ಬೇಲ್ ಮೇಲೆ ಬಂದು ನನ್ನ ಕೊಂದು ಹಾಕ್ತಾನೆ’- 23 ಬಾರಿ ಚಾಕುವಿನಿಂದ ಇರಿತಕ್ಕೀಡಾದ ಮಹಿಳೆ ಕಣ್ಣೀರು

ಗದಗ: ಮತ್ತೆ ಮಹಿಳೆಗೆ ಶುರುವಾಗಿದೆ ಕಿರಾತಕನ ಭಯ.. ಕಿರಾತಕ ಬೇಲ್ ಮೇಲೆ ಬಂದ್ರೆ ನನ್ನನ್ನೂ ಕೊಲ್ಲುತ್ತಾನೆ ಎಂದ ಮಹಿಳೆ ಪ್ರಮೋದ್ ಮುತಾಲಿಕ್ ಬಳಿ ಕಣ್ಣೀರು ಹಾಕಿ ಅಳಲು ತೋಡಿಕೊಂಡ ಅಪೂರ್ವಾ. ಮೋಸ ಮಾಡಿದ ಮುಸ್ಲಿಂ ಪತಿಗೆ ಕಠಿಣ ಶಿಕ್ಷೆ ಆಗ್ಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲವ್ ಈಸ್ ಬ್ಲೈಂಡ್ ಅಂತಾರೆ. ಈ ಮಹಿಳೆ ಬಾಳಲ್ಲೂ ಆಗಿದ್ದು ಮಾತ್ರ ಘನಘೋರ ಘಟನೆ. ಪ್ರೀತಿಸಿ ಮದುವೆಯಾದ ಕಿರಾತಕ ಬಳಿಕ ಮಾನಸಿಕ ಹಿಂಸೆ ನೀಡಿ ಮಹಿಳೆ ಬದುಕೇ ಬರ್ಬಾದ ಮಾಡಿದ್ದಾನೆ. ಅಷ್ಟೇ ಅಲ್ಲ ಈ ಯುವತಿ ಮದುವೆಗೂ ಮುನ್ನವೇ ಮತ್ತೊಬ್ಬಳ ಜೊತೆ ಮದುವೆಯಾಗಿ ಮೋಸ ಮಾಡಿದ್ದಾನೆ. ಈ ಹಿಂದೂ ಮಹಿಳೆ ವಿಚ್ಛೆದನಕ್ಕೆ ಅರ್ಜಿ ನೀಡಿದ್ದೇ ತಡ 23 ಬಾರಿ ಮಚ್ಚಿನಿಂದ ಇರಿದು ಕೊಲೆ ಯತ್ನಿಸಿದ್ದ. ಮಹಿಳೆ ಈಗ ಚೇತರಿಕೆ ಕಾಣುತ್ತಿದ್ದಾಳೆ. ಆದ್ರೆ, ಈಗ ಮತ್ತೆ ಕೊಲ್ಲುವ ಭಯ ಮಹಿಳೆಗೆ ಶುರುವಾಗಿದೆ. ಮನೆಗೆ ಭೇಟಿ ನೀಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎದುರು ಕಣ್ಣೀರು ಹಾಕಿ ಗೋಳಾಡಿದ್ದಾಳೆ. ಈ ಕುಟುಂಬದ ರಕ್ಷಣೆಗೆ ಶ್ರೀರಾಮಸೇನೆ ಸಿದ್ದ ಅಂತ ಮುತಾಲಿಕ್ ಹೇಳಿದ್ದಾರೆ. ಹಿಂದೂ ಯುವತಿಯ ರಕ್ಷಣೆಗೆ ಉತ್ತರ ಕರ್ನಾಟಕದಲ್ಲೂ ಟಾಸ್ಕ್ ಫೋರ್ಸ್ ರಚನೆ ಘೋಷಣೆ.
ಗದಗ ಮೂಲದ ಅಪೂರ್ವಾ ಪುರಾಣಿಕ ಎಂಬ ಎಂಬಿಎ ವಿದ್ಯಾರ್ಥಿನಿಯನ್ನ ಹುಬ್ಬಳ್ಳಿ ಮೂಲದ ಇಝಾಜ್ ಶಿರೂರು ಎನ್ನುವ ಯುವಕ ಮದುವೆಯಾಗಿದ್ದ. ಆದರೆ ಆತ ಈ ಮೊದಲೇ ಒಂದು ಮದುವೆಯಾಗಿ ಅವನಿಗೆ ಮೂರು ಮಕ್ಕಳೂ ಸಹ ಇದ್ದಾರೆ ಅನ್ನೋ ಸತ್ಯವನ್ನ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಈ ಸತ್ಯವನ್ನು ಯುವತಿಗೆ ತಿಳಿಸದೇ ಆಕೆಯನ್ನ ಪುಸಲಾಯಿಸಿ ಪ್ರೀತಿ ಮಾಡಿ ಕುಟುಂಬದ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದ. ಆತ ಮೊದಲೇ ಮದುವೆಯಾಗಿದ್ದಾನೆ ಎಂಬ ಸಂಗತಿ ಯುವತಿಗೆ ತಿಳಿದ ಬಳಿಕ ಆಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ತವರು ಮನಗೆ ಆಗಮಿಸಿದ್ದಳು. ಇದ್ರಿಂದ ಕೋಪಗೊಂಡ ಇಝಾಜ್ ಶಿರೂರು ಮಾರ್ಚ್ 10 ರಂದು, ಬೆಳ್ಳಂಬೆಳಗ್ಗೆ ಪತ್ನಿ ಸ್ಕೂಟಿ ಕಲಿಯುವಾಗ ಬಂದು ಆಕೆ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿದ್ದಾನೆ. ಆಕೆಗೆ ಒಂದು ಮುದ್ದಾದ ಮಗುವಿದ್ದರೂ ಸಹ ಕರುಣೆ ತೋರದ ಪಾಪಿ, ಮಚ್ಚಿನಿಂದ ಸಿಕ್ಕಸಿಕ್ಕಲ್ಲೇ ಮನಬಂದಂತೆ ಆಕೆಯ ಮೇಲೆ ಸುಮಾರು 23 ಕಡೆ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದ. ಇದೀಗ ಈ ಸಂತ್ರಸ್ಥೆ ಚೇತರಿಸಿಕೊಂಡಿದ್ದು, ಘಟನೆ ಬಗ್ಗೆ ಬಾಯಿಬಿಟ್ಟಿದ್ದಾಳೆ.