ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ರಕ್ಷಿತ್ ಶಿವರಾಮ್ ಅಧ್ಯಕ್ಷತೆಯಲ್ಲಿ ನೆರವೇರಿತು

ಮಂಗಳೂರು : ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಆಶ್ರಯದಲ್ಲಿ ಬೆಸ್ಟ್ ಕಳೆಂಜ ಸಹಕಾರದೊಂದಿಗೆ ಇಂದು ಕಳೆಂಜ ಗ್ರಾಮದ ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ,ಸಾಧಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ,ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಭಾಗವಹಿಸಿದರು. ಕಾರ್ಯಕ್ರಮವನ್ನು ಹಿರಿಯ ಪ್ರಗತಿಪರ ಕೃಷಿಕ , ನಾಟಿ ವೈದ್ಯರು ರಮಾನಾಥ ರೈ ಶಿಬಾರಾಜೆ,ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಕು.ಅನನ್ಯ ಸೇರಿದಂತೆ 600 ಕ್ಕೂ ಹೆಚ್ಚು ಅಂಕ ಪಡೆದ ಕಳೆಂಜ ಗ್ರಾಮದ ವಿದ್ಯಾರ್ಥಿಗಳನ್ನು, ಹಾಗೂ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಯರ್ತಡ್ಕ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸುಂದರ ಗೌಡ ಕುದ್ದ , ಶ್ರೀ ಉಮಾಮಹೇಶ್ವರ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾದ ಬಾಲಣ್ಣ ಗೌಡ ಕೈರೋಡಿ , ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ ಬಿ.ಎಸ್,ನಿತ್ಯಾನಂದ ರೈ
ನಿಡ್ಲೆ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪಿ.ಟಿ ಸೆಬಾಸ್ಟಿಯನ್
ಸೇವೆ ಸಹಕಾರಿ ಸಂಘದ ನಿರ್ದೇಶಕರು ಅಶೋಕ್ ಭಟ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಕುಶಲಾಪ್ಪ ಗೌಡ,ಪ್ರಮೋದ್ ಕೆ ನಾಯರ್,ಶ್ರೀದರ್,ಸೋಮಪ್ಪ ಪೂಜಾರಿ ನಿಡ್ಡಾಜೆ,
ಬೆಳ್ತಂಗಡಿ ಸೇವದಾಳದ ಅಧ್ಯಕ್ಷರಾದ ಶರತ್,
ಬೆಸ್ಟ್ ಕಳೆಂಜ ಸದಸ್ಯರಾದ ಜಿಜೋಯಿ,ಸೀತಾರಾಮ ,
ಕೃಷ್ಣಪ್ಪ ಗೌಡ ಕುಂಟ್ಯಾನ್,ತೋಮಸ್ ,
ಬಿನೋಯಿ,ವಾಮನ, ವಸಂತ ಪೂಜಾರಿ ,ರಘು ಚಂದ್ರ,ಶಿವಪ್ಪ ಗೌಡ.ಹಾಗೂ ಪೋಷಕರು ,ಪ್ರಮುಖರು ಉಪಸ್ಥಿತರಿದ್ದರು