ಬೆಂಗ್ಳೂರಲ್ಲಿ ಫ್ಲೆಕ್ಸ್ , ಬ್ಯಾನರ್ ಬ್ಯಾನ್
banner ban bbmp,BBMP Chief Commissioner Tushar Giri Nath

ನಗರದಲ್ಲಿ ಬ್ಯಾನರ್ ಅಳವಡಿಕೆ ಸಂಬಂಧ ನೀಡಿದ್ದ ಗಡುವು ಮುಗಿದಿದ್ದು, ಯಾರಾದರೂ ಫಲಕಗಳನ್ನು ಅಳವಡಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ಜೂ.18ರವರೆಗೂ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಸೂಚಿಸಲಾಗಿತ್ತು. ಅದರಂತೆ 16 ಸಾವಿರಕ್ಕೂ ಅಕ ಬ್ಯಾನರ್, ಫ್ಲೆಕ್ಸ್ ತೆರವು ಮಾಡಿದ್ದೇವೆ ಎಂದರು.
25ರ ನಂತರ ಯಾವುದೇ ಫ್ಲೆಕ್ಸ್, ಬ್ಯಾನರ್ ನಗರದಲ್ಲಿ ಇರುವುದಿಲ್ಲ ಎಂದ ಅವರು, ಕೆಲ ಕಡೆ ರಾತ್ರೋರಾತ್ರಿ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಕೆ ಮಾಡುತ್ತಾರೆ. ಆದರೆ, ಅದನ್ನು ತೆರವು ಮಾಡುವಷ್ಟು ಸಿಬ್ಬಂದಿ ನಮ್ಮ ಬಳಿ ಇಲ್ಲ ಎಂದು ಹೇಳಿದರು. ಇನ್ನೂ ಒಂದು ವಾರದ ಸಮಯ ಈಗಾಗಲೇ ನೀಡಿದ್ದೀವಿ. ಅಷ್ಟರ ಮೇಲೂ ಫ್ಲೆಕ್ಸ್, ಬ್ಯಾನರ್ ಇದ್ದರೆ ಹಾಕಿದ್ದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ರಸ್ತೆ ಗುಂಡಿ ಕುರಿತು ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿ ದಿನಾನೂ ಇದ್ದೇ ಇರುತ್ತೆ. ಈ ಕುರಿತು ಪ್ರತಿವಾರ ಸರ್ವೆ ಮಾಡುತ್ತಿದ್ದೇವೆ. ಪ್ರತಿವಾರನೂ ಮೂರು ಸಾವಿರ ಗುಂಡಿಗಳು ಹೊಸದಾಗಿ ಪತ್ತೆಯಾಗುತ್ತಿವೆ ಎಂದು ಹೇಳಿದರು.
ದೂರು ನೀಡಲಾಗುವುದುಬಿಬಿಎಂಪಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಬಗೆಯ ನೀತಿ ಹೊಂದಿದೆ. ಕಾಂಗ್ರೆಸ್ ಬ್ಯಾನರ್ ಅಳವಡಿಕೆ ಮಾಡಿದಾಗ ಮೊಕದ್ದಮೆ ದಾಖಲು ಮಾಡಿತ್ತು. ಆದರೆ, ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದ. ಈ ಸಂಬಂಧ ದೂರು ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.