
ಬೆಂಗಳೂರು: ತಕ್ಷಣ ಸಾಲ ನೀಡುವ ಮೊಬೈಲ್ ಆಪ್ ಕಾಲ್ ಸೆಂಟರ್ಗಳ ಮೇಲೆ ದಾಳಿ ನಡೆಸಿದ ಪುಣೆ ಸೈಬರ್ ಕ್ರೈಂ ಪೊಲೀಸರು ಬೆಂಗಳೂರಿನಲ್ಲಿ 11 ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಗೂಗಲ್ ಪ್ಲೇ ಆಪ್ ಸೇರಿದಂತೆ ವಿವಿಧೆಡೆ ಲಭ್ಯವಿರುವ ಇನ್ಸ್ಟೆಂಟ್ ಮೊಬೈಲ್ ಆಪ್ ಕಾಲ್ ಸೆಂಟರ್ ಮೇಲೆ ಮೇಲೆ ದಾಳಿ ಮಾಡಲಾಗಿದ್ದು, ಆರೋಪಿಗಳಿಂದ 70 ಲಕ್ಷ ರೂ ನಗದು ಸಿಪಿಯು ಹಾಗೂ 48 ಮೊಬೈಲ್ ಫೋನ್ಗಳನ್ನು ಸೀಜ್ ಮಾಡಲಾಗಿದೆ.
ಆರೋಪಿಗಳ ಬಳಿ ಬರೋಬ್ಬರಿ 1 ಲಕ್ಷ ಜನರ ಮಾಹಿತಿ ಲಭ್ಯವಿದ್ದು, ಗ್ರಾಹಕರು ಆಪ್ ಡೌನ್ ಲೋಡ್ ಮಾಡಿಕೊಂಡ ನಂತರ ಫೋಟೊ ಗ್ಯಾಲರಿ ಅನುಮತಿ ಕೇಳಲಾಗುತ್ತಿತ್ತು.
ಗ್ರಾಹಕರಿಂದ ಎಲ್ಲಾ ಅನುಮತಿ ಪಡೆದ ನಂತರ ಆರಂಭದಲ್ಲಿ 500 ರಿಂದ 7000 ರೂ.ವರೆಗೆ ಸಾಲ ನೀಡಲಾಗುತ್ತಿತ್ತು.
ಗ್ರಾಹಕರು ಸಾಲ ಪಡೆದ ವಾರದೊಳಗೆ ಬಡ್ಡಿ ಅಥವಾ ಅಸಲು ಪಾವತಿಸಬೇಕಿತ್ತು. ಒಂದು ವೇಳೆ ಹಣ ಮರುಪಾವತಿ ಮಾಡದಿದ್ದರೇ ಬೆದರಿಕೆ ಕರೆ ಬರರುತ್ತಿದ್ದವು.
ನಂತರ ಗ್ರಾಹಕರ ಮೊಬೈಲ್ ಗ್ಯಾಲರಿಯಿಂದ ಕದ್ದ ವೈಯಕ್ತಿಕ ಫೋಟೋಗಳನ್ನು ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಆರೋಪ ಸಹ ಲೋನ್ ಆಪ್ಗಳ ಮೇಲಿದೆ.
ಇನ್ನೂ ಪುಣೆ ಸೈಬರ್ ಪೊಲೀಸರಿಗೆ 2020ರಿಂದ 2022ರ ಅವಧಿಯಲ್ಲಿ 4700 ದೂರುಗಳು ಬಂದಿದ್ದವು. ಇದರಲ್ಲಿ ಲೋನ್ ಆಪ್ ಕಂಪನಿಗಳಿಂದ ನಿಂದನೆ ಹಾಗೂ ಬೆದರಿಕೆ ಕುರಿತು ಬಹುತೇಕ ದೂರುಗಳಿದ್ದವು.
ಪ್ರಕರಣದಲ್ಲಿ ಪುಣೆ ಪೊಲೀಸರು ಇದುವರೆಗೂ 18 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ 6 ಮಹಿಳೆಯರಿದ್ದು, ಲೋನ್ ಆಪ್ಗಳಿಂದ 1 ಲಕ್ಷ ಜನ ಸಾಲ ಪಡೆದಿದ್ದಾರೆ ಎನ್ನಲಾಗಿದೆ.