ಅಪರಾಧಬೆಂಗಳೂರುರಾಜ್ಯ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ 570 ವಿದೇಶಿಗರು! ಪತ್ತೆ ಹಚ್ಚೋದೇ ಪೊಲೀಸರಿಗೆ ಸವಾಲು

ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ 570 ವಿದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ. ಕಾನೂನು ಮೀರಿ ನಗರದಲ್ಲಿ ನೆಲೆವೂರಿರುವ ವಿದೇಶಿಗರ ಪತ್ತೆಗಾಗಿ ಈಗಾಗಲೇ ನುರಿತ ಪೊಲೀಸರ ತಂಡವನ್ನು ರಚನೆ ಮಾಡಲಾಗಿದೆ.

31-8-2022 ರ ಅಂತ್ಯಕ್ಕೆ ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಂದ 5,936 ಮಂದಿ ವಿದೇಶಿಗರು ನೆಲೆಸಿದ್ದರೆ ಶಿಕ್ಷಣ ಉದ್ದೇಶದಿಂದ ವಿವಿಧ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 3,517 ರಷ್ಟಿದ್ದಾರೆ.

ವಿಧಾನಪರಿಷತ್‌ ಸದಸ್ಯ ಡಾ. ಕೆ ಗೋವಿಂದರಾಜು ಅವರು ಕೇಳಿದ್ದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಗೃಹ ಇಲಾಖೆ ಉತ್ತರ ನೀಡಿದ್ದು, ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಅಧಿಕೃತವಾಗಿ ನೆಲೆಸಿರುವ 5,936 ಮಂದಿ ವಿದೇಶಿಗರ ಪೈಕಿ ಪಾಕಿಸ್ತಾನ ಪ್ರಜೆಗಳ ಸಂಖ್ಯೆ 4. ಇನ್ನುಳಿದಂತೆ ಅಫ್ಗಾನಿಸ್ತಾನ- 187, ಬಾಂಗ್ಲಾದೇಶ – 209 , ಬ್ರೆಜಿಲ್ – 71, ಕೆನಡಾ- 89, ಚೀನಾ- 85, ಕಾಂಗೋ – 110, ಈಜಿಫ್ಟ್ – 29, ಇಥಿಯೋಪಿಯಾ- 60, ಫ್ರಾನ್ಸ್- 101, ಘಾನಾ – 41, ಇರಾನ್ – 237, ಇಸ್ರೇಲ್ -11, ಜಪಾನ್- 348, ಕೊರಿಯಾ- 314, ಮಲೇಷಿಯಾ – 113, ನೈಜಿರಿಯಾ- 204, ಪಾಲೆಸ್ತೀನ್ – 13, ಪಿಲಿಪೈನ್‌ – 62, ಶ್ರೀಲಂಕಾ- 196, ಸುಡಾನ್- 397, ಯು.ಕೆ – 174 ಹಾಗೂ ಯುಎಸ್‌ಎ 898 ಪ್ರಜೆಗಳು ವಾಸವಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಆಗಸ್ಟ್ 2022ರ ಅಂತ್ಯಕ್ಕೆ ಒಟ್ಟು 570 ಜನ ಅಕ್ರಮ ವಿದೇಶಿ ಪ್ರಜೆಗಳು ವಾಸವಾಗಿರುವ ಬಗ್ಗೆ ಏಫ್‌ಆರ್‌ಆರ್‌ಓ ಕಚೇರಿಯಿಂದ ಮಾಹಿತಿಯನ್ನು ಪಡೆಯಲಾಗಿದೆ.

ವಿದೇಶಿ ಪ್ರಜೆಗಳನ್ನು ಪತ್ತೆ ಮಾಡುವ ಸಲುವಾಗಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ವಿಭಾಗೀಯ ಉಪ ಪೊಲೀಸ್‌ ಆಯುಕ್ತರವರುಗಳಿಗೆ ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆಯೂ ಹಾಗೂ ಬೆಂಗಳೂರು ನಗರದಲ್ಲಿ ವಿದೇಶಿ ಪ್ರಜೆಗಳು ಅನಧಿಕೃತವಾಗಿ/ ಅವಧಿ ಮೀರಿ ವಾಸವಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಲು ಠಾಣಾವಾರು ನುರಿತ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವನ್ನು ಡಿಸಿಪಿ ಹಾಗೂ ಎಸಿಪಿ ಮಾರ್ಗದರ್ಶನದಲ್ಲಿ ರಚಿಸಲಾಗಿದೆ ಎಂದು ಉತ್ತರ ನೀಡಿದೆ.

ಬೆಂಗಳೂರು ನಗರದಲ್ಲಿ ಅವಧಿ ಮೀರಿ ವಾಸವಾಗಿರುವ ವಿದೇಶಿ ಪ್ರಜೆಗಳು ಪತ್ತೆಯಾದಲ್ಲಿ ಅಂತಹ ಆರೋಪಿಗಳನ್ನು ಅವರ ದೇಶದ ವಿದೇಶಿ ಮಂತ್ರಾಲಯದ ಮೂಲಕ ಆಯಾ ದೇಶಗಳಿಗೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs)ಗೆ ಮಾಹಿತಿಯನ್ನು ನೀಡಲಾಗುತ್ತಿದೆ.

ಹಾಗೂ ಪ್ರಕರಣ ದಾಖಲಿಸಲಾದ ವಿದೇಶಿ ಪ್ರಜೆಗಳ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ foreigners Detention Centre ನಲ್ಲಿ ಇರಿಸಿ, ಪ್ರಕರಣ ಇತ್ಯರ್ಥವಾದ ನಂತರ ಗಡಿಪಾರು ನಿಯಮವನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button