ಅಪರಾಧ

ಬೆಂಗಳೂರಲ್ಲಿ ವಿದ್ಯಾರ್ಥಿ ಕಿಡ್ನಾಪ್ : ಕೆಲವೇ ಗಂಟೆಯಲ್ಲಿ ಆರೋಪಿ ಅರೆಸ್ಟ್, ಪೊಲೀಸರ ರೋಚಕ ಕಾರ್ಯಾಚರಣೆ

student kidnapped

ಐದನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ನೇಪಾಳ ಮೂಲದ ಗೌರವ್‍ಸಿಂಗ್ ಬಂಧಿತ ಸೆಕ್ಯೂರಿಟಿಗಾರ್ಡ್. ಬಾಲಕನನ್ನು ಅಪಹರಿಸಿ ಪರಾರಿಯಾಗಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೊರಮಾವು ನಿವಾಸಿ, ಬಿಎಂಟಿಸಿ ಚಾಲಕ ಸುಭಾಷ್ ಎಂಬುವರ 11 ವರ್ಷದ ಪುತ್ರ 5ನೇ ತರಗತಿ ಓದುತ್ತಿದ್ದು, ನಿನ್ನೆ ಸಂಜೆ ಮನೆ ಮುಂದೆ ಆಟವಾಡುತ್ತಿದ್ದಾಗ 5.30ರ ಸುಮಾರಿನಲ್ಲಿ ಮಹಿಳೆಯೊಬ್ಬರು ಬಾಲಕನನ್ನು ಅಪಹರಿಸಿಕೊಂಡು ಆಟೋದಲ್ಲಿ ಪರಾರಿಯಾಗಿ ಜಿಗಣಿಯ ಫಾರಂಹೌಸ್‍ನಲ್ಲಿ ಇಟ್ಟಿದ್ದಳು.

ರಾತ್ರಿ 8.30ರ ಸುಮಾರಿನಲ್ಲಿ ವಿದ್ಯಾರ್ಥಿಯ ತಂದೆ ಸುಭಾಷ್ ಅವರಿಗೆ ಫೋನ್ ಕರೆ ಬಂದಿದ್ದು, 50 ಲಕ್ಷ ರೂ. ನೀಡಿದರೆ ನಿಮ್ಮ ಮಗನನ್ನು ಬಿಡುವುದಾಗಿ ಹೇಳಿದ್ದಾರೆ. ಗಾಬರಿಯಾದ ಸುಭಾಷ್ ಅವರು ರಾತ್ರಿ 9.30ರ ಸುಮಾರಿನಲ್ಲಿ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ಮಗ ಅಪಹರಣವಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಭಾಷ್ ಅವರಿಗೆ ಬಂದಿದ್ದ ಫೋನ್ ಕರೆ ಆಧರಿಸಿ ತಕ್ಷಣ ಕಾರ್ಯಚರಣೆ ನಡೆಸಿ ಜಿಗಣಿಯ ಫಾರಂಹೌಸ್ ಬಳಿ ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ತೆರಳಿ ಸಿನಿಮಿಯ ರೀತಿಯಲ್ಲಿ ಕಾಂಪೌಂಡ್ ಹಾರಿ ಒಳನುಗ್ಗಿ ಬಾಲಕನನ್ನು ರಕ್ಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಸೆಕ್ಯೂರಿಟಿಗಾರ್ಡ್‍ನನ್ನು ಬಂಸಿ ಪರಾರಿಯಾಗಿರುವ ಮಹಿಳೆಗಾಗಿ ಶೋಧ ಮುಂದುವರೆಸಿದ್ದಾರೆ. ವಿದ್ಯಾರ್ಥಿ ಅಪಹರಣವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ರಕ್ಷಿಸಿ ಫೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button