ಅಪರಾಧ
ಬೆಂಗಳೂರಿನಲ್ಲಿ ಮಾಜಿ ಶಾಸಕ ಮನೆ ಹಿಂದೆಯೇ ಗಾಂಜಾ ಬೆಳೆದ ಕಿಡಿಗೇಡಿಗಳು!

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆ ಹಿಂಭಾಗದಲ್ಲೇ ಕಿಡಿಗೇಡಿಗಳು ಗಾಂಜಾ ಬೆಳೆದಿದ್ದಾರೆ. ಮಾಜಿ ಶಾಸಕರ ಮನೆ ಸುತ್ತಮುತ್ತಾ ಪೊಲೀಸ್ರು ಬರಲ್ಲ, ಜೊತೆ ಖಾಲಿ ಜಾಗ ಬೇರೆ ಯಾರೂ ಕಣ್ಣು ಹಾಕೋಲ್ಲ ಅಂತ ಕಿಡಿಗೇಡಿಗಳು ಖಾಲಿ ನಿವೇಶನದಲ್ಲಿ ಗಾಂಜಾ ಕೃಷಿ ಮಾಡಿದ್ದಾರೆ.
ಆರ್.ಟಿ.ನಗರದ ಮಂಜುನಾಥ್ ಲೇಔಟ್ ನ ಮುಖ್ಯ ರಸ್ತೆಯಲ್ಲಿರುವ ಬೇಳೂರು ಗೋಪಾಲಕೃಷ್ಣ ನಿವೇಶನದ ಹಿಂದೆ ಗಾಂಜಾ ಗಿಡಗಳು ಫಲವತ್ತಾಗಿ ಬೆಳೆದಿದ್ವು. ಈ ಗಾಂಜಾ ಗಿಡಗಳನ್ನ ಕಂಡು ಗೋಪಾಲಕೃಷ್ಣ ಶಾಕ್ ಆಗಿದ್ದಾರೆ. ಆರ್.ಟಿ.ನಗರ ಪೊಲೀಸರಿಗೆ ಮಾಹಿತಿ ನೀಡಿ ಗಾಂಜಾ ಗಿಡಗಳನ್ನ ಪೊಲೀಸರ ಸುಪರ್ಧಿಗೆ ಒಪ್ಪಿಸಿದ್ದಾರೆ.
ಮಾಹಿತಿ ಆಧರಿಸಿ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ನಿವೇಶನ ಮಾಲೀಕರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಏರಿಯಾದಲ್ಲಿನ ಗಾಂಜಾ ಬೆಳೆದ ಕಿಡಿಗೇಡಿಗಳ ಮಾಹಿತಿಯನ್ನು ಕಲೆ ಹಾಕ್ತಿದ್ದಾರೆ.