ಬೆಂಗಳೂರಿಗರಿಗೆ ಬಿಗ್ ಶಾಕ್ : ಮನೆಮುಂದೆ ನಿಲ್ಲಿಸುವ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ಫಿಕ್ಸ್..!

ಹೊಸ ಪಾರ್ಕಿಂಗ್ ನೀತಿ ಜಾರಿಗೆ ಮುಂದಾಗಿರುವ ಸರ್ಕಾರ ಈ ಬಾರಿ ಮನೆ ಮಾಲೀಕರಿಗೆ ಶಾಕ್ ಕೊಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ನೀತಿ 2.0 ಜಾರಿಗೆ ತರಲು ತೀರ್ಮಾನಿಸಿರುವುದರ ಜತೆಗೆ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ.
ನಗರದ ಎಂಟು ವಲಯಗಳಿಗೂ ಹೊಸ ಪಾರ್ಕಿಂಗ್ ನೀತಿ ಅನ್ವಯಿಸಲಿದೆ.
ಏನೀದು ಹೊಸ ಪಾರ್ಕಿಂಗ್ ನೀತಿ: ಹೊಸ ಪಾರ್ಕಿಂಗ್ ನೀತಿ ಜಾರಿಯಾದರೆ, ಮನೆ ಮಾಲೀಕರು ತಮ್ಮ ವಾಹನಗಳನ್ನು ಮನೆ ಮುಂದೆ ಪಾರ್ಕಿಂಗ್ ಮಾಡುವಂತಿಲ್ಲ. ಇನ್ನು ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಬೇಕಾದರೂ ಹಣ ಪಾವತಿಸುವುದು ಅನಿವಾರ್ಯವಾಗಲಿದೆ.
ತಮ್ಮ ಮನೆಗಳಲ್ಲಿ ಕಾರ್ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದಿದ್ದರೆ ಸಾರ್ವಜನಿಕರು 3 ರಿಂದ 5 ಸಾವಿರ ಹಣ ಕೊಟ್ಟು ರಸ್ತೆ ಬದಿ ವಾಹನ ನಿಲ್ಲಿಸಲು ಪರವಾನಿಗಿ ಪಡೆಯಬೇಕಾಗುತ್ತದೆ.
ಒಟ್ಟಾರೆ ಹೊಸ ಪಾರ್ಕಿಂಗ್ ನೀತಿ ಜಾರಿಯಾದರೆ ನಗರದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳ ಪಾರ್ಕಿಂಗ್‍ಗೂ ಹಣ ವ್ಯಯಿಸುವಂತಾಗಲಿದೆ.
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ನಗರದ ಎಂಟು ವಲಯಗಳಲ್ಲೂ ಹೊಸ ಪಾರ್ಕಿಂಗ್ ನೀತಿ ಜಾರಿಗಾಗಿ ಈಗಾಗಲೇ ಬಿಬಿಎಂಪಿ ಟೆಂಡರ್ ಕರೆದಿದೆ.
ಕೆಟಿಟಿಪಿ ಕಾನೂನಿನ ಪ್ರಕಾರ ಟೆಂಡರ್‍ನಲಿ ಭಾಗವಹಿಸಲು ಬಿಡ್‍ದಾರರಿಗೆ 40 ದಿನಗಳ ಕಾಲವಕಾಶ ನೀಡಬೇಕು ಆದರೆ, ತರಾತುರಿಯಲ್ಲಿ ಟೆಂಡರ್ ಕರೆಯಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕೇವಲ 15 ದಿನಗಳ ಕಾಲ ಟೆಂಡರ್‍ನಲ್ಲಿ ಭಾಗವಹಿಸಲು ಕಾಲಾವಕಾಶ ನೀಡಿದ್ದಾರೆ.
ಈ ಹಿಂದೆ 2012ರಲ್ಲಿ ಬಿಬಿಎಂಪಿ ಕೌನ್ಸಿಲ್‍ನಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಅನುಮೋದನೆ ಪಡೆಯಲಾಗಿತ್ತು.
ಸಾಮಾನ್ಯ ಪಾರ್ಕಿಂಗ್ ಬೇಡಿಕೆಯನ್ನು ತಗ್ಗಿಸುವ ಉದ್ದೇಶದಿಂದ ಸ್ವಯಂ ಚಾಲಿತ ಮೀಟರ್ ಪಾರ್ಕಿಂಗ್ ವ್ಯವಸ್ಥೆ ತರುವುದರ ಜೊತೆಗೆ ಪಾರ್ಕಿಂಗ್‍ಶುಲ್ಕ ವಿ„ಸಲು ತೀರ್ಮಾನಿಸಲಾಗಿತ್ತು.
ಆಪ್‍ಸ್ಟ್ರೀಟ್ ಪಾರ್ಕಿಂಗ್ ಸ್ಥಳಗಳನ್ನು ಗುತ್ತಿಗೆ ನೀಡುವುದು. ಖಾಲಿ ನಿವೇಶನ ಮಾಲೀಕರನ್ನು ಪಾರ್ಕಿಂಗ್ ಸ್ಥಳಗಳನ್ನಾಗಿ ಪರಿವರ್ತಿಸಲು ಪ್ರೋತ್ಸಾಹಿಸುವುದು ಸೇರಿದಂತೆ ಹಲವಾರು ನಿಯಮಗಳನ್ನು ಜಾರಿಗೆ ತರಲಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೇ ಜಾರಿಗೆ ತರವುದಲ್ಲದೆ ಪ್ರಮುಖ 85 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಪಾವತಿ ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿತ್ತು.
ಇದೀಗ ಬೆಂಗಳೂರು ಮಹಾನಗರ ಶರವೇಗದಲ್ಲಿ ಬೆಳೆಯುತ್ತಿರುವುದರಿಂದ 2030 ರ ವೇಳೆಗೆ ವಾಹನ ದಟ್ಟಣೆ ಉಲ್ಬಣಗೊಂಡು ವಾಹನ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿರುವುದರಿಂದ ಜನರು ಸಾಮೂಹಿಕ ಸಾರಿಗೆ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವಂತೆ ಮಾಡುವ ಉದ್ದೇಶದಿಂದ 2.0 ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಶೀಘ್ರದಲ್ಲೇ ನಗರದಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬರಲಿದೆ. ಈ ಬಾರಿ ನಾವು ವ್ಯವಸ್ಥಿತವಾಗಿ ಪಾರ್ಕಿಂಗ್ ನೀತಿ ಜಾರಿಗೆ ತರುತ್ತಿದ್ದೇವೆ.
ಕಳೆದ 2020 ರಲ್ಲಿ ಜಾರಿಗೊಳಿಸಲಾಗಿದ್ದ ಶುಲ್ಕವನ್ನೇ ನಾವು ಅಂತಿಮಗೊಳಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದ ರಸ್ತೆಗಳನ್ನು ಎ.ಬಿ.ಸಿ.ಡಿ ಎಂದು ವಿಂಗಡಣೆ ಮಾಡಿ ಆಯಾ ವರ್ಗಗಳಿಗೆ ಅನ್ವಯಿಸುವಂತಹ ಶುಲ್ಕ ಜಾರಿ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.