ಬೆಂಗಳೂರಲ್ಲಿ ಮೈ ನಡುಗುವ ಚಳಿ

ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗಿದ್ದು, ಜನರನ್ನು ಗಡಗಡ ನಡುಗಿಸುವಂತೆ ಮಾಡಿದೆ.ಈಶಾನ್ಯ ಗಾಳಿ ಆರಂಭ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಚಳಿ ವಾತಾವರಣ ಶುರುವಾಗಿದೆ.
ರಾಜ್ಯದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಹೆಚ್ಚಿನ ಚಳಿ ಇರಲಿದೆ. ರಾಜ್ಯದ ಹಲವೆಡೆ ಏರುತ್ತಿರುವ ಚಳಿಯಿಂದ ಜನರು ಕಂಗೆಟ್ಟಿದ್ದಾರೆಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಹಂತ ಹಂತವಾಗಿ ಚಳಿ ಏರಿಕೆಯಾಗುತ್ತಿದೆ.
ಮಲೆನಾಡು ಸೇರಿದಂತೆ ಕೆಲ ಭಾಗಗಳಲ್ಲಿ ಹಗುರವಾದ ಮಳೆಯಾಗುತ್ತಿದೆ.ದೇಶದ ಪ್ರಮುಖ ನಗರಗಳ ಪೈಕಿ ಕೋಲ್ಕತ್ತದಲ್ಲಿ ಅತಿ ಕಡಿಮೆ ಉಷ್ಣಾಂಶ(೨೨.೮ ಡಿಗ್ರಿ ಸೆಲ್ಸಿಯಸ್) ದಾಖಲಾದರೆ, ಬೆಂಗಳೂರಿನಲ್ಲಿ ೨೪.೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೋಮವಾರ ದಾಖಲಾಗಿದೆ.ಕನಿಷ್ಠ ಉಷ್ಣಾಂಶ ೧೭ ಡಿಗ್ರಿ ಸೆಲ್ಸಿಯಸ್‌ಮತ್ತು ಗರಿಷ್ಠ ಉಷ್ಣಾಂಶ ೨೯ ಡಿಗ್ರಿ ಸೆಲ್ಸಿಯಸ್ ಇರಲಿದೆ.
ಅ.೨೮ರ ಬಳಿಕ ಉಷ್ಣಾಂಶ ಕೊಂಚ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನೈರುತ್ಯ ಮಾರುತಗಳು ಬೀಸುವುದು ನಿಂತಿರುವುದನ್ನು ಹವಾಮಾನ ಇಲಾಖೆ ಘೋಷಿಸಿದೆ. ಸಾಮಾನ್ಯವಾಗಿ ನೈರುತ್ಯ ಮಾರುತಗಳು ಕೊನೆಯಾಗುವ ಸಂದರ್ಭದಲ್ಲೇ ಈಶಾನ್ಯ ಮಾರುತಗಳು ಆರಂಭವಾಗುತ್ತಿವೆ.’ಗಾಳಿ ಬೀಸುವ ದಿಕ್ಕು ಬದಲಾಗಿ, ಚಳಿ ಆರಂಭವಾಗಿರುವುದು ಎಲ್ಲರ ಅನುಭವಕ್ಕೆ ಬರುತ್ತಿದೆ.
ಚಂಡಮಾರುತ ಕಡಿಮೆಯಾದ ಬಳಿಕವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ’ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಿಜೋರಾಂ, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಲಿದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ.
ಇನ್ನು ರಾಜ್ಯಕ್ಕೆ ಅಷ್ಟು ಮಳೆಯಿಲ್ಲದ್ದರೂ ಚಳಿಯ ತೀವ್ರತೆ ಹೆಚ್ಚಾಗಿರಲಿದೆ.