ರಾಜ್ಯ

ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ

ಈ ತಿಂಗಳಿಂದ ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕಲ್ ಬಸ್‍ಗಳನ್ನು ರಸ್ತೆಗೆ ಬಿಡಲು ಕೆಎಸ್‍ಆರ್‍ಟಿಸಿ ಚಿಂತನೆ ನಡೆಸಿದೆ.

ಮೈಸೂರಿಗೆ ಡಿ.15 ರಿಂದ ವಿದ್ಯುತ್ ಚಾಲಿತ ಎಲೆಕ್ನಿಕ್ ಬಸ್‍ಗಳ ಸೇವೆ ಆರಂಭಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ. ಇದು ಕರ್ನಾಟಕದಲ್ಲಿ ಎರಡು ನಗರಗಳ ನಡುವೆ ಆರಂಭವಾಗಲಿರುವ ಮೊದಲ ಎಲೆಕ್ಟ್ರಿಕಲ್ ಬಸ್ ಮಾರ್ಗವಾಗಲಿದೆ.

ನಂತರದ ದಿನಗಳಲ್ಲಿ ಬೆಂಗಳೂರಿನಿಂದ ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಗರಗಳಿಗೂ ಎಲೆಕ್ಟ್ರಿಕ್ ಬಸ್ಗಳು ಸಂಚರಿಸಲಿವೆ. ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಮೈಸೂರು ಬಸ್ ನಿಲ್ದಾಣದಲ್ಲಿ ಬಸ್ ಚಾರ್ಜಿಂಗ್ ಯೂನಿಟ್ ಸ್ಥಾಪಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ.

ಕೆಎಸ್ಆರ್‌ಟಿಸಿಯು ಹೊಸ ಮಾದರಿಯ ವೋಲೊ 9600 ಮಾಡೆಲ್ನ ಬಿಎಸ-6 ಮಾನದಂಡವನ್ನು ಪೂರೈಸುವ 20 ಅತ್ಯಾಧುನಿಕ ಯೂರೋಪಿಯನ್ ಶೈಲಿಯ ಬಸ್‍ಗಳನ್ನು ರಸ್ತೆಗೆ ಇಳಿಸಲಿದೆ.ಈ ಬಸ್‍ಗಳು 15 ಮೀಟರ್(50 ಅಡಿ) ಉದ್ದವಿದ್ದು, 40 ಬರ್ತ್‍ಗಳನ್ನು ಹೊಂದಿರಲಿದೆ.

ಈ ಬಸ್‍ಗಳಲ್ಲಿ ಪ್ರತಿ ಬರ್ತ್‍ಗೆ ಪ್ರತ್ಯೇಕ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್, ಎಸಿ ನಳಿಕೆಗಳು ಮತ್ತು ರೀಡಿಂಗ್ ಲೈಟ್ ವ್ಯವಸ್ಥೆ ಇರಲಿದೆ.ಮೈಸೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಹೆಚ್ಚು ಅನುಕೂಲವಾಗಲಿದೆ.

ಸುಮಾರು 150 ಕಿಮೀ ದೂರ ಪ್ರಯಾಣವನ್ನು ಬೆಳೆಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈಗಾಗಲೇ ಹೈದರಾಬಾದ್ ಮೂಲದ ಒಲೆಕ್ಟ್ರ ಗ್ರೀನ್‍ಟೆಕ್‍ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 25 ಇ-ಬಸ್ ಗಳನ್ನು ಖರೀದಿಸುವ ನಿರೀಕ್ಷೆಯಿದೆ.

ಫೆಬ್ರವರಿ ಅಂತ್ಯದ ವೇಳೆಗೆ ಇನ್ನೂ 25 ಇ-ಬಸ್‍ಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೆಎಸ್ಆರ್‌ಟಿಸಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಾದ ದಾವಣಗೆರೆ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗಳಿಗೆ ಸಂಪರ್ಕಿಸಲು ಇ-ಬಸ್‍ಗಳ ಯೋಜನೆ ರೂಪಿಸಲಾಗಿದೆ.

ಈ ಮಧ್ಯೆ ಇ-ಬಸ್‍ಗಳಿಗೆ ವಿಶೇಷವಾಗಿ ಹೆಸರು ಮತ್ತು ಟ್ಯಾಗ್‍ಲೈನ್ ಸೂಚಿಸಲು ರಾಜ್ಯ ಸಾರಿಗೆ ಸಂಸ್ಥೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದೆ.

ವಿಶೇಷ ಹೆಸರು ಸೂಚಿಸಿದವರಿಗೆ ಪ್ರತಿ ಮಾದರಿಯ ವಾಹನಗಳಿಗೆ ಸೂಚಿಸುವ ಟ್ಯಾಗ್‍ಲೈನ್, ಬ್ರಾಂಡ್ ನೇಮ್‍ಗೆ ತಲಾ 10 ಸಾವಿರ ನಗದು ಬಹುಮಾನ, ಗ್ರಾಫಿಕ್ ವಿನ್ಯಾಸಕ್ಕೆ 25,000 ನೀಡಲಾಗುವುದು ಮತ್ತು ಹೆಸರು ನೀಡುವುದಕ್ಕೆ 10,000 ಘೋಷಣೆ ಮಾಡಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button