Life Styleರಾಜ್ಯರಾಷ್ಟ್ರಿಯಸಂಸ್ಕೃತಿ

ಭಾರತದಲ್ಲಿನ 576 ಮಾತೃಭಾಷೆಗಳ ಸಮೀಕ್ಷೆ ಪೂರ್ಣ

ಹೊಸದಿಲ್ಲಿ: ಪ್ರತಿಯೊಂದು ಸ್ಥಳೀಯ ಭಾಷೆಗಳ ಅಸ್ಮಿತೆ ಸಂರಕ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಯೋಜನೆಯಡಿ ಇದುವರೆಗೂ ಕ್ಷೇತ್ರವಾರು ವಿಡಿಯೊ ಚಿತ್ರೀಕರಣದ ಜತೆಗೆ 576 ಮಾತೃಭಾಷೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಸ್ಥಳೀಯ ಭಾಷೆಗಳ ಜತೆಗೆ ಅದರ ಉಪ ಭಾಷೆಗಳ ಸಮೀಕ್ಷೆಯೂ ಇದರಲ್ಲಿ ಸೇರಿದೆ. ವಿವಿಧ ಭಾಷೆ ಹಾಗೂ ವೈವಿಧ್ಯಮಯ ಸಂಸ್ಕೃತಿಯುಳ್ಳ ಭಾರತದ ದೇಸಿ ಸೊಗಡನ್ನು ಕಾಪಾಡುವ ಅಗತ್ಯವಿದೆ.

ಮಾತೃಭಾಷೆಯ ಅಸ್ಮಿತೆ ಸಂರಕ್ಷಿಸಲು ಮತ್ತು ವಿಶ್ಲೇಷಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ವೆಬ್‌ ದಸ್ತಾವೇಜು (ಆರ್ಕೈವ್‌) ಸ್ಥಾಪಿಸಲು ಯೋಜಿಸಲಾಗಿದೆ.

ಈ ಉದ್ದೇಶಕ್ಕಾಗಿ, ಭಾಷಾ ಶಾಸ್ತ್ರಜ್ಞರಿಂದ ದೇಸಿ ಭಾಷೆಗಳ ದತ್ತಾಂಶಗಳ ಜೋಡಣೆ ಮತ್ತು ಮಾಹಿತಿ ಸಂಪಾದನೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗೃಹ ಸಚಿವಾಲಯದ 2021-22ನೇ ಸಾಲಿನ ವರದಿ ತಿಳಿಸಿದೆ.

6ನೇ ಪಂಚವಾರ್ಷಿಕ ಯೋಜನೆ-ಯಿಂದಲೂ ದೇಶದಲ್ಲಿ ಭಾಷೆಗಳ ಸಮೀಕ್ಷೆ ಕಾರ್ಯ (ಎಲ್‌ಎಸ್‌ಐ) ಹಾಗೂ ಸಂಶೋಧನಾ ಚಟುವಟಿಕೆಗಳು ನಿಯಮಿತವಾಗಿ ನಡೆದುಕೊಂಡು ಬಂದಿವೆ.

ಸದ್ಯ ‘ಭಾರತದ ಮಾತೃಭಾಷಾ ಸಮೀಕ್ಷೆ’ (ಎಂಟಿಎಸ್‌ಐ) ಯೋಜನೆಯಡಿ ಇದುವರೆಗೂ 576 ಮಾತೃಭಾಷೆ ಮತ್ತು ಅದರ ಉಪ ಭಾಷೆಗಳ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಮುಗಿದಿದೆ.

ಎನ್‌ಐಸಿ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ)ಗಳು ಸಮೀಕ್ಷೆಗೆ ಒಳಪಡಿಸಿದ ಮಾತೃ ಭಾಷೆಗಳ ಆಡಿಯೋ- ವಿಡಿಯೋ ಫೈಲ್‌ಗಳ ಭಾಷಿಕ ದತ್ತಾಂಶಗಳನ್ನು ದಾಖಲಿಸುವ ಹಾಗೂ ಸಂರಕ್ಷಿಸುವ ಕಾರ್ಯ ಮಾಡುತ್ತಿವೆ.

ಮಾತೃಭಾಷೆಗಳ ವಿಡಿಯೋ-ಗ್ರಾಫ್ ಭಾಷಾ ದತ್ತಾಂಶಗಳನ್ನು ಎನ್‌ಐಸಿ ಸರ್ವೆಯಲ್ಲಿ ದಸ್ತಾವೇಜು ಉದ್ದೇಶದಿಂದ ಅಪ್ಲೋಡ್ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಸಮೀಕ್ಷೆ ಕಾರ್ಯಕ್ಕೆ ಈಗ ಮತ್ತೆ ಚಾಲನೆ ದೊರೆತಿದ್ದು, ಜಾರ್ಖಂಡ್‌ನಲ್ಲಿನ ಸ್ಥಳೀಯ ಭಾಷೆಗಳ ದಾಖಲೀಕರಣ ಪೂರ್ಣಗೊಳಿಸಲಾಗಿದೆ.

ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಕ್ಷೇತ್ರ ಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

2011ರ ಭಾಷಿಕ ಗಣತಿ ದತ್ತಾಂಶದ 2018ರ ವಿಶ್ಲೇಷಣೆ ಪ್ರಕಾರ, ಭಾರತದಲ್ಲಿ 19,500ಕ್ಕೂ ಅಧಿಕ ಭಾಷೆಗಳು ಅಥವಾ ಉಪಭಾಷೆಗಳನ್ನು ಭಾರತದಲ್ಲಿ ಮಾತೃ ಭಾಷೆಗಳನ್ನಾಗಿ ಬಳಸಲಾಗುತ್ತಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button