ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಅಲ್‍ಖೈದಾ ಉಗ್ರರಿಂದ ಬೆದರಿಕೆ
Al Qaeda threatens suicide attacks in India

ಪ್ರವಾದಿ ಮೊಹಮ್ಮದರನ್ನು ಅಪಮಾನ ಮಾಡಿದವರಿಗೆ ಕ್ಷಮೆ ಇಲ್ಲ. ಹೀಗಾಗಿ ಅವರಿಗೆ ಶಿಕ್ಷೆ ನೀಡಲು ದೇಶದ ಹಲವು ನಗರಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಅಲ್ ಖೈದಾ ಸಂಘಟನೆಯ ಭಾರತೀಯ ಶಾಖೆ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.ಜೂ.6ರಂದು ಅಲ್ ಖೈದಾ ಸಂಸ್ಥೆಯ ಭಾರತೀಯ ಶಾಖೆ ಎಂದು ಗುರುತಿಸಲಾದ ಸಂಘಟನೆಯಿಂದ ಪತ್ರ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರವಾದಿಯವರನ್ನು ಸಮರ್ಥಿಸಿಕೊಳ್ಳಲು ನಾವು ವಿಫಲರಾದರೆ ನಮ್ಮ ತಾಯಿ ನಮ್ಮಿಂದ ಅಗಲಲಿ ಎಂದು ಒಕ್ಕಣೆ ಬರೆಯಲಾಗಿದೆ.
ಕೆಲವು ದಿನಗಳಿಂದ ಹಿಂದುತ್ವದ ಪ್ರಚಾರಕರು ಮತ್ತು ಅದರ ಧ್ವಜ ಹಿಡಿದವರು ಸಿರಿಯಾ ಸಿದ್ದಾಂತ ಮತ್ತು ಧಾರ್ಮಿಕ ನಂಬಿಕೆಗಳನ್ನು ಅಪಮಾನಿಸುತ್ತಿದ್ದಾರೆ. ದೇವರ ನಂತರ ಗೌರವಕ್ಕೆ ಪಾತ್ರರಾದ ಮೊಹಮ್ಮದ್-ಅಲ್-ಮುಸ್ತಾಫ, ಮೊಹಮ್ಮದ್- ಅಲ್-ಮುಜ್ತಾಬ್ ಮತ್ತು ಗೌರವಾನ್ವಿತ ಸಯೀದಾ ಆಯಿಷಾಬೆಂಟ್-ಅಬು-ಬಕರ್ ಅವರ ವಿರುದ್ಧ ವಿಕೃತ ಮನಸ್ಥಿತಿಗಳು ಅಥವಾ ಟಿವಿ ಚಾನೆಲ್‍ಗಳು ಅವಹೇಳನ ಮಾಡುತ್ತಿವೆ. ಇದರಿಂದ ಮುಸ್ಲಿಮರ ಹೃದಯದಲ್ಲಿ ಪ್ರತಿಕಾರ ಮತ್ತು ದ್ವೇಷದ ರಕ್ತ ದ್ರವಿಸುತ್ತಿದೆ.
ಭಾರತವನ್ನು ಹಿಂದುತ್ವದ ಭಯೋತ್ಪಾದಕರು ಆಕ್ರಮಿಸಿದ್ದಾರೆ. ನಾವು ನಮ್ಮ ಪ್ರವಾದಿಯ ಘನತೆಗಾಗಿ ಹೋರಾಡಬೇಕು. ಇತರರಿಗೂ ಹೋರಾಡಿ ಮಡಿಯಲು ಹೇಳಬೇಕು. ಪ್ರವಾದಿಯ ಮುಖಭಂಗ ಮಾಡಿದವರನ್ನು ಕೊಲ್ಲಬೇಕು. ನಾವು ನಮ್ಮ ದೇಹಕ್ಕೆ ಸ್ಪೋಟಕಗಳನ್ನು ಸುತ್ತಿಕೊಂಡು ನಮ್ಮ ಮಕ್ಕಳಿಗೂ ಅಳವಡಿಸಿ ಜನನಿಬಿಡ ಸ್ಥಳಗಳಲ್ಲಿ ಉಡಾಯಿಸಬೇಕು.
ಪ್ರವಾದಿಯವರನ್ನು ಅಗೌರವಿಸುವವರ ವಿಷಯದಲ್ಲಿ ಯಾವುದೇ ಕರುಣೆ ಇರಬಾರದು. ಯಾವುದೇ ಶಾಂತಿ ಮತ್ತು ಭದ್ರತೆ ಅವರನ್ನು ಕಾಪಾಡಬಾರದು. ಕೇಸರಿ ಭಯೋತ್ಪಾದಕರು ದೆಹಲಿ, ಬಾಂಬೆ, ಉತ್ತರಪ್ರದೇಶ, ಗುಜರಾತ್‍ಗಳಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು. ಇವರು ಮನೆಗಳಲ್ಲಾಗಲಿ, ಸೇನೆಯ ಅಡಗುತಾಣಗಳಲ್ಲಾಗಲಿ ಆಶ್ರಯ ಪಡೆಯಬಹುದು.ಏನೇ ಆದರೂ ನಮ್ಮ ಪ್ರತಿಕಾರ ಶತಸಿದ್ದ ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಈ ಪತ್ರ ಭಾರೀ ಸಂಚಲನ ಮೂಡಿಸಿದ್ದು, ಆತಂಕವನ್ನು ಸೃಷ್ಟಿಸಿದೆ. ಮಾನವ ಬಾಂಬ್ ಸೋಟಿಸುವ ಬೆದರಿಕೆ ಹಾಕುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮುನ್ಸೂಚನೆ ನೀಡಲಾಗಿದೆ. ಪತ್ರ ತಲುಪುತ್ತಿದ್ದಂತೆ ಕೇಂದ್ರ ಗುಪ್ತಚರ ದಳ ಎಚ್ಚೆತ್ತುಕೊಂಡಿದೆ. ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಈಗಾಗಲೇ ಸಂಘ ಪರಿವಾರ ಹಾಗೂ ಅದರ ಅಂಗಸಂಸ್ಥೆಗಳಿಗೆ ಬಿಗಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಭದ್ರತೆ ಹಾಗೂ ಸಾರ್ವಭೌತ್ವಕ್ಕೆ ಸವಾಲು ಎಸೆಯುವಂತೆ ಪತ್ರ ಬರೆದಿರುವ ಸಂಘಟನೆಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಕಾರ್ಯಾಚರಣೆಗಿಳಿದಿವೆ. ಎಲ್ಲದರ ನಡುವೆ ಜನಜೀವನದ ರಕ್ಷಣೆಗಾಗಿ ಬಿಗಿಬಂದೋಬಸ್ತ್ ಒದಗಿಸಲಾಗುತ್ತಿದೆ.