ಅಪರಾಧರಾಜ್ಯರಾಷ್ಟ್ರಿಯ

ಭಾರತದಲ್ಲಿ ಮತ್ತೆ 67 ಅಶ್ಲೀಲ ವೆಬ್‌ಸೈಟ್‌ಗಳು ಬ್ಯಾನ್!

ಭಾರತದಲ್ಲಿ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್‌ಗಳನ್ನು ಪ್ರಕಟಿಸುವುದು ಅಥವಾ ವೀಕ್ಷಿಸುವುದು ಕಾನೂನು ಬಾಹಿರ.

ಆದರೂ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರವು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ಮತ್ತು ಉತ್ತರಾಖಂಡ ಹೈಕೋರ್ಟ್‌ನ ಆದೇಶದ ಆಧಾರದ ಮೇಲೆ ನಾಲ್ಕು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಇಲಾಖೆಯು (DoT) ಇಮೇಲ್‌ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಆದೇಶಿಸಿರುವ ಮಾಹಿತಿ ಹೊರಬಿದ್ದಿದೆ.

ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 67 ಅಶ್ಲೀಲ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶಿಸಿದ್ದು,

ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ವೆಬ್‌ಸೈಟ್‌ಗಳ ಮಾಹಿತಿ, ಯೂಆರ್‌ಎಲ್ ನೀಡಿರುವ ಸರ್ಕಾರ,

ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಗ ತರುವ ಅಶ್ಲೀಲ ವಿಡಿಯೋಗಳು ಇವೆ. ಈ ವಿಡಿಯೋಗಳು ಮಾರ್ಫ್ ಮಾಡಲಾಗಿರುವ ವಿಡಿಯೋಗಳಾಗಿವೆ ಎಂದು ನೋಟಿಸ್‌ನಲ್ಲಿ ಹೇಳಿದೆ.

ಈ 67 ಅಶ್ಲೀಲ ವೆಬ್‌ಸೈಟ್‌ಗಳು ಸೇರಿದಂತೆ ದೇಶದಲ್ಲಿ 900 ಕ್ಕೂ ಹೆಚ್ಚು ಅಶ್ಲೀಲ ವೆಬ್‌ಸೈಟ್‌ಗಳನ್ನು ನಿ‍ಷೇಧಿಸಿದಂತಾಗಿದ್ದು, ಹೊಸದಾಗಿ ನಿಷೇಧವಾಗಿರುವ 67 ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕೆಲವು ಜನಪ್ರಿಯ ತಾಣಗಳು ಸಹ ಇವೆ.

ನೀವು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರೆ ಖಂಡಿತವಾಗಿ ನಿಮ್ಮ ಮೊಬೈಲ್‌ನಲ್ಲಿ ಸೋವಾ (SOVA) ಎಂಬ ಭಯಾನಕ ವೈರಸ್ ಸೇರಿಕೊಂಡಿರಬಹುದು ಎಂಬ ಆತಂಕಕಾರಿ ಸುದ್ದಿಯೊಂದು ಇತ್ತೀಚಿಗಷ್ಟೇ ಹೊರಬಿದ್ದಿತ್ತು.

ಭಾರತೀಯರನ್ನು ಗುರಿಯಾಗಿಸಿಕೊಂಡು ಬಂದಿರುವ ಹೊಸ ಸೋವಾ (SOVA) ವೈರಸ್ ಬಗ್ಗೆ ನೀವು ಈಗಾಗಲೇ ತಿಳಿದಿರಬಹುದು.

ಈ ಭಯಾನಕ ವೈರಸ್ ಮೊಬೈಲ್‌ನಲ್ಲಿನ ಸಂಪೂರ್ಣ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೊಗಳನ್ನು ಸಹ ಕದಿಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಕ್ಷಣಮಾತ್ರದಲ್ಲಿ ಮೊಬೈಲ್ ಒಳಗೆ ಸೇರಿಕೊಳ್ಳಲಿದೆ.

ಈ ವೈರಸ್ ದೇಶದ ಹಲವು ಜನರ ಸ್ಮಾರ್ಟ್‌ಫೋನ್‌ಗಳಿಗೆ ಈಗಾಗಲೇ ಹೊಕ್ಕಿರಬಹುದು.

ಅದರಲ್ಲೂ ಅಶ್ಲೀಲ ಚಿತ್ರಗಳನ್ನು ನೋಡುವವರ ಮೊಬೈಲ್‌ನಲ್ಲಿ ಖಂಡಿತವಾಗಿಯೂ ಈ ವೈರಸ್ ಸೇರಿರುವ ಸಾಧ್ಯತೆ ಹೆಚ್ಚು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದರು.

ಸೋವಾ (SOVA) ಎಂಬ ಭಯಾನಕ ವೈರಸ್ ಮೊಬೈಲ್‌ಗೆ ಹೊಸ ಹೊಸ ವಿಷಯಗಳನ್ನು ಡೌನ್‌ಲೋಡ್ ಮಾಡುವಾಗ ಸೇರಿಕೊಳ್ಳುತ್ತಿದೆ.

ಈ ಸೋವಾ (SOVA) ವೈರಸ್ ಅನ್ನು ಅಭಿವೃದ್ಧಿಪಡಿಸಿರುವ ಸೈಬರ್ ಕ್ರಿಮಿನಲ್‌ಗಳು ಆನ್‌ಲೈನಿನಲ್ಲಿ ವೈರಸ್ ಅನ್ನು ಪ್ರಮೋಟ್ ಮಾಡುತ್ತಿದ್ದಾರೆ.

ವೆಬ್‌ ಮೂಲಕ ಹೆಚ್ಚು ಜನರು ಭೇಟಿ ನೀಡುತ್ತಿರುವ ಟೋರೆಂಟ್ ವೆಬ್‌ಸೈಟ್‌ಗಳು, ಅಶ್ಲೀಲ ಚಿತ್ರ ವೀಕ್ಷಣಾ ವೆಬ್‌ತಾಣಗಳು, ವೆಬ್‌ಸೈಟ್‌ ಲಿಂಕ್‌ಗಳು ಹಾಗೂ ಸೈಬರ್ ಪ್ರಮೋಟರ್ಸ್ ಜೊತೆಗೂಡಿ ಈ ವೈರಸ್ ಅನ್ನು ಹರಿಬಿಡಲಾಗುತ್ತಿದೆ.

ಈ ಎಲ್ಲಾ ಮಾದರಿಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಣಾ ವೆಬ್‌ತಾಣಗಳು ಕ್ರಿಮಿನಲ್‌ಗಳಿಗೆ ಹೆಚ್ಚು ವರದಾನವಾಗಿದೆ ಎಂದು ಹೇಳಲಾಗಿದೆ.

ಏಕೆಂದರೆ, ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಯಾವುದೇ ಲಿಂಕ್ ಒತ್ತಿದರೂ ಈ ಸೋವಾ (SOVA) ವೈರಸ್ ಅನ್ನು ಮೊಬೈಲ್‌ಗೆ ಸೇರುವಂತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಯಾವುದೇ ಒಂದು ಲಿಂಕ್ ಮಾಡಿದರೂ ಈ ಸೋವಾ (SOVA) ವೈರಸ್ ಮೊಬೈಲ್ ಒಳಗೆ ನುಸುಳಲಿದೆ. ಹೀಗೆ ಮೊಬೈಲ್‌ಗೆ ಸೇರಿಕೊಳ್ಳುವ ವೈರಸ್ ಬಗ್ಗೆ ಮೊಬೈಲ್ ಬಳಕೆದಾರರಿಗೆ ಯಾವುದೇ ಮಾಹಿತಿ ತಿಳಿಯುವುದಿಲ್ಲ.

ಅಷ್ಟೇ ಅಲ್ಲದೆ ಈ ಬಗ್ಗೆ ಸ್ವಲ್ಪ ಕೂಡ ಅನುಮಾನ ಬರುವುದಿಲ್ಲ. ಇನ್ನು ಈ ವೈರಸ್ ಅನ್ನು ಒಮ್ಮೆ ಮೊಬೈಲ್‌ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲದಂತೆ ಅಭಿವೃದ್ಧಿಪಡಿಸಿದ್ದಾರೆ.

ಹಾಗಾಗಿ, ಇದು ಮೊಬೈಲ್‌ನಲ್ಲಿ ಇರುವುದು ತಿಳಿಯದಂತೆ ಕೆಲಸ ಮಾಡುತ್ತಾ, ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುತ್ತದೆ.

ಇಷ್ಟೇ ಅಲ್ಲದೇ, ಈ ವೈರಸ್ ಮೊಬೈಲ್ ಕಾರ್ಯಗಳನ್ನು ಸ್ವೈಪ್ ಮಾಡಿ ನೋಡಬಹುದು, ವೆಬ್‌ಕ್ಯಾಮ್ ಮೂಲಕ ವಿಡಿಯೋ ಮಾಡಿಕೊಳ್ಳಬಹುದು.

ನಿಮ್ಮ ಸಾಧನಗಳನ್ನು ಲಾಕ್ ಮಾಡಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡಿಕೊಂಡರೆ ಹಣಕ್ಕೆ ಬೇಡಿಕೆ ಇಡಬಹುದು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button