ಬೆಂಗಳೂರು ಏರ್‌ಪೋರ್ಟ್ ಮೆಟ್ರೋ ಕಾಮಗಾರಿ ಆರಂಭ..

ಬೆಂಗಳೂರು: ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಕಾಮಗಾರಿ ಆರಂಭವಾಗಿದ್ದು, ಎಂಎಸ್ ರಾಮಯ್ಯ ಗೇಟ್ ನಿಂದ ಟರ್ಮಿನಲ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಭಾಗವೊಂದರಲ್ಲಿ ಬಿಎಂಆರ್ ಸಿಎಲ್ ಬ್ಯಾರಿಕೇಡ್ ಹಾಕಲಿದ್ದು, ಸೋಮವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವವರು ಬೇರೆ ರಸ್ತೆಯಿಂದ ಹೋಗಬೇಕಾಗಿದೆ. ಮತ್ತೊಂದು ಬೆಳವಣಿಗೆಯೊಂದರಲ್ಲಿ ಟರ್ಮಿನಲ್ 2 ಇರುವ ವಿಮಾನ ನಿಲ್ದಾಣದ ಒಳಗಡೆ ಮಾತ್ರ ಮೆಟ್ರೋ ಈಗ ಕೆಲಸ ಆರಂಭಿಸಿದೆ. ಹೊರ ವರ್ತುಲ ರಸ್ತೆ ಮತ್ತು ಕೆಆರ್ ಪುರಂ ನಿಂದ ಏರ್ ಫೋರ್ಟ್ ಮಾರ್ಗವನ್ನೊಳಗೊಂಡ ಮೆಟ್ರೋ ನೀಲಿ ಮಾರ್ಗ ಒಟ್ಟಾರೇ 55.8 ಕಿ.ಮೀ. ದೂರವಿದೆ.ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಆರಂಭವಾಗಿ ಕೆಐಎನಲ್ಲಿ ಕೊನೆಯಾಗಲಿದೆ. ಈ ಮಾರ್ಗದಲ್ಲಿ 32 ನಿಲ್ದಾಣಗಳು ಬರಲಿವೆ. ಇದರಲ್ಲಿ ಕೊನೆಯ ಎರಡು ನಿಲ್ದಾಣಗಳಾದ ಏರ್‌ಪೋರ್ಟ್ ಸಿಟಿ ಮತ್ತು ಕೆಐಎ ಟರ್ಮಿನಲ್ ಅನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನಿರ್ಮಿಸಲಿದೆ.ಎಂಎಸ್ ರಾಮಯ್ಯ ಗೇಟ್ ಮಧ್ಯದಿಂದ ಬ್ಯಾರಿಕೇಡ್ ಹಾಕಲಾಗುವುದು, ಇವುಗಳು 13 ಮೀಟರ್ ಅಗಲ ಹೊಂದಿರುತ್ತವೆ. ಈ ಬ್ಯಾರಿಕೇಡ್ ಒಳಗಡೆ ನಮ್ಮ ನಿರ್ಮಾಣದ ವಾಹನ ತೆರಳಲು ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಿದೆ ಎಂದು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಯೊಬ್ಬರು NCIB ಗೆ ತಿಳಿಸಿದ್ದಾರೆ.ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, ವಿಮಾನ ನಿಲ್ದಾಣದ ಪ್ರದೇಶದಲ್ಲಿ ಕಾಮಗಾರಿ ಗುರುವಾರ ಆರಂಭವಾಗಿದೆ. ನಾವು ಮುಖ್ಯವಾಗಿ ಟರ್ಮಿನಲ್ 2 ರ ಸಮೀಪದಲ್ಲಿ ಕೆಲಸ ಆರಂಭಿಸಿದ್ದೇವೆ. ಏರ್ ಫೋರ್ಟ್ ನಿಲ್ದಾಣವನ್ನು ಬಿಐಎಎಲ್ ನಿರ್ಮಿಸಲಿದೆ ಎಂದು ಅವರು ಹೇಳಿದರು. NCIB TIMES ಬೆಂಗಳೂರು.
