ರಾಜ್ಯ

ಬೇಬಿಬೆಟ್ಟದಲ್ಲಿರುವ ಮಠಕ್ಕೆ ನುಗ್ಗಿ ಬೇಟೆಯಾಡಿದ ಚಿರತೆ!

Mandya

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಬೇಬಿ ಬೆಟ್ಟದಲ್ಲಿರುವ ಶ್ರೀ ರಾಮಯೋಗೀಶ್ವರ ಮಠದ ಮುಂಭಾಗ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ.

ಮಠಕ್ಕೆ ನುಗ್ಗಿದ ಚಿರತೆ ನಾಯಿಮರಿಯನ್ನ ಕಚ್ಚಿಕೊಂಡ ಹೋಗಿದೆ. ಈ ದೃಶ್ಯಾವಳಿಗಳು ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮಠದ ಆವರಣದಲ್ಲಿದ್ದ ನಾಯಿ ಸತ್ತಿರುವುದನ್ನು ನೋಡಿ, ಚಿರತೆ ಬಂದಿರಬಹುದು ಎಂಬ ಅನುಮಾನದಿಂದ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಕಳೆದ ಮಧ್ಯರಾತ್ರಿ ಮಠದ ಆವರಣದಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ.

ಈಗಾಗಲೇ ಚಿರತೆ ಆರೇಳು ಬಾರಿ ದಾಳಿ ನಡೆಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಿರತೆ ಪ್ರತ್ಯಕ್ಷಗೊಂಡಿರುವ ಗ್ರಾಮಸ್ಥರಲ್ಲಿ ಭೀತಿ ಹುಟ್ಟುಹಾಕಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button