ಬೆಂಗಳೂರಿನ ಪ್ರೇಮಿಗಳು ಉಡುಪಿಯಲ್ಲಿ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯಾವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರಿನ ಪ್ರೇಮಿಗಳು ಉಡುಪಿಯಲ್ಲಿ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯಾವಿದ್ರಾವಕ ಘಟನೆ ಭಾನವಾರ ನಡೆದಿದೆ.
ಮೇ 18ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದ ಮುನಿಯಪ್ಪ ಲೇಔಟ್ ನಿವಾಸಿ ಯಶವಂತ (24) ಮತ್ತು ಚೋಳನಯಾಕನಹಳ್ಳಿ ನಿವಾಸಿ ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಯಶವಂತ್ ಹಾಗೂ ಜ್ಯೋತಿ ಉಡುಪಿಯ ಮಂದಾತ್ರಿಯ ಹೆಗ್ಗುಂಜೆ ಬಳಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ತಬ್ಬಿಕೊಂಡ ಸ್ಥಿತಿಯಲ್ಲಿ ಇಬ್ಬರ ದೇಹ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದೆ.
ಕಳೆದ ವರ್ಷ ಬಿಕಾಂ ಮುಗಿಸಿ ಮನೆಯಲ್ಲಿದ್ದ ಜ್ಯೋತಿ ಹಾಗೂ ಇಂಟರ್ ವ್ಯೂಗೆ ಹೋಗ್ತೀನಿ ಅಂತ ಮನೆಯಿಂದ ಹೊರಗೆ ಹೋಗಿದ್ದರೆ, ಕ್ಲಾಸ್ ಗೆ ಹೋಗಿ ಬರ್ತೀನಿ ಎಂದು ಯಶವಂತ ಮನೆಯಿಂದ ಹೊರಗೆ ಹೋಗಿದ್ದ.
ಮೇ 19ರಂದು ಯುವತಿ ಕಡೆಯವರು ಹಾಗೂ ಮೇ 20ರಂದು ಹುಡುಗನ ಕುಟುಂಬದವರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ನಿನ್ನೆ ಮಧ್ಯಾಹ್ನ ಸ್ನೇಹಿತನ ಕಾರು ಪಡೆದು ಹೊರಗೆ ಹೋಗಿದ್ದ ಯಶವಂತ್ ಮತ್ತು ಜ್ಯೋತಿ ಬೆಂಕಿ ಹಚ್ಚಿಕೊಂಡು ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಇಬ್ಬರೂ ಕುಟುಂಬದವರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದೇಶ ಕಳುಹಿಸಿದ್ದಾರೆ.