
ಕೊರೊನಾ ಏರಿಳಿತ ಮುಂದುವರೆದಿದ್ದು, ದೈನಂದಿನ ಸೋಂಕು 15,940ರಷ್ಟಾಗಿದ್ದರೆ, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 91,779ಕ್ಕೆ ಏರಿಕೆಯಾಗಿದೆ. ದಿನವೊಂದರಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 3495ರಷ್ಟು ಹೆಚ್ಚಾಗಿದೆ.ಕೇವಲ ಶೇ.7-8ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ, ಶೇ..021ಕ್ಕೆ ಹೆಚ್ಚಾಗಿದೆ.
ಸದ್ಯದಲ್ಲಿ ಭಾರತೀಯ ವೈದ್ಯಕೀಯ ಸೌಲಭ್ಯಗಳ ಸಾಮಥ್ರ್ಯ ಶೇ.5ರಷ್ಟು ಸಕ್ರಿಯ ಪ್ರಕರಣಗಳನ್ನು ಧಾರಣ ಮಾಡುವ ಶಕ್ತಿ ಹೊಂದಿರುವುದರಿಂದ ಸೋಂಕು ಹೆಚ್ಚಳ ಆತಂಕಕಾರಿಯಾಗಿದೆ ಎಂಬ ಪರಿಗಣಿಸಲಾಗಿಲ್ಲ.
ಸೋಂಕು ಏರಿಕೆಯಾಗುತ್ತಿರುವ ನಡುವೆಯೇ ಚೇತರಿಕೆ ಪ್ರಮಾಣ ಕೂಡ ಸುಧಾರಿಸಿದೆ, ಶೇ.98.58ರಷ್ಟಿದೆ. 4,27,61,481 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಕೇರಳದಲ್ಲಿ 11, ಮಹಾರಾಷ್ಟ್ರದಲ್ಲಿ ಮೂರು, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಸಾವು ಸೇರಿ ಒಟ್ಟು 20 ಮಂದಿ ಸಾವನ್ನಪ್ಪಿದ್ದು, ಜೀವ ಹಾನಿಯ ಪ್ರಮಾಣ ಶೇ.1.21ರ ಮಿತಿಯಲ್ಲಿದೆ. ಕೋವಿಡ್ನಿಂದ ಜೀವ ಕಳೆದುಕೊಂಡವರ ಸಂಖ್ಯೆ ಒಟ್ಟು 5,24,974ರಷ್ಟಾಗಿದೆ.
ದಿನದ ಸೋಂಕಿನ ಪ್ರಮಾಣ ಶೇ.4.39ರಷ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,33,78,234ರಷ್ಟಾಗಿದೆ. ಸೋಂಕು ಏರಿಕೆ-ಇಳಿಕೆಯ ಹೊರತಾಗಿ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿಲ್ಲ.
ಎರಡನೇ ಅಲೆಯಲ್ಲಿ ಜೀವ ಹಾನಿ ಹೆಚ್ಚಾದಾಗ ಹೆದರಿದ ಜನ ಸಾಲುಗಟ್ಟಿ ಲಸಿಕೆ ಪಡೆದಿದ್ದರು.ಈಗ ಸೋಂಕು ಹೆಚ್ಚಳವಾಗುತ್ತಿದ್ದರು, ಜೀವ ಹಾನಿ ಮತ್ತು ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇರುವುದರಿಂದ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಈವರೆಗೂ ದೇಶದಲ್ಲಿ 196.94 ಡೋಸ್ ಲಸಿಕೆಗಳನ್ನು ಮಾತ್ರ ನೀಡಲಾಗಿದೆ.