
10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಮುಚ್ಚಲು ಕನಿಷ್ಟ ಎರಡು ವಾರಗಳ ಕಾಲಾವಕಾಶದ ಅಗತ್ಯವಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.ರಸ್ತೆ ಗುಂಡಿಗಳನ್ನು ಮುಚ್ಚುವುದು ಬಿಬಿಎಂಪಿಗೆ ಸದ್ಯದ ಅಗತ್ಯವಾಗಿದ್ದು, ಅವುಗಳನ್ನು ಮುಚ್ಚಲು ಪಾಲಿಕೆ ಮುಂದಾಗಿದೆ. 10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. 202 ರಸ್ತೆ ಗುಂಡುಗಳು ಗಂಭೀರ ಸ್ವರೂಪದ ಗುಂಡಿಗಳು ಎಂದು ಗುರುತಿಸಲಾಗಿದ್ದು, ಈ ಗುಂಡಿಗಳನ್ನು ಮುಚ್ಚಲು ದೀರ್ಘಾವ ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.
ರಸ್ತೆ ಗುಂಡಿ ನಿರ್ವಹಣೆಗೆ ಎಇಇ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ದೂರು ನೀಡಲು ಸೂಚನೆ ನೀಡಲಾಗಿದೆ.ಆ ಮೂಲಕ ಬಂದ ದೂರನ್ನು ಪರಿಗಣಿಸಿ ಬಿಬಿಎಂಪಿ ಕಾರ್ಯೋನ್ಮುಖವಾಗುತ್ತಿದೆ ಎಂದು ಅವರು ಹೇಳಿದರು.
ಈಸ್ಟ್ ವಲಯದಲ್ಲಿ 2295 ರಸ್ತೆ ಗುಂಡಿಗಳಿವೆ. ಸದ್ಯ ನಗರ ದಲ್ಲಿ ಮಳೆ ಮುನ್ಸೂಚನೆ ಇದೆ. ಮುಂಗಾರು ಮಳೆ ಬರುವ ಸಾಧ್ಯತೆ ಇದೆ. ಇದರೊಳಗಾಗಿ ರಸ್ತೆ ಗುಂಡಿ ಮುಚ್ಚುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.