Uncategorized
ಬೆಂಗಳೂರು: ಕೊಲೆ ಸಂಚು ರೂಪಿಸಿದ್ದ ರೌಡಿಶೀಟರ್ ಬಂಧನ

ಪಿಸ್ತೂಲ್ ಹಿಡಿದು ಕೊಲೆಗೆ ಹೊಂಚು ಹಾಕುತ್ತಿದ್ದ ರೌಡಿಶೀಟರ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪುಲಿಕೇಶಿನಗರ ರೌಡಿಶೀಟರ್ ಸೈಯದ್ ಸುಭಾನ್ ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿತ್ತು.ಆದರ್ಶನಗರದ ರಾಘವೇಂದ್ರ ಸ್ಟೋರ್ಸ್ ಬಳಿ ಹೊಂಚು ಹಾಕಿದ್ದ ರೌಡಿ ಸೈಯದ್ ಸುಭಾನ್‌ನ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಸಂಘಟಿತ ಅಪರಾಧ ವಿಭಾಗ ಅಧಿಕಾರಿಗಳು ಈತನ ಹೆಡೆಮುರಿ ಕಟ್ಟಿದ್ದಾರೆ.
4 ಪ್ರಕರಣದಲ್ಲಿ ವಾರೆಂಟ್ ಇಶ್ಯೂ ಆಗಿದ್ರೂ ತಲೆ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಸೈಯದ್ ಸುಭಾನ್ ನಾಡ ಪಿಸ್ತೂಲ್ ಇಟ್ಟುಕೊಂಡು ಮತ್ತೊಂದು ಕೊಲೆಗೆ ಸ್ಕೆಚ್ ಹಾಕಿದ್ದ.
ಸದ್ಯ ಆರೋಪಿ ಬಂಧಿಸಿ ಒಂದು ನಾಡಪಿಸ್ತೂಲು ಹಾಗೂ ಐದು ಜೀವಂತ ಗುಂಡುಗಳನ್ನು ಸೀಜ್ ಮಾಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯ ಬಂಧನವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.