ಭಾರತದಲ್ಲಿ 8,084 ಹೊಸ ಕೊರೊನಾ ಸೋಂಕಿತರು ಪತ್ತೆ
India reports 8084 new Covid-19 cases and 10 deaths

ಕಳೆದ ಒಂದು ದಿನದಲ್ಲಿ 8,084 ಹೊಸ ಕರೋನ ಸೋಂಕಿತರು ಪತ್ತೆಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಇಂದು ಬೆಳಿಗ್ಗೆ ನೀಡಿರುವ ಅಂಕಿಅಂಶಗಳ ಪ್ರಕಾರ ಇದೇ ಅವಧಿಯಲ್ಲಿ 10 ಜನರು ಸಾವುನ್ನಪ್ಪಿದ್ದಾರೆ.ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.11 ಪ್ರತಿಶತವನ್ನು ಒಳಗೊಂಡಿವೆ, ಆದರೆ ಚೇತರಿಕೆ ದರವು ಶೇ.98.68 ಪ್ರತಿಶತದಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಳ ದಾಖಲಾಗಿದೆ.
ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,26,57,335 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.21 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿ ಇದುವರೆಗೆ 195.19 ಕೋಟಿ ಡೋಸ್ ಮೀರಿದೆ.ಕೇರಳ ಮತ್ತು ದೆಹಲಿಯಿಂದ ತಲಾ ಮೂರು, ಮಹಾರಾಷ್ಟ್ರದಿಂದ ಇಬ್ಬರು ಮತ್ತು ಮಿಜೋರಾಂ ಮತ್ತು ಪಂಜಾದ ತಲಾ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಿಂದ 1,47,870, ಕೇರಳದಿಂದ 69,835, ಕರ್ನಾಟಕದಿಂದ 40,108, ತಮಿಳುನಾಡಿನಿಂದ 38,025, ದೆಹಲಿಯಿಂದ 26,221, ಉತ್ತರ ಪ್ರದೇಶದಿಂದ 23,525 ಮತ್ತು ಪಶ್ಚಿಮ ಬಂಗಾಳದಿಂದ 21,205 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 5,24,771 ಸಾವುಗಳು ವರದಿಯಾಗಿವೆ. ಶೇ.70 ಕ್ಕಿಂತ ಹೆಚ್ಚು ಸಾವುಗಳು ಇತರೆ ರೋಗದಿಂದ ಬಳಲುತ್ತಿದ್ದವರು ಎಂದು ಸಚಿವಾಲಯ ಒತ್ತಿ ಹೇಳಿದೆ.ಪ್ರಸ್ತುತ 4ನೇ ಅಲೆ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದು ತಿಳಿಸಲಾಗಿದೆ.