಐ ತಂತ್ರಜ್ಞಾನದಿಂದ ಕೇವಲ 10 ಟ್ರಾನ್ಸಾಕ್ಶನ್ ಗಳನ್ನು ಮಾತ್ರ ನಡೆಸಲು ಅವಕಾಶ ಇತ್ತು.

ಒಮ್ಮೆ ಟ್ರಾನ್ಸಾಕ್ಶನ್ ಕೋಟಾ ಮುಗಿದ ನಂತರ ಪೇಮೆಂಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿತ್ತು. ಆದರೆ, ಈ UPI Lite ಈ ಸಮಸ್ಯೆಗೆ ಮುಕ್ತಿ ಹಾಡಿದೆ. ಇನ್ನು ಇಂಟರ್‌ನೆಟ್ ಇಲ್ಲದಾಗಲೂ ಹಣ ಕಳುಹಿಸಬಹುದಾದ ವ್ಯವಸ್ಥೆಯು ಸಹ ಎಲ್ಲರ ಗಮನ ಸೆಳೆದಿದೆ. ಸುರಕ್ಷತೆ ಮತ್ತು ಸರಳ ಎರಡೂ ವಿಧಾನಗಳಲ್ಲಿ ಹಣ ಪಾವತಿ ಮಾಡಬಹುದಾದ UPI Lite ವ್ಯವಸ್ಥೆಯು ಎಲ್ಲರ ಗಮನಸೆಳೆದಿದೆ.

UPI Lite ಸೇವೆ ಬಿಡುಗಡೆಯಾದ ಸುದ್ದಿ ಕೇಳಿ ದೇಶದ ಜನರು ಸಂತಸಪಟ್ಟರೆ, ಈ ಸುದ್ದಿ ಕೇಳಿ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ನಂತಹ ಮೊಬೈಲ್ ವಾಲೆಟ್ ಕಂಪೆನಿಗಳಿಗೆ ಶಾಕ್ ಆಗಿದೆ. UPI ಆಧಾರಿತವಾಗಿ ದೇಶದ ಜನರೆಗೆ ಸೇವೆಗಳನ್ನು ನೀಡುತ್ತಿರುವ ಈ ಅಪ್ಲಿಕೇಷನ್‌ಗಳು ಇಲ್ಲಿಯವರೆಗೂ ಸಾಕಷ್ಟು ಸರಳವಾಗಿ ಕಾಣುತ್ತಿದ್ದವು.

ಇದರಿಂದ ಜನರು ಕೂಡ ಈ ಅಪ್ಲಿಕೇರಷನ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಈ ಖಾಸಗಿ ಪೇಮೆಂಟ್ ಅಪ್ಲಿಕೇಷನ್‌ಗಳಿಗೆ ಹೋಲಿಸಿದರೆ, UPI Lite ವ್ಯಾಲೆಟ್ ಹೆಚ್ಚು ಸುಲಭವಾಗಿದೆ. ಇದರಿಂದ ಜನರು UPI Lite ಸೇವೆಯತ್ತ ಹೆಚ್ಚು ಮುಖ ಮಾಡಬಹುದು ಎಂದು ಈ ಎಲ್ಲಾ ಖಾಸಗಿ ಕಂಪೆನಿಗಳಿಗೆ ಚಿಂತೆ ಮೂಡಿದೆ.

ಆದರೆ, ಈ ವಿಷಯವು UPI Lite ಜನಪ್ರಿಯತೆಯ ಮೇಲೆ ನಿಂತಿದೆ.ಹೊಸ UPI Lite ವೈಶಿಷ್ಟ್ಯವು ಪ್ರಸ್ತುತ BHIM ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ನೀವು ವ್ಯಾಲೆಟ್ ಪ್ರವೇಶಿಸಬಹುದು ಮತ್ತು ಅದಕ್ಕೆ ಹಣವನ್ನು ಸೇರಿಸಬಹುದು. ಸದ್ಯಕ್ಕೆ, UPI ಲೈಟ್ ವೈಶಿಷ್ಟ್ಯವನ್ನು ಎಂಟು ಬ್ಯಾಂಕ್‌ಗಳು ಬೆಂಬಲಿಸುತ್ತಿವೆ.

ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸೇರಿವೆ.

UPI Lite ನಲ್ಲಿ ಶೀಘ್ರದಲ್ಲೇ ಹೆಚ್ಚಿನ ಬ್ಯಾಂಕ್‌ಗಳು ಈ ವೈಶಿಷ್ಟ್ಯವನ್ನು ಬೆಂಬಲಿಸುತ್ತವೆ ಎಂದು ನಾವು ನಿರೀಕ್ಷಿಸಬಹುದು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button