Uncategorized

ಭಯಾನಕವಾಗಿದೆ ಬೆಂಗಳೂರಲ್ಲಿ ಬಂಧಿಸಲಾದ ಉಗ್ರ ತಾಲಿಬ್ ಹುಸೈನ್‍ ಹಿನ್ನೆಲೆ..!

ಹಿಂದು ಸಮುದಾಯದವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಹಿಜ್ಬುಲ್ ಮುಜಾಯಿದ್ದಿನ್ ಉಗ್ರ ಸಂಘಟನೆಯ ಎ ದರ್ಜೆಯ ಭಯೋತ್ಪಾದಕ ತಾಲಿಬ್ ಹುಸೈನ್‍ನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್‍ಬಾಗ್ ಸಿಂಗ್ ತಿಳಿಸಿದ್ದಾರೆ.

ಬಂಧಿತ ಉಗ್ರ ಜಮ್ಮು ಕಾಶ್ಮೀರದಲ್ಲಿ ಹಿಂದು ಸಮುದಾಯದವರನ್ನು ಮತ್ತು ನಾಯಕರನ್ನು ಹತ್ಯೆ ಮಾಡುವ ಸಂಚು ರೂಪಿಸುವ ಮಾಸ್ಟರ್ ಮೈಂಡ್ ಆಗಿದ್ದು, ಈವರೆಗೂ ನಡೆದಿರುವ ಹತ್ಯೆಗಳಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.

17ನೇ ರಾಷ್ಟ್ರೀಯ ರೈಫಲ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ ತಾಲಿಬ್ ಹುಸೈನ್‍ನನ್ನು ಬಂಧಿಸಿವೆ.ಈ ಕಾರ್ಯಾಚರಣೆ ಮೂಲಕ ಭದ್ರತಾ ಪಡೆಗಳು ದೊಡ್ಡ ಯಶಸ್ಸು ಸಾಧಿಸಿವೆ. ಕಳೆದ ಐದು ತಿಂಗಳಲ್ಲಿ 47 ವಿವಿಧ ಭಯೋತ್ಪಾದಕ ಸಂಘಟನೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲಿಬ್ ಹುಸೈನ್ 2016ರಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಗೆ ಸೇರಿದ್ದವನಾಗಿದ್ದು, ಭದ್ರತಾ ಪಡೆಗಳ ಹಿಟ್ ಲಿಸ್ಟ್‍ನಲ್ಲಿ ಹೆಸರಿದ್ದರೂ ಸುೀಧಿರ್ಘ ಕಾಲ ತಾಲಿಬ್ ಬದುಕಿಳಿದ ಉಗ್ರನಾಗಿದ್ದಾನೆ. ಆತನನ್ನು ಶರಣಾಗುವಂತೆ ಮಾಡಿ ಮುಖ್ಯ ವಾಹಿನಿಗೆ ಕರೆ ತರಲು ಆತನ ಕುಟುಂಬದ ಸದಸ್ಯರು ಪ್ರಯತ್ನಿಸಿದ್ದರು.

ಆದರೂ ಅದು ಸಾಧ್ಯವಾಗಲಿಲ್ಲ.ಕಾಶ್ಮೀರದ ಕಿಸ್ವಾರ್ ಜಿಲ್ಲೆಯ ನಗ್ಸೇನಿ ತಹಸೀಲ್‍ನ ರಶಗ್ವಾರಿ ಗ್ರಾಮದವನಾದ ತಾಲಿಬ್ ಬಂದೂಕಿನೊಂದಿಗೆ ಕಿಸ್ವಾರದ ದಚನ್ ಮತ್ತು ಮವ್ರಾ ಪ್ರದೇಶಗಳಲ್ಲಿ ಅಡ್ಡಾಡುವುದನ್ನು ಜನ ಕಂಡಿದ್ದಾರೆ.

ಗುಜ್ಜರ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಆತನಿಗೆ ಬೆಟ್ಟಗುಡ್ಡಗಳ ಪರಿಚಯ ಚೆನ್ನಾಗಿತ್ತು ಎಂದು ಹೇಳಲಾಗಿದೆ.ತಾಲಿಬ್ ಬಂಧನವನ್ನು ದೊಡ್ಡ ಯಶಸ್ಸು ಎಂದು ಡಿಜಿಪಿ ಬಣ್ಣಿಸಿದ್ದಾರೆ.

ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ರಚೌರಿ ಮತ್ತು ಪೂಂಚ್ ಜಿಲ್ಲೆಯಲ್ಲಿನ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ.

ಅನಂತನಾಗ್ ಜಿಲ್ಲೆಯಲ್ಲಿ ಹಿಜ್ಬಲ್ ಮುಜಾಹಿದ್ದಿನ್ ಸಂಘಟನೆಯ ನಾಸಿರ್ ಖಾಂಡೆ ಅವರನ್ನು ಇತ್ತೀಚೆಗೆ ವಿಶೇಷ ಪಡೆಗಳು ಹೊಡೆ ದುರುಳಿಸಿವೆ.ತಾಲಿಬ್ ಜಮ್ಮು-ಕಾಶ್ಮೀರದಿಂದ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಪರಾರಿಯಾಗಿದ್ದು, ಬೆಂಗಳೂರಿನಲ್ಲಿ ಅಡಗಿದ್ದ.

ಬೆಂಗಳೂರಿನ ಶ್ರೀರಾಮಪುರದ ಪ್ರಾರ್ಥನಾ ಮಂದಿರವೊಂದರಲ್ಲಿ ಶುಕ್ರವಾರ ಧರ್ಮೋಪದೇಶಗಳನ್ನು ನೀಡುತ್ತಿದ್ದ, ಖಚಿತ ಮಾಹಿತಿ ಆಧರಿಸಿ ಜಮ್ಮುಕಾಶ್ಮೀರದ ರಾಷ್ಟ್ರೀಯ ರೈಫಲ್ ಪಡೆ ಕಾರ್ಯಾಚರಣೆ ನಡೆಸಿ ಜೂ.5ರಂದು ತಾಲಿಬ್‍ನನ್‍ನು ಬಂಸಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 2ರಂದು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ದುಷ್ಕøತ್ಯದಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್‍ನ್ನು ಉಗ್ರರು ಹತ್ಯೆ ಮಾಡಿದ್ದರು. ಅದಕ್ಕೂ ಮೊದಲು ಕಂದಾಯ ಇಲಾಖೆ ನೌಕರ ರಾಹುಲ್ ಭಟ್, ಶಿಕ್ಷಕಿ ರಜನಿ ಬಾಲ ಅವರನ್ನು ಹತ್ಯೆ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಲಾಗಿತ್ತು.

ಇದರ ಹಿಂದೆ ತಾಲಿಬ್‍ನ ಕೈವಾಡ ಇರುವ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button