ಬೆಂಗಳೂರು
ಬೆಂಗಳೂರಿನ ಮಳೆ ಅವಾಂತರ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ, ಬಿಬಿಎಂಪಿ ಕಂಟ್ರೋಲ್ ರೂಂ ಸ್ಥಾಪನೆ: ಸಿಎಂ ಬೊಮ್ಮಾಯಿ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವಾರು ಕಡೆಗಳಲ್ಲಿ 100 ಮಿಲಿ ಮೀಟರ್ ಗಿಂತ ಜಾಸ್ತಿ ಮಳೆ ಸುರಿದಿದೆ. 90 ಮಿಲಿ ಮೀಟರ್ ಮಳೆ ಬಿದ್ದಾಗಲೇ ಬೆಂಗಳೂರಿಗೆ ಆತಂಕವಾಗುತ್ತದೆ. ಅಂತಹುದರಲ್ಲಿ ನಿನ್ನೆ 100 ಮಿಲಿ ಮೀಟರ್ ಗಿಂತ ಹೆಚ್ಚು ಬಿದ್ದಿರುವುದು ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕೆಲಸಕ್ಕೆ ಆದೇಶ ನೀಡಿದ್ದು ಇಂದು ಮುಂಜಾನೆಯಿಂದಲೇ ನಡೆಯುತ್ತಿವೆ. ಖುದ್ದು ಬಿಬಿಎಂಪಿ ಆಯುಕ್ತರೇ ಕೆಲಸದ ಮೇಲ್ವಿಚಾರಣೆ ನೋಡುತ್ತಿದ್ದಾರೆ.ಈಗಾಗಲೇ ಬಿಬಿಎಂಪಿಯಿಂದ ಕಂಟ್ರೋಲ್ ರೂಂ ಸ್ಥಾಪನೆ ಮಾಡಲು ಹೇಳಿದ್ದೇವೆ ಎಂದರು.