ರಾಜಕೀಯರಾಜ್ಯ

ಬ್ಯಾಂಕ್ ಸಾಲ ಮಾಡಿ ಎಸ್ಕೇಪ್ ಆದ ಉದ್ಯಮಿಗಳ ವಿರುದ್ಧ ಗುಡುಗಿದ ನಿವೃತ್ತ ಕಮಿಷನರ್ ಭಾಸ್ಕರ್ ರಾವ್

ಬೆಂಗಳೂರು: ದೇಶದ ಬಹು ದೊಡ್ಡ ಕಂಪನಿಗಳು ಸೇರಿ ಉದ್ದಿಮೆದಾರರ ಸಾಲವನ್ನ ಕಳೆದ ಐದು ವರ್ಷದಲ್ಲಿ ಬರೊಬ್ಬರಿ 10ಲಕ್ಷ ಕೋಟಿ ಸಾಲ ಮನ್ನವನ್ನ ರಾಷ್ತ್ರೀಕೃತ ಬ್ಯಾಂಕ್ ಗಳು ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಮನ್ನಾ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ತಳಮಟ್ಟಕ್ಕೆ ಕುಸಿಯುವಂತೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾಸ್ಕರ್ ರಾವ್, ದೇಶದ ಕೆಲ ಅಗ್ರಗಣ್ಯ ಶ್ರೀಮಂತ ಉದ್ಯಮಿಗಳು ದೇಶವನ್ನ ಕೊಳ್ಳೆ ಹೊಡೆದು ತಲೆ ಮರೆಸಿಕೊಂಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಸೇರಿ ಹಣಕಾಸು ಸಂಸ್ಥೆಗಳಲ್ಲಿ ಲಕ್ಷಾಂತರ ಕೋಟಿ ಸಾಲ‌ಮಾಡಿ, ವಾಪಸ್ ಮಾಡದೇ ಉದ್ದೇಶಪೂರ್ವಕವಾಗಿ ತಲೆ ಮರೆಸಿಕೊಂಡಿದ್ದಾರೆ.

ಸಾರ್ವಜನಿಕ ಹಣವನ್ನ ಕೊಳ್ಳೆಹೊಡೆಯಲಾಗಿದೆ ಎಂಬ ಆಘಾತಕಾರಿ ವಿಚಾರ ಭಹಿರಂಗವಾಗಿದ್ರೂ ಅವರನ್ನ ಬಂಧಿಸುವಂತ ಕೆಲಸವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ಈ ಬಗ್ಗೆ ಕೇಂದ್ರ ಹಣಕಾಸು ಸಚಿವರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರೂ ಪ್ರಯೋಜನವಾಗಲಿಲ್ಲ.

ಲಕ್ಷಾಂತರ ಕೋಟಿ ಸಾಲ ವಸೂಲಾತಿ‌ ಮಾಡದೇ ಜಾಣಕುರುಡುತನ ಪ್ರಯೋಗ ಮಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯನ್ನು ಭಾಸ್ಕರ್ ರಾವ್ ತೀವ್ರವಾಗಿ ಖಂಡಿಸಿದರು.

ದೇಶದ ರೈತರು, ಸಣ್ಣ ಮತ್ತು ಅತೀ ಸಣ್ಣ ಉದ್ಯಮಿದಾರರು, ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ (NSO)ಯ ವರದಿ ಪ್ರಕಾರ ದೇಶದ ರೈತರ ಋಣದ ಪ್ರಮಾಣ ಕಳೆದ ಐದು ವರ್ಷದಲ್ಲಿ 60% ಅಧಿಕವಾಗಿದ್ದು,

ಇದರಲ್ಲಿ ಕರ್ನಾಟಕ ರಾಜ್ಯದ ಕುಟುಂಬದ ಸರಾಸರಿ ಋಣದಭಾದೆ ಶೇಕಡ 1.25 ಲಕ್ಷದಷ್ಟು ಇದೆ. ಈ ಋಣದ ಬಾಧೆಗೆ ಒಳಗಾಗಿರುವ ಎಲ್ಲಾ ಜನರ ಸಾಲಮನ್ನಾ ಮಾಡುವುದು ಸೂಕ್ತ ಎಂದು ಆಗ್ರಹಿಸಿದರು.

ಇನ್ನು ಈ ವೇಳೆ ಕೃಷಿ ಆರ್ಥಿಕ ತಜ್ಞ ಕಮ್ಮಾರೆಡ್ಡಿ, ರೈತ ಮುಖಂಡ ಬಡಗಲಪುರ ನಾಗೇಂದ್ರ ಸೇರಿದಂತೆ ಇನ್ನಿತರರ ಸುದ್ದಿಗೊಷ್ಠಿಯಲ್ಲಿ ಉಪಸ್ಥಿತಿ ವಹಿಸಿದ್ದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button