ಬೆಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಪ್ರತಾಪ್ ರೆಡ್ಡಿ!

ಬೆಂಗಳೂರು: ರಾಜಧಾನಿಯ ನೂತನ ಪೊಲೀಸ್ ಆಯುಕ್ತರಾಗಿ ನಮೇಕವಾದ ಎಡಿಜಿಪಿ ಸಿ.ಎಚ್.ಪ್ರತಾಪ್ ರೆಡ್ಡಿ ಅವರಿಗೆ ನಿರ್ಗಮಿತ ಕಮಿಷನರ್ ಕಮಲ್ ಪಂತ್ ಅವರು ಮಂಗಳವಾರ ಅಧಿಕಾರ ಹಸ್ತಾಂತರಿಸಿದರು.1991ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮೂಲದ ಪ್ರತಾಪ್‌ರೆಡ್ಡಿ, ಬೆಂಗಳೂರು ನಗರದ 35ನೇ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದರು.
ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರದ ಎಲ್ಲ ಡಿಸಿಪಿಗಳು ಉಪಸ್ಥಿತರಿದ್ದರು.ಬೆಂಗಳೂರಿನ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಆಯಂಡ್ ಸರ್ವೀಸಸ್ ಕಂಪನೀಸ್ (ಸೈಬರ್ ಸೆಕ್ಯೂರಿಟಿ ವಿಂಗ್) ಸಲಹೆಗಾರರಾಗಿ ಪ್ರತಾಪ್‌ರೆಡ್ಡಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದರು.
ಕೆಲ ಕಾಲ ಸೈಬರ್ ಸೆಕ್ಯೂರಿಟಿ ವಿಭಾಗದ ನಿರ್ದೇಶಕರಾಗಿದ್ದರು. ತಾಂತ್ರಿಕ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ವಿರಳ ಐಪಿಎಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ವಿಜಯಪುರ, ಕಲಬುರಗಿಯಲ್ಲಿ ಎಸ್‌ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.