ಪೊಲೀಸ್
ಬೆಂಗಳೂರು: ಜೂಜಾಟದ ವೇಳೆ ಸಿಸಿಬಿ ದಾಳಿ: 10 ಮಂದಿ ಬಂಧನ, 1.50 ಲಕ್ಷ ರೂ. ಹಣ ಜಪ್ತಿ

ಬೆಂಗಳೂರು: ನಗರದ ಬನಶಂಕರಿ 3ನೇ ಹಂತದ ವೀರಭದ್ರನಗರದಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, 1.50 ಲಕ್ಷ ರೂ.
ಹಣ ಜಪ್ತಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಇಲ್ಲಿನ 100 ಅಡಿ ರಸ್ತೆಯ ಕಟ್ಟಡವೊಂದರಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಜೂಜಾಟವಾಡುತ್ತಿದ್ದರು.ಈ ಮಾಹಿತಿ ಬರುತ್ತಿದ್ದಂತೆ ನಾವು ಅಲ್ಲಿ ದಾಳಿ ನಡೆಸಿದೆವು. ಈ ವೇಳೆ 10 ಮಂದಿಯನ್ನು ವಶಕ್ಕೆ ಪಡೆದೆವು. ಅವರೊಂದಿಗೆ 1.50 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದೇವೆ ಎಂದು ಸಿಸಿಬಿ ಪೊಲೀಸರು ಹೇಳಿದರು.