
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 200 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳು, ಆಟೊ, ಟ್ರ್ಯಾಕ್ಟರ್, ಎತ್ತಿನಗಾಡಿ ಸಂಚಾರಕ್ಕೆ ನಿರ್ಬಂಧ ವಿಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.
200 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳು, ಆಟೊ, ಟ್ರ್ಯಾಕ್ಟರ್, ಎತ್ತಿನಗಾಡಿ ಮುಂತಾದ ವಾಹನಗಳಿಗೆ ಹೆದ್ದಾರಿಯಲ್ಲಿ ನಿರ್ಬಂಧ ವಿಧಿಸಿ ಈ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುತ್ತದೆ.
ವಾಹನಗಳ ನಿರ್ಬಂಧಕ್ಕಾಗಿ ರಸ್ತೆಯ ಎರಡೂ ಬದಿ 6 ಅಡಿ ಎತ್ತರದ ತಂತಿ ಬೇಲಿ ಹಾಕಲಾಗುವುದು.
ಇದರಿಂದ ಜಾನುವಾರುಗಳು ರಸ್ತೆಗೆ ನುಗ್ಗುವುದು ತಪ್ಪಲಿದ್ದು, ಅಪಘಾತಗಳೂ ಕಡಿಮೆ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ಹೆದ್ದಾರಿ ಕಾಮಗಾರಿಯಲ್ಲಿ ಹಲವು ನವೀನ ಬಗೆಯ ತಂತ್ರಜ್ಞಾನವನ್ನು ಬಳಸಲಾಗಿದೆ. ರಸ್ತೆಗೆ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸ್ಪೈನ್ ಅಂಡ್ ವಿಂಗ್ ಸೆಂಗ್‌ಮೆಂಟ್ ತಂತ್ರಜ್ಞಾನ ಬಳಸಿದ್ದು, ವಾಹನಗಳು ಹೆಚ್ಚು ಅಲುಗಾಡುವುದು ತಪ್ಪಲಿದೆ.
ಹೆದ್ದಾರಿಯಲ್ಲಿ ಪ್ರತಿ ಎರಡು ಕಿ.ಮೀ. ಗೆ ಒಂದು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಪ್ರತಿ 5 ಕಿ.ಮೀ. ಗೆ ಕ್ಲೋಸ್ಡ್ ಯೂಟರ್ನ್ ಸಿಗಲಿದೆ.
ಹೊಸ ಹೆದ್ದಾರಿಯಿಂದ ಟ್ರಾಫಿಕ್ ಕಿರಿಕಿರಿ ತಪ್ಪಲಿದ್ದು, ಬೈಪಾಸ್‌ಗಳಿಂದಾಗಿ ಸದ್ಯ ಈ ನಗರಗಳ ನಡುವಿನ ಪ್ರಯಾಣದ ಅವಧಿ ಸರಾಸರಿ 90 ನಿಮಿಷಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೆ.ಇದರ ಎಡಬಲದಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ಸಹ ನಿರ್ಮಾಣ ಆಗುತ್ತಿದೆ. ಪ್ರತಿ 5 ಕಿ.ಮೀ. ಗೆ ಕ್ಲೋಸ್ಡ್ ಯೂಟರ್ನ್ ಸಿಗಲಿದೆ.