ಬೆಂಗಳೂರು

ಬೆಂಗಳೂರಿನಲ್ಲಿ ಶೇ.35ರಷ್ಟು ಕೆರೆ ಜಲಚರ ವಾಸಕ್ಕೆ ಅಯೋಗ್ಯ; ಕೆಎಸ್‌ಪಿಸಿಬಿ ಬಹಿರಂಗ

ಬೆಂಗಳೂರು: ರಾಜಧಾನಿಯ ಶೇ.35ರಷ್ಟು ಕೆರೆಗಳು ತೀವ್ರ ಕಲುಷಿತಗೊಂಡಿದ್ದು, ಜಲಚರಗಳ ವಾಸಕ್ಕೂ ಯೋಗ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸಿದ ವಿಶ್ಲೇಷಣೆ ವೇಳೆ ದೃಢಪಟ್ಟಿದೆ.

ಕೆಎಸ್‌ಪಿಸಿಬಿ ವಿಶ್ಲೇಷಣೆ ಪ್ರಕಾರ, ನಗರದ 36 ಕೆರೆಗಳು ಜಲಚರಗಳ ವಾಸಕ್ಕೆ ಯೋಗ್ಯವಾಗಿಲ್ಲ. ಈ ಕೆರೆ ನೀರನ್ನು ನೀರಾವರಿ, ಕೈಗಾರಿಕೆಗಳಲ್ಲಿ ಕೂಲಿಂಗ್‌ ನಿಯಂತ್ರಣಕ್ಕೆ ಮಾತ್ರ ಬಳಸಬಹುದು ಎಂದು ಸಲಹೆ ಮಾಡಿದೆ.

ಕೆಎಸ್‌ಪಿಸಿಬಿ ಕರ್ನಾಟಕದಲ್ಲಿ 278 ಕೆರೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅವುಗಳಲ್ಲಿ 106 ಕೆರೆಗಳು ಬೆಂಗಳೂರಿನಲ್ಲಿವೆ. ಪ್ರತಿ ತಿಂಗಳು ರಾಜಧಾನಿಯ ಎಲ್ಲ ಕೆರೆಗಳ ನೀರಿನ ಗುಣಮಟ್ಟ ಪರಿಶೀಲಿಸಲಾಗುತ್ತದೆ.

ಮಾಹಿತಿಯ ಪ್ರಕಾರ, ನಗರದ ಶೇ.35ರಷ್ಟು ಕೆರೆಗಳ ಗುಣಮಟ್ಟವು ಮೀನುಗಳಿಗೆ ಅಪಾಯಕಾರಿಯಾಗಿದೆ. 2017ರಿಂದ 2022ರ ನಡುವೆ ಬೆಂಗಳೂರಿನಲ್ಲಿ ಒಟ್ಟು 32 ಮೀನುಗಳ ಸಾವಿನ ಘಟನೆಗಳು ವರದಿಯಾಗಿವೆ. ಇದು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಕೆಎಸ್‌ಪಿಸಿಬಿ ಅಂಕಿ- ಅಂಶಗಳ ಪ್ರಕಾರ, ಈ ವರ್ಷದ ಏಪ್ರಿಲ್‌ನಲ್ಲಿ 33 ಕೆರೆಗಳು ‘ಇ -ಕೆಟಗರಿ’ಯಲ್ಲಿದ್ದು, ಮೀನು ಸೇರಿ ಇತರೆ ಜಚಲರಗಳ ವಾಸಕ್ಕೆ ಪೂರಕವಾಗಿರಲಿಲ್ಲ.

ಜೂನ್‌ನಲ್ಲಿ ಈ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದರೆ, ಜುಲೈನಲ್ಲಿ 36 ಕ್ಕೆ ಕುಸಿದಿದೆ. ಉಳಿದ ಜಲಮೂಲಗಳು ‘ಡಿ’ ವರ್ಗದಲ್ಲಿವೆ. ಇವುಗಳನ್ನು ಜೀವವೈವಿಧ್ಯ ಸಂರಕ್ಷಣೆಗೆ ಮತ್ತು ಮೀನುಗಾರಿಕೆಗೆ ಬಳಸಿಕೊಳ್ಳಬಹುದು.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಗಳ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತದೆ.

ಅದರ ಫಲಿತಾಂಶದ ಆಧಾರದಲ್ಲಿ’ಎ’ ವರ್ಗದ ಕೆರೆ ನೀರನ್ನು ಸಂಸ್ಕರಣೆಗೊಳಪಡಿಸದೆಯೇ ಕುಡಿಯಬಹುದು. ಬಿವರ್ಗದ ಕೆರೆಗಳ ನೀರನ್ನು ಸ್ನಾನಕ್ಕೆ ಬಳಸಬಹುದು.

‘ಸಿ’ ವರ್ಗದ ಕೆರೆಗಳ ನೀರನ್ನು ಸಂಸ್ಕರಣೆಗೊಳಪಡಿಸಿ ಕುಡಿಯಬಹುದು ಮತ್ತು ‘ಡಿ’ ವರ್ಗದ ನೀರನ್ನು ಜೀವಿವೈವಿಧ್ಯ, ಮೀನುಗಾರಿಕೆಗೆ ಬಳಸಬಹುದು. ‘ಇ’ ವರ್ಗದ ನೀರನ್ನು ನೀರಾವರಿ, ಕೈಗಾರಿಕೆಗಳಲ್ಲಿ ಕೂಲಿಂಗ್‌ ನಿಯಂತ್ರಣಕ್ಕೆ ಮಾತ್ರ ಬಳಸಬಹುದು ಎಂದು ವರ್ಗೀಕರಿಸಲಾಗಿದೆ.

ನಗರದ ಪ್ರಸಿದ್ಧ ಕೆರೆಗಳಾದ ಸಾರಕ್ಕಿ, ಹಲಸೂರು, ಎಲೆಮಲ್ಲಪ್ಪ, ಲಾಲ್‌ಬಾಗ್‌ ಮತ್ತು ಹೇರೋಹಳ್ಳಿ ಕೆರೆಗಳು ಮೂರು ತಿಂಗಳಿಂದ ನಿರಂತರವಾಗಿ ವರ್ಗ ‘ಇ ‘ಯಲ್ಲಿವೆ. ಇವುಗಳ ಜತೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂವತ್ತೆರಡು ಕೆರೆಗಳು ‘ಇ’ ವರ್ಗದಲ್ಲಿ ಕಾಣಿಸಿಕೊಂಡಿವೆ.

ಕೆರೆಗೆ ಮಾಲಿನ್ಯಕಾರಕ ಸೇರದಂತೆ ಎಚ್ಚರ ವಹಿಸಲಿಕೆರೆಗಳಲ್ಲಿ ಮೀನುಗಳ ಸಾವು ಹಾಗೂ ಕೆರೆಯ ನೀರಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುತ್ತಿರುವ ಕೆರೆ ರಕ್ಷಣೆಯ ಕಾರ್ಯಕರ್ತ ರಾಘವೇಂದ್ರ ಪಚ್ಚಾಪುರ ಮಾತನಾಡಿ

” ಬಿಬಿಎಂಪಿ ಆದ್ಯತೆಯ ಮೇಲೆ ಈ ಕೆರೆಗಳಿಗೆ ಭೇಟಿ ನೀಡಬೇಕು ಮತ್ತು ಈ ಜಲಮೂಲಗಳಿಗೆ ಯಾವುದೇ ನೇರ ಮಾಲಿನ್ಯಕಾರಕ ಸೇರದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಅಂತಹ ನೀರು ಹರಿಯುತ್ತಿದ್ದರೆ ತಕ್ಷಣವೇ ಅದನ್ನು ತಡೆಯಬೇಕು” ಎನ್ನುತ್ತಾರೆ.

ರಾಜಕಾಲುವೆಗಳಲ್ಲಿ ಕೆರೆಗೆ ಹರಿದು ಬರುವ ಕೊಳಚೆ ನೀರು ಹೂಳು, ಮಾಲಿನ್ಯಕಾರಕಗಳನ್ನು ಮತ್ತು ಪೋಷಕಾಂಶಗಳನ್ನು ಜಲಮೂಲಗಳಿಗೆ ತಂದು ಸೇರಿಸುತ್ತಿದೆ. ಇದು ನೀರಿನ ಗುಣಮಟ್ಟವನ್ನು ಹದಗೆಡಿಸುತ್ತದೆ.

ಅಸಹಜ ಪ್ರಮಾಣದಲ್ಲಿ ಕೆರೆ ಸೇರುವ ಸಾವಯವ ಪೋಷಕಾಂಶಗಳು ಕೆರೆಯಲ್ಲಿ ಕಳೆ ಸಸ್ಯ ಬೆಳೆಯುವುದಕ್ಕೆ ಕಾರಣವಾಗುತ್ತಿವೆ. ಕೆರೆಯ ಪರಿಸರ ವ್ಯವಸ್ಥೆ ಹದಗೆಡುವಂತೆ ಮಾಡುತ್ತಿವೆ” ಎಂದು ಹೇಳಿದರು.

ಕೆರೆಗಳಲ್ಲಿ ನೀರು ಕಲುಷಿತವಾಗುತ್ತಿರುವುದಕ್ಕೆ ಕಾರಣ ಗುರುತಿಸಲು ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಕಾರ್ಯಕರ್ತರು ಕಾನೂನು ಕ್ರಮ ಕೈಗೊಳ್ಳದೆ ಬೇರೆ ದಾರಿಯಿಲ್ಲ.

ಕಸ ಅಸಮರ್ಪಕ ವಿಲೇವಾರಿಕಸ ವಿಲೇವಾರಿ ಅವ್ಯವಸ್ಥೆ ಕೆರೆಗಳು ಕಲುಷಿತವಾಗಲು ಪ್ರಮುಖ ಕಾರಣವಾಗುತ್ತಿದೆ. ಕೆರೆಗಳು ಡಂಪಿಂಗ್‌ ಯಾರ್ಡ್‌ಗಳಂತೆ ಬಳಕೆಯಾಗುತ್ತಿವೆ.

ಮನೆ ಕಸ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಆಹಾರ ತ್ಯಾಜ್ಯ ಜತೆಗೆ ಪ್ರಾಣಿಗಳ ತ್ಯಾಜ್ಯ, ಕೈಗಾರಿಕೆಗಳ ಕಸವನ್ನೂ ಗುಟ್ಟಾಗಿ ತಂದು ಕೆರೆ ಒಡಲಿಗೆ ಸುರಿಯಲಾಗುತ್ತಿದೆ.

ಜಲಚರಗಳ ವಾಸಕ್ಕೆ ಯೋಗ್ಯವಲ್ಲದ ಕೆರೆಗಳು

ಕೆಂಗೇರಿ ಕೆರೆ@2ಮಾಚೋಹಳ್ಳಿ ಕೆರೆ@3ಕಾಚೋಹಳ್ಳಿ ಕೆರೆ@4ಆಂದ್ರಹಳ್ಳಿ ಕೆರೆ@5ಹೇರೋಹಳ್ಳಿ ಕೆರೆ@6ಹಲಸೂರು ಕೆರೆ@7ಸಾರಕ್ಕಿ ಕೆರೆ@8ಯಡಿಯೂರು ಕೆರೆ@9ಲಾಲ್‌ಬಾಗ್‌ ಕೆರೆ@10ಚಂದಾಪುರ ಕೆರೆ@11ರಾಯಸಂದ್ರ ಕೆರೆ@12ಕಮ್ಮಸಂದ್ರ ಕೆರೆ@13ಎಲೆಮಲ್ಲಪ್ಪ ಕೆರೆ@14ಉಳ್ಳಾಲ ಕೆರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button