Life Styleಆರೋಗ್ಯಜೀವನಶೈಲಿರಾಷ್ಟ್ರಿಯಸಿನಿಮಾ
ಬ್ಯೂಟಿ ಬೇಕೆಂದರೆ ನೀರು, ನಿದ್ರೆಯಲ್ಲಿ ಕಾಂಪ್ರಮೈಸ್ ಬೇಡವೆಂದ ನಟಿ ಕಾಜೋಲ್

ಬಾಲಿವುಡ್ ಚಿತ್ರ ಪ್ರೇಮಿಗಳ ನೆಚ್ಚಿನ ನಟಿ ಕಾಜೋಲ್ ತನ್ನ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಬಾಜೀಗರ್ ನಂಥ ಹಿಟ್ ಸಿನಿಮಾಗಳಿಂದ ಅಭಿಮಾನಿಗಳ ಮನಗೆದ್ದ ಮನೆಮಾತಾದ ಚೆಲುವೆ ಕಾಜೋಲ್ ತಮ್ಮದ ಹಿಂದಿನ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಅಂದ ಕಾಣಬೇಕೆಂದು ಚರ್ಮದ ಮೇಲೆ ಪ್ರಯೋಗ ಬೇಡ, ಎಲ್ಲಾ ನ್ಯಾಚುರಲ್ ಆಗಿ ಇರಲಿ. ದಿನಕ್ಕೆ ಕನಿಷ್ಠ ೮ ಲೋಟ ನೀರು ಕುಡಿಯಬೇಕು.
ಅದು ದೇಹದ ಸೌಂದರ್ಯಕ್ಕೂ ಅಗತ್ಯ, ಎರಡನೆಯದು ಆರೋಗ್ಯಕರ ಆಹಾರ. ಮೂರನೆಯದು ಒಳ್ಳೆಯ ನಿದ್ರೆ. ಊಟದ ವಿಚಾರದಲ್ಲಿ ಕಾಂಪ್ರಮೈಸ್ ಆದರೂ ನಿದ್ರೆ ವಿಚಾರದಲ್ಲಿ ಆಗುವುದಿಲ್ಲ ಎಂದಿದ್ದಾರೆ.
ಕನಿಷ್ಠ ೧೦ ಗಂಟೆ ನಿದ್ರೆ ಮಾಡುತ್ತೇನೆ. ಇದೆಲ್ಲಾ ನಮ್ಮ ತಾಯಿ ನನಗೆ ಹಾಗೂ ನನ್ನ ತಂಗಿಗೆ ನೀಡಿದ ಬ್ಯೂಟಿ ಟಿಪ್ಸ್ ಎಂದು ಕಾಜೋಲ್ ಹೇಳಿದ್ದಾರೆ.