ಅಪರಾಧಬೆಂಗಳೂರುರಾಜ್ಯ

ಬೇಕಾಬಿಟ್ಟಿಯಾಗಿ ರಸ್ತೆಗೆ, ಫುಟ್‌ಪಾತ್‌ಗೆ ಹರಡಿಕೊಂಡಿದ್ದ ಒಎಫ್‌ಸಿ ಕೇಬಲ್‌ಗಳ ತೆರವು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ಗುಂಡಿಗಳ ರೀತಿಯಲ್ಲೇ ಮತ್ತೊಂದು ಕಂಟಕವಿದೆ..! ಅದು ಕೇಬಲ್‌ಗಳ ಹಾವಳಿ..! ರಸ್ತೆ, ಫುಟ್‌ಪಾತ್‌, ಕಾಂಪೌಂಡ್‌, ಮರ, ವಿದ್ಯುತ್ ಕಂಬ ಹೀಗೆ..

ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಿದ್ದಿರುವ ಕೇಬಲ್‌ಗಳು ನಿಜಕ್ಕೂ ಮಾರಣಾಂತಿಕ..! ಇದೀಗ ಈ ಕೇಬಲ್‌ ಹಾವಳಿಗೆ ಮುಕ್ತಿ ಹಾಡಲು ಬಿಬಿಎಂಪಿ ಕೊನೆಗೂ ನಿರ್ಧರಿಸಿದಂತಿದೆ.

ಫುಟ್‌ಪಾತ್‌ನಲ್ಲಿ ನಡೆಯುವ ಪಾದಚಾರಿಗಳ ಕಾಲಿಗೆ ಈ ಕೇಬಲ್‌ಗಳು ಸಿಲುಕಿದರೆ ಮುಗ್ಗರಿಸಿ ಬೀಳೋದು ಖಚಿತ.. ಒಂದು ವೇಳೆ ವಾಹನಗಳ ಚಕ್ರಕ್ಕೆ ಸಿಲುಕಿದರೆ ಅಪಘಾತ ಗ್ಯಾರಂಟಿ..

ಮರಗಳ ಮೇಲೆ, ವಿದ್ಯುತ್ ಕಂಬಗಳ ಮೇಲೆ ನೇತಾಡುವ ಕೇಬಲ್‌ಗಳು ವೇಗವಾಗಿ ಸಾಗುವ ವಾಹನ ಚಾಲಕರ ಹೆಲ್ಮೆಟ್‌, ಕುತ್ತಿಗೆಗೆ ಸುತ್ತಿಕೊಂಡರೆ ನಿಜಕ್ಕೂ ಮಾರಣಾಂತಿಕ.. ಈ ಹಿನ್ನೆಲೆಯಲ್ಲಿ ಇಂಥಾ ಕೇಬಲ್‌ಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ.

ಬಿಎಸ್‌ಎನ್‌ಲ್‌ನ ಸ್ಥಿರ ದೂರವಾಣಿ ಕೇಬಲ್‌ಗಳು ಬೇಕಾಬಿಟ್ಟಿಯಾಗಿ ಹರಡಿಕೊಂಡಿರೋದು ಬೆಂಗಳೂರಿನಲ್ಲಿ ಅಷ್ಟಾಗಿ ಕಾಣ ಸಿಗುವುದಿಲ್ಲ. ಅವುಗಳನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಿಸಿರುತ್ತಾರೆ.

ಆದರೆ, ಖಾಸಗಿ ಟೆಲಿಕಾಂ ಕಂಪನಿಗಳು, ಇಂಟರ್‌ನೆಟ್‌ ಪೂರೈಕೆದಾರರ ಒಎಫ್‌ಸಿ ಕೇಬಲ್‌ಗಳು ಮಾತ್ರ ರಾಜಾರೋಷವಾಗಿ ಹರಡಿಕೊಂಡಿರುತ್ತವೆ. ಟಿವಿ ಕೇಬಲ್‌ಗಳಂತೂ ವಿದ್ಯುತ್ ಕಂಬಗಳಿಂದ ಮರಗಳವರೆಗೆ ಎಲ್ಲೆಂದರಲ್ಲಿ ರಾಶಿ ರಾಶಿ ಬಿದ್ದಿರುತ್ತವೆ.

ಕೇಬಲ್‌ಗಳನ್ನು ಈ ರೀತಿ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಹಾಕುವಂತೆಯೇ ಇಲ್ಲ. ಈ ಕುರಿತಾಗಿ ಸ್ಪಷ್ಟ ನಿಯಮಾವಳಿಗಳು ಇವೆ. ಆದರೆ, ಅದನ್ನು ಯಾವುದೇ ಸಂಸ್ಥೆಗಳು ಪಾಲನೆ ಮಾಡುತ್ತಿಲ್ಲ.

ಇವುಗಳ ಮೇಲೇ ನಿಗಾ ವಹಿಸಬೇಕಾದವರೂ ಕೂಡಾ ಕಣ್ಮುಚ್ಚಿ ಕುಳಿತಿದ್ದರೇನೋ..! ಇದೀಗ ಬಿಬಿಎಂಪಿಗೆ ಎಚ್ಚರವಾದಂತೆ ಕಂಡು ಬರ್ತಿದೆ..!

ಮಳೆ ಹಾನಿ, ರಸ್ತೆ ಗುಂಡಿ, ಎಲ್ಲೆಂದರಲ್ಲಿ ನೀರು ನಿಂತು ಅಧ್ವಾನಗಳು ಸೃಷ್ಟಿಯಾಗಿರುವ ಹೊತ್ತಲ್ಲೇ, ಬಿಬಿಎಂಪಿಗೆ ಕೇಬಲ್‌ಗಳೂ ಗಮನ ಸೆಳೆದಿವೆ..! ಯದ್ವಾತದ್ವಾ ಹರಡಿಕೊಂಡಿದ್ದ ಕೇಬಲ್‌ಗಳಿಗೆ ಮುಲಾಜಿಲ್ಲದೆ ಕತ್ತರಿ ಹಾಕೋಕೆ ಹೊರಟಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಖಾಸಗಿ ಇಂಟರ್‌ನೆಟ್‌ ಪೂರೈಕೆದಾರ ಸಂಸ್ಥೆಗಳೂ ಕೂಡಾ ತಾವೇ ಖುದ್ದಾಗಿ ರಸ್ತೆಗೆ, ಫುಟ್‌ಪಾತ್‌ಗೆ ಹರಡಿಕೊಂಡಿದ್ದ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.

ಈ ಕುರಿತಂತೆ ಬಿಬಿಎಂಪಿ ಮೂಲಗಳಿಂದಲೂ ಅಧಿಕೃತ ಮಾಹಿತಿ ಲಭ್ಯವಾಗಿದೆ. ಕೇವಲ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಹರಡಿಕೊಂಡಿರುವ ಕೇಬಲ್‌ಗಳನ್ನು ಮಾತ್ರ ತೆರವುಗೊಳಿಸಲು ಅನುಮತಿ ಸಿಕ್ಕಿದೆ ಎಂದು ಬಿಬಿಎಂಪಿ ನೌಕರರೊಬ್ಬರು ಮಾಹಿತಿ ನೀಡಿದ್ಧಾರೆ.

ಮರಗಳಲ್ಲಿ ಹರಡಿಕೊಂಡಿರುವ ಕೇಬಲ್‌ಗಳಿಗೆ ಕತ್ತರಿ ಪ್ರಯೋಗ ಮಾಡಲು ಇನ್ನಷ್ಟು ದಿನ ಕಾಯಲೇ ಬೇಕಿದೆ..!

ಬೆಂಗಳೂರಿನ ಬೀದಿಗಳಲ್ಲಿ ಸಾವಿನ ಕುಣಿಕೆಗಳಾಗುತ್ತಿವೆ ಒಎಫ್ಸಿ ಕೇಬಲ್‌ಗಳು: ಸಿಲಿಕಾನ್‌ ಸಿಟಿಯ ಸೌಂದರ್ಯಕ್ಕೆ ಕಪ್ಪು ಚುಕ್ಕೆ.

ಮರಗಳಿಗೆ ಮಾರಣಾಂತಿಕವಾದ ಕೇಬಲ್‌ಗಳು..!ಹಾಗೆ ನೋಡಿದ್ರೆ ಕೇಬಲ್‌ಗಳು ರಸ್ತೆ ಹಾಗೂ ಫುಟ್‌ಪಾತ್‌ನಲ್ಲಿ ಬಿದ್ದಿದ್ದರೆ ಮನುಷ್ಯನಿಗೆ ಅಪಾಯಕಾರಿ, ಇನ್ನು ಮರಗಳಿಗೆ ಸುತ್ತುಗಟ್ಟಿದ್ದರೆ ಮರಗಳ ಜೀವಕ್ಕೂ ಅಪಾಯಕಾರಿಯೇ..!

ಮರಗಳ ಉಸಿರುಗಟ್ಟಿಸುವಂತೆ ಹರಡಿರುವ ಕೇಬಲ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಲೇಬೇಕಿದೆ.

ಏಕೆಂದರೆ, ಮರಗಳಿಗೆ ಮೊಳೆ ಹೊಡೆಯುವುದು, ಬ್ಯಾನರ್ ಕಟ್ಟುವುದು ಹೀಗೆ ಹಲವು ದೌರ್ಜನ್ಯಗಳನ್ನು ಜನ ಎಸಗುತ್ತಿದ್ದಾರೆ.

ಇದರ ಜೊತೆಯಲ್ಲೇ ಕೇಬಲ್‌ಗಳೂ ಮಾರಣಾಂತಿಕ ಆಗುತ್ತಿವೆ. ಹೀಗಾಗಿ, ಈ ಅಕ್ರಮಗಳಿಗೆ ಆದಷ್ಟು ಬೇಗ ಅಂತ್ಯ ಹಾಡಬೇಕಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button